ರಾಯಚೂರು | ವೀರ ಹನುಮಾನ, ಈರಣ್ಣ ರುದ್ರಾಕ್ಷಿ ಅವರ ಸರಳತೆ, ಕನ್ನಡ ಕಾಳಜಿ ಎಲ್ಲರಿಗೂ ಮಾದರಿ: ಅಯ್ಯಪ್ಪಯ್ಯ ಹುಡಾ

Date:

ಸಾಹಿತಿ ವೀರ ಹನುಮಾನ, ಈರಣ್ಣ ರುದ್ರಾಕ್ಷಿ ಇವರ ಸರಳತೆ, ನಿರಂತರ ಕಾರ್ಯಶೀಲತೆ, ಸೌಜನ್ಯ ಮತ್ತು ಕನ್ನಡ ಭಾಷೆಯ ಬಗೆಗಿನ ಅಪಾರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಹೇಳಿದರು.

- Advertisement -

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ವೀರ ಹನುಮಾನ ಹಾಗೂ ಹಗಲುವೇಷ ಕಲಾವಿದ ಈರಣ್ಣ ರುದ್ರಾಕ್ಷಿ ಅವರಿಗೆ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅರಬ್ ಜನಾದೇಶ ಬದಿಗಿಟ್ಟು ನೆತನ್ಯಾಹು ಕೈಹಿಡಿಯಲು ಹೊರಟ ಐಸೆನ್‌ಕೋಟ್;...

ಇಸ್ರೇಲ್‌ನ ತ್ರಿಶಂಕು ಸಂಸತ್ತಿನಲ್ಲಿ ಅಧಿಕಾರ ಹಿಡಿಯಲು ವಿರೋಧ ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ತಮ್ಮ ಮಾತನ್ನೇ ನುಂಗಿ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮೈತ್ರಿ ಮಾತುಕತೆಗೆ ಮುಂದಾಗಿದ್ದಾರೆ. 19 ಸ್ಥಾನ ಗೆದ್ದ...

SIR ಪ್ರತಿರೋಧ – ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ!...

ಮೋದಿ ಸರ್ಕಾರ ಬ್ರಿಟಿಷರಂತೆ ಪೊಲೀಸ್‌ ಮತ್ತು ಪೊಲೀಸ್‌ ವೇಷದ ಆರ್‌ ಎಸ್‌ ಎಸ್‌, ಹಿಂದುತ್ವವಾದಿಗಳ ಹಿಂದೆ ಅವಿತು ಭಾರತದ ಯುವಜನರ ಧಮನಕ್ಕೆ ಇಳಿದಿದೆ. ಗ್ಯಾನೇಶ್‌ ಕುಮಾರ್‌ ನನ್ನು ಮೋದಿ ಮತ್ತು ಅಮಿತ್‌ ಶಾ,...

ಕೋಲ್ಕತ್ತಾ: SFI ಪುಸ್ತಕ ಮಳಿಗೆ ಮೇಲೆ ದಾಳಿ; ABVP...

ಬ್ರಿಟಿಷ್ ಆಡಳಿತದ ಪರವಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ನಿಲುವುಗಳು, ಸಂಘಪರಿವಾರದ ಸೈದ್ಧಾಂತಿಕ ಹಿನ್ನೆಲೆ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮರೆಮಾಚುವ ಪ್ರಯತ್ನಗಳ ವಿಶ್ಲೇಷಣೆ. ಪುಸ್ತಕಗಳು ಜ್ಞಾನವನ್ನು ನೀಡುತ್ತವೆ. ಇತಿಹಾಸವನ್ನು ಪರಿಚಯಿಸುತ್ತವೆ. ಪ್ರಶ್ನಿಸುವ ಮನೋಭಾವವನ್ನು...

ವೀರ ಹನುಮಾನ ಅವರೊಂದಿಗಿನ ಹಲವು ಅಕ್ಷರಗಳ ಒಡನಾಟ ಹಾಗೂ ಅವರ ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಸ್ಮರಿಸಿದರು. ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದರು.

ವೀರ ಹನುಮಾನ, ಮಾತನಾಡಿ, ತಮ್ಮ ಬದುಕಿನ ಪಯಣದ ಹೆಜ್ಜೆಗಳು, ಸಾಹಿತ್ಯಿಕ ಅನುಭವಗಳು ಹಾಗೂ ಪ್ರಶಸ್ತಿ ಲಭಿಸಿದ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ತಮ್ಮ ಸರ‍ಳ ಸಜ್ಜನಿಕೆ ಜೀವನ ಎಸ್‌ಎಫ್‌ಐ ಮತ್ತು ಸಿಪಿಐ ಸಂಘಟನೆಗಳ ಮೂಲಕ ಆರಂಭವಾಯಿತು. ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಕಡೆಗೆ ಮುಖ ಮಾಡಿದಾಗ ತಮ್ಮ ಲೇಖನದ ದಿಕ್ಕೇ ಬದಲಾಯಿತು. ತಮಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಲಭಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರಮವೂ ಇದೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಹಾಗೂ ಜಿಲ್ಲೆಯ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವಿಸ್ಮರಣೀಯ ಸಂಗತಿಗಳಾಗಿವೆ. ಈ ಎಲ್ಲ ಸಾಧನೆಗಳ ಹಿಂದೆ ಅನೇಕರು ಸಲ್ಲಿಸಿದ ಶ್ರಮ, ಸಹಕಾರ ಮತ್ತು ಪ್ರೀತಿ ಇದೆ. ಪರಿಷತ್ತಿನ ಚಟುವಟಿಕೆಗಳಿಗೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ: ರವಿಹಂಜ ಬಂಧನಕ್ಕೆ ಲಿಂಗಾಯತ ಮಹಾಸಭಾ ಆಗ್ರಹ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರ ಹನುಮಾನ ಹಾಗೂ ಈರಣ್ಣ ರುದ್ರಾಕ್ಷಿ ಅವರನ್ನು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಹಿರಿಯ ಸಾಹಿತಿ ಬಾಬು ಭಂಡಾರಿಗಲ್, ಹಿರಿಯ ಸಾಹಿತಿಗಳಾದ ಲಕ್ಷ್ಮೀದೇವಿ ಶಾಸ್ತ್ರಿ, ನಾಗಪ್ಪ ಹೊರಪ್ಯಾಟಿ, ಡಾ. ರತನ್ ಚೌಹಾಣ್, ಸೈಯ್ಯದ್ ಹಫಿಜುಲ್ಲಾ ಖಾದ್ರಿ ಹಾಗೂ ರಾವುತರಾವ್ ಬರೂರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಎಚ್.ಡಿ. ರೇವಣ್ಣ, ನಿಶ್ಚಲಾನಂದನಾಥ ಸ್ವಾಮಿಗೆ ತಿರುಗೇಟು

"ಸ್ವಾಮಿಗಳು ಬೇಕಾದರೆ ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಲಿ. ಆದರೆ ಎಚ್.ಡಿ. ಕುಮಾರಸ್ವಾಮಿಯನ್ನು. ತೆಗಳುವುದು...

ಶಿವಮೊಗ್ಗ | ಸೇತುವೆ ಮರುನಿರ್ಮಾಣ : ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಸಿದ ಜಿಲ್ಲಾ ಎಸ್‌ಪಿ

ಶಿವಮೊಗ್ಗ ನಗರದ ತುಂಗಾ ಹಳೆ ಸೇತುವೆ ತೆರವುಗೊಳಿಸಿ, ಮರುನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ,...

ಭದ್ರಾವತಿ | ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ : ಮುಖ್ಯ ಶಿಕ್ಷಕಿ ಜ್ಯೋತಿ ಎನ್

ಭದ್ರಾವತಿ, ಹಳೆ ನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭದ್ರಾವತಿ ತಾಲ್ಲೂಕು...

ಬೆಂಗಳೂರು | ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನಿಂದ ನಡೆದ ‘ಸ್ಮ್ಯಾಷ್ ಫೆಸ್ಟ್’ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿ

ಯುವಜನರಲ್ಲಿ ಕ್ರೀಡಾ ಸ್ಫೂರ್ತಿ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 'ಸೋಲಿಡಾರಿಟಿ...