ಮಂಡ್ಯ | ತರಕಾರಿಗಳ ಬೆಲೆ ದುಬಾರಿ; ಗ್ರಾಹಕರ ಜೇಬಿಗೆ ಕತ್ತರಿ

Date:

ಮಾರುಕಟ್ಟೆಗೆ ಅಗತ್ಯ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ನಾಟಿ ಬೀನ್ಸ್‌, ದಪ್ಪಮೆಣಸಿನಕಾಯಿ, ನುಗ್ಗೇಕಾಯಿ, ಶುಂಠಿ, ಸುವರ್ಣಗೆಡ್ಡೆ ಮುಂತಾದ ತರಕಾರಿಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

- Advertisement -

ಕಳೆದ ವಾರ ಏರುಗತಿಯಲ್ಲಿ ಸಾಗುತ್ತಿದ್ದ ಟೊಮೆಟೊ ಬೆಲೆಯಲ್ಲಿ ಸದ್ಯ ನಿಯಂತ್ರಣ ಕಂಡುಬಂದಿದೆ. ₹30ಕ್ಕೆ ಮಾರಾಟವಾಗುತ್ತಿದ್ದ ಕೆ ಜಿ ಟೊಮೆಟೊ ಇದೀಗ ₹20ಕ್ಕೆ ಇಳಿಕೆಯಾಗಿದೆ. ಎಲೆಕೋಸು, ಸೌತೆಕಾಯಿ, ಸಿಹಿಗುಂಬಳ, ಬೂದುಗುಂಬಳ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದೆ. ಫಾರಂ ಬೀನ್ಸ್‌ ₹80ರಿಂದ ₹100ರವರೆಗೆ ಮಾರಾಟವಾಗುತ್ತಿದ್ದರೆ, ನಾಟಿ ಬೀನ್ಸ್‌ ₹100ರಿಂದ ₹120ರವರೆಗೂ ಮಾರಾಟವಾಗುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ಬೇಸಿಗೆಯಂತಹ ಬಿಸಿಲು ಕಾಡುತ್ತಿದ್ದು, ಮಾರುಕಟ್ಟೆಗೆ ತಾಜಾ ತರಕಾರಿ ಬರುತ್ತಿಲ್ಲ. ಹೀಗಾಗಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮುಂದೆ ಬಿಸಿಲು ಕಡಿಮೆಯಾದರೆ ಮಾರುಕಟ್ಟೆಗೆ ಉತ್ತಮ ತರಕಾರಿ ಬರುತ್ತದೆ. ಬೆಲೆಯೂ ಕಡಿಮೆಯಾಗಲಿದೆ” ಎಂದು ತರಕಾರಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

“ಸೌತೆಕಾಯಿ, ಎಲೆಕೋಸು ಕೆಜಿಗೆ ₹25ರಂತೆ ದೊರೆಯುತ್ತಿದೆ. ಬೆಂಡೆಕಾಯಿ, ಸೋರೆಕಾಯಿ, ಪಡವಲಕಾಯಿ, ಆಲೂಗೆಡ್ಡೆ ₹30, ಬಜ್ಜಿ ಮೆಣಸಿನಕಾಯಿ, ಕ್ಯಾರೆಟ್‌, ಸೀಮೆಬದನೆಕಾಯಿ, ಹಾಗಲಕಾಯಿ, ಹೂಕೋಸು, ಅವರೆಕಾಯಿ, ಈರೇಕಾಯಿ, ಮೂಲಂಗಿ, ತೊಂಡೆಕಾಯಿ, ಬೀಟ್‌ರೂಟ್‌, ಸಿಹಿಗೆಣಸು, ಮರಗೆಣಸು, ಮಂಗಳೂರುಸೌತೆ ₹40, ಸುವರ್ಣಗೆಡ್ಡೆ, ಈರುಳ್ಳಿ ₹50ರಂತೆ ಮಾರಾಟವಾಗುತ್ತಿವೆ” ಎಂದರು.

“ಹಸಿರು ಮೆಣಸಿನಕಾಯಿ, ತಗಣಿಕಾಯಿ ₹60, ಶುಂಠಿ, ಫಾರಂ ಬೀನ್ಸ್‌, ಗೆಡ್ಡೆಕೋಸು ₹80, ನುಗ್ಗೇಕಾಯಿ, ನಾಟಿ ಬೀನ್ಸ್‌, ದಪ್ಪಮೆಣಸಿನಕಾಯಿ ₹100, ಹಸಿಬಟಾಣಿ ₹120, ಫಾರಂಬೆಳ್ಳುಳ್ಳಿ ₹160, ನಾಟಿ ಬೆಳ್ಳುಳ್ಳಿ ₹200ರಂತೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಕೈಗೆಟುಕದಂತಾಗಿದೆ. ಆಯುಧಪೂಜೆ ಹಿನ್ನೆಲೆಯಲ್ಲಿ ಒಂದು ನಿಂಬೆಹಣ್ಣಿಗೆ ₹5 ರಿಂದ ₹10ನಂತೆ ಮಾರಾಟವಾಗುತ್ತಿತ್ತು” ಎಂದು ತಿಳಿಸಿದರು.

“ಸೊಪ್ಪುಗಳಲ್ಲಿ ನಾಟಿ ಕೊತ್ತಂಬರಿ ಮತ್ತು ಮೆಂತ್ಯಸೊಪ್ಪು ದುಬಾರಿಯಾಗಿದ್ದು, ಕೀರೆ ₹10, ದಂಟು, ಪಾಲಾಕ್‌, ಕರಿಬೇವು ₹15, ಸಬ್ಬಸಿಗೆ, ಫಾರಂ ಕೊತ್ತಂಬರಿ, ಕಿಲ್‌ ಕೀರೆ ₹20, ಚಿಕ್ಕಿಸೊಪ್ಪು, ನಾಟಿ ಕೊತ್ತಂಬರಿ ₹25ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿವೆ. ಮಾರುಕಟ್ಟೆಯಲ್ಲಿ ಮೆಂತ್ಯಸೊಪ್ಪು ಕೊರತೆಯಾಗಿದ್ದು, ಪ್ರತಿ ಕಟ್ಟಿಗೆ ₹40ರಂತೆ ಮಾರಾಟವಾಗುತ್ತಿವೆ” ಎಂದು ಹೇಳಿದರು.

ಹೂವುಗಳಲ್ಲಿ ಮಲ್ಲಿಗೆ, ಕನಕಾಂಬರ, ಕಾಕಡ ಹೂ ಬೆಲೆ ದುಬಾರಿಯಾಗಿದೆ. ಕೆ ಜಿ ಕೆಂಪು ಚೆಂಡು ಹೂ ಮತ್ತು ಹಳದಿ ಚೆಂಡು ಹೂ ₹50, ಬಿಳಿ ಸೇವಂತಿಗೆ ₹230, ಸೇವಂತಿಗೆ, ಬಟನ್ಸ್‌ ₹250, ಸಣ್ಣಗುಲಾಬಿ ₹300, ಸುಗಂಧರಾಜ ₹400, ಕಣಗಿಲೆ, ಕಲ್ಕತ್ತಾ ಮಲ್ಲಿಗೆ ₹500, ಮರಳೆ ₹600, ಕಾಕಡ ₹800, ಮಲ್ಲಿಗೆ ₹1,000, ಕನಕಾಂಬರ ₹1,200ರವರೆಗೂ ಮಾರಾಟವಾಗುತ್ತಿರುವುದು ಕಂಡುಬಂದಿದೆ.

ಮಾರು ತುಳಸಿ ₹30ರಿಂದ ₹40, ಹಳದಿ ಚೆಂಡುಹೂ ಮತ್ತು ಕೆಂಪು ಚೆಂಡು ಹೂ ₹60, ಕಾಕಡ, ಕಣಗಿಲೆ ₹80, ಸೇವಂತಿಗೆ ₹30ರಿಂದ ₹50, ಬಟನ್ಸ್‌ ₹60, ಕಣಗಿಲೆ, ಕಾಕಡ ₹80, ಕನಕಾಂಬರ ₹100 ರಂತೆ ಒಂದು ಮಾರಿಗೆ ಮಾರಾಟವಾಗುತ್ತಿವೆ.

ಈ ಸುದ್ದಿ ಓದಿದ್ದೀರಾ? ಬೀದರ್ | ಬರ: ರೈತರ ಸಂಕಷ್ಟ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ : ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ

ಹಣ್ಣುಗಳಲ್ಲಿ ದಾಳಿಂಬೆ, ಶಿಮ್ಲಾ ಮತ್ತು ದೆಹಲಿ ಸೇಬಿನ ಬೆಲೆ ಹೆಚ್ಚಳವಾಗಿದೆ. ಪಪ್ಪಾಯ ₹25, ಕಲ್ಲಂಗಡಿ ₹30, ಪಚ್ಚಬಾಳೆ, ಕರಬೂಜ ₹40, ಸಪೋಟ ₹50, ಅನಾನಸ್‌, ಸೀಬೆ, ಸೀತಾಫಲ ₹60, ಕಿತ್ತಳೆ, ಮೂಸಂಬಿ ₹80, ಏಲಕ್ಕಿ ಬಾಳೆ ₹70ರಿಂದ ₹80, ಕಂದ್ರಾಕ್ಷಿ ₹120, ಕಪ್ಪು ದ್ರಾಕ್ಷಿ ₹130, ಕಿವಿಹಣ್ಣು (ಬಾಕ್ಸ್‌) ₹140, ದಪ್ಪದ್ರಾಕ್ಷಿ, ಕಿತ್ತಳೆ ₹180, ಶಿಮ್ಲಾ ಮತ್ತು ದೆಹಲಿ ಸೇಬು ₹160ರಿಂದ  ₹200, ದಾಳಿಂಬೆ ₹270 ರಂತೆ ಪ್ರತಿ ಕೆಜಿಗೆ ಮಾರಾಟವಾಗುತ್ತಿರುವುದು ವರದಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...