ಕುಮಟಾ | ಪುರಸಭೆಯ ಮುಖ್ಯಾಧಿಕಾರಿ ಕಿರುಕುಳ ತಾಳಲಾರದೆ ಪತ್ರ ಬರೆದಿಟ್ಟು ಕಂದಾಯ ನಿರೀಕ್ಷಕ ನಾಪತ್ತೆ!

Date:

ಕುಮಟಾ ಪುರಸಭೆಯ ಮುಖ್ಯಾಧಿಕಾರಿಗಳು ಕಿರುಕುಳ ಮತ್ತು ಅಕ್ರಮವಾಗಿ ಖಾತಾ ಬದಲಾವಣೆ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆಯ ಕಂದಾಯ ನಿರೀಕ್ಷಕ (Revenue Inspector) ವೆಂಕಟೇಶ್ ಆರ್. ಅವರು ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

- Advertisement -

ಭಟ್ಕಳ ಮೂಲದವರಾದ ವೆಂಕಟೇಶ್ ಆರ್. ಅವರು ತಮ್ಮ ತಂದೆಯ ನಿಧನದ ನಂತರ ಅನುಕಂಪ ನೇಮಕಾತಿ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿಕೊಂಡಿದ್ದರು. ಕಳೆದ ರಾತ್ರಿ ಮನೆಯಿಂದ  ನಾಪತ್ತೆಯಾಗುವ ಮುನ್ನ ವೆಂಕಟೇಶ್ ಅವರು ತಮ್ಮ ಸಹೋದ್ಯೋಗಿಗಳ ವಾಟ್ಸಾಪ್‌ ಗ್ರೂಪ್‌ಗೆ ಒಂದು ಪತ್ರ ಕಳುಹಿಸಿದ್ದು, ಅದರಲ್ಲಿ ಕುಮಟಾ ಪುರಸಭೆಯ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪತ್ರದ ಪ್ರಕಾರ, ಮುಖ್ಯಾಧಿಕಾರಿ ಎಂ. ಆರ್ ಸ್ವಾಮಿ ಅವರು ಒಂದು ಕಟ್ಟಡದ ಅಧಿಕೃತ ‘ಬಿ’ ಖಾತೆಯನ್ನು ‘ಎ’ ಖಾತೆಗೆ ಬದಲಿಸಲು ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದ 4 ಲಕ್ಷ ಲಂಚ ಸಿಗಲಿದೆ ಎಂದು ಹೇಳಿದ್ದರು. ಅಕ್ರಮಕ್ಕೆ ಸಹಕರಿಸಲು ನಿರಾಕರಿಸಿದ ವೆಂಕಟೇಶ ಅವರ ಮೇಲೆ ಅಶ್ಲೀಲ ಪದ ಬಳಕೆ ಮಾಡಿ, ಮಾನಸಿಕ ಹಿಂಸೆ, ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ವೆಂಕಟೇಶ ಅವರು ಪತ್ರದಲ್ಲಿ ಮುಖ್ಯಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ʼದೀಕ್ಷಾ ಬ್ರ್ಯಾಂಡ್ʼ ಮೂಲಕ ಸ್ವಾವಲಂಬನೆ ಬದುಕು; PMFME ಯೋಜನೆಯಿಂದ ಯಶಸ್ಸು ಕಂಡ ಮಹಿಳಾ ಉದ್ಯಮಿ

ಇದು ಶಾಸಕ ದಿನಕರ ಶೆಟ್ಟಿ ಅವರ ಕೆಲಸ, ನನಗೆ ಮೇಲಿನಿಂದ ಒತ್ತಡ ಇದೆ” ಎಂದು ಹೇಳುತ್ತಾ, ಎಲ್ಲರ ಎದುರೇ ನನ್ನನ್ನು ಹಿಯಾಳಿಸುತ್ತಿದ್ದರು ಎಂದು ವೆಂಕಟೇಶ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಈ ಪತ್ರ ಕಳುಹಿಸಿದ ಕೆಲವೇ ಸಮಯದ ನಂತರ ಅವರು ನಾಪತ್ತೆಯಾಗಿದ್ದು, ಈ ಘಟನೆ ಪುರಸಭೆ ವಲಯದಲ್ಲಿ ಆತಂಕ ಮೂಡಿಸಿದೆ.

ಮುಖ್ಯಾಧಿಕಾರಿಯು ತನ್ನ ಸಹೋದ್ಯೋಗಿ ಮೇಲೆ ಕಿರುಕುಳ ಮತ್ತು ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಕುಮಟಾ ಪುರಸಭೆ ಸಿಬ್ಬಂದಿಗಳು ಒಟ್ಟಾಗಿ ಅಧ್ಯಕ್ಷರಿಗೆ ಮನವಿ ನೀಡಿದ್ದಾರೆ. ಇಲ್ಲಿಂದ ಮುಖ್ಯಾಧಿಕಾರಿಯನ್ನು ತಕ್ಷಣವೇ ವರ್ಗಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವೆಂಕಟೇಶ ಅವರ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಕೋಲಾರ | ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಆಪ್ತ ಸಹಾಯಕರಿಗೆ ಮನವಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೊಳಿಸುವುದು, ಗುತ್ತಿಗೆ...