ಮೈಸೂರು | ಕಾರ್ಮಿಕ ಸಂಹಿತೆಗಳ ಜಾರಿ; ಅಭದ್ರತೆಗೆ ಕಾರಣ: ಮಂಜುನಾಥ ಕೈದಾಳೆ

Date:

ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನ ಎಸ್ ಪಿ ಭಟ್ ಸಭಾಂಗಣದಲ್ಲಿ ನಡೆದ ಕಾರ್ಮಿಕ ವಿರೋಧಿ ಲೇಬರ್ ಕೋಡ್ ವಿರೋಧಿಸಿ, ಕಾರ್ಮಿಕರ ಸಮಾವೇಶದಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಕೈದಾಳೆ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವುದರಿಂದ, ಕಾರ್ಮಿಕ ವಲಯಕ್ಕೆ ಅಭದ್ರತೆ ಕಾಡಲು ಕಾರಣವಾಗಿದೆ ಎಂದು ಕಿಡಿಕಾರಿದರು.

- Advertisement -

ನೂತನ ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ-2019, ಕೈಗಾರಿಕ ಸಂಬಂಧ ಸಂಹಿತೆ-2020, ಸಾಮಾಜಿಕ ಭದ್ರತಾ ಸಂಹಿತೆ-2020, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ-2020. ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳಳನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕ ವರ್ಗದ ಮೇಲೆ ಗದಾಪ್ರಹಾರ ಮಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇಡೀ ದೇಶದ ಶೇ.98 ಉದ್ದಿಮೆಗಳು ಕನಿಷ್ಟ ಮುನ್ನೂರಕ್ಕೂ ಕಡಿಮೆ ಕಾರ್ಮಿಕರನ್ನು ಹೊಂದಿದ್ದು, ಈಗ ಕಾರ್ಖಾನೆಗಳನ್ನು ಅನುಮತಿಯಿಲ್ಲದೇ ಮುಚ್ಚುವ 100 ರಿಂದ 300ಕ್ಕೆ ಹೆಚ್ಚಳ ಮಾಡಲಾಗಿದೆ. ಬಹುತೇಕ ಉದ್ದಿಮೆಗಳು ಸರ್ಕಾರಗಳಿಂದ ಬೃಹತ್ ಪ್ರಮಾಣದ ರಿಯಾಯಿತಿಗಳನ್ನು ಪಡೆದು, ಒಂದಷ್ಟು ಕಾಲ ಕಾರ್ಖಾನೆಗಳ ಕಾರ್ಮಿಕರಿಗೆ ಯಾವುದೇ ಶಾಸನತ್ಮಾಕ ಸೌಲಭ್ಯಗಳನ್ನು ನೀಡದೇ ಮುಚ್ಚಿ ಮತ್ತೊಂದು ಕಡೆ ಹೋಗುತ್ತವೆ. ಇದರಿಂದ ಕಾರ್ಮಿಕರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಕಾರಣ ಕೇಳಲು ಸಾಧ್ಯವಾಗದ ಪರಿಸ್ಥಿತಿಗೆ ದೂಡಲಿದೆ.

ಗುತ್ತಿಗೆ ಕಾರ್ಮಿಕರಿಗೆ ಶಾಸನಬದ್ದ ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ನೀಡಲು 20 ಕಾರ್ಮಿಕರಿದ್ದರೆ ಸಾಕು ಎಂಬ ಮಿತಿಯನ್ನು ಕನಿಷ್ಠ 50ಕ್ಕೆ ಏರಿಸಿರುವುದರಿಂದ ಬಹುತೇಕ ಗುತ್ತಿಗೆ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುವುದಿಲ್ಲ. 300ಕ್ಕಿಂತ ಕಡಿಮೆ ಇರುವ ಕಾರ್ಖಾನೆಗಳಲ್ಲಿ ಸ್ಥಾಯಿ ಆದೇಶಗಳು ಸಹ ಅನ್ವಯಿಸುದಿಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಈಗ ಜಾರಿ ಮಾಡಲು ಹೊರಟಿರುವ ಕಾರ್ಮಿಕ ಸಂಹಿತೆಯಲ್ಲಿ ಅಡಕವಾಗಿದೆ. ಕಾರ್ಮಿಕ ವಿರೋಧಿ ನಿಲುವಾಗಿದ್ದು, ಕಾರ್ಪೋರೆಟ್ ಗೆ ಮನ್ನಣೆ ನೀಡಿದಂತಿದೆ. ಈ ಸಂಹಿತೆಗಳಿಂದ ಕಾರ್ಮಿಕ ವಲಯ ಶೋಷಣೆಗೆ ಒಳಪಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರಾದ ಪಿ.ಪಿ. ಬಾಬುರಾಜ್ ಪಲ್ಲದನ್ ಮಾತನಾಡಿ, “ಕೇಂದ್ರ ಸರ್ಕಾರ ಸಮಾಜದ ಕೆಳಸ್ಥರದಲ್ಲಿರುವ ಹಿಂದುಳಿದ ಬಹುಸಂಖ್ಯಾತ ಜನರನ್ನು ಮುಖ್ಯವಾಹಿನಿಯಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ವೇತನ ಪಾವತಿ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಬೋನಸ್ ಕಾಯ್ದೆ ಮತ್ತು ಸಮಾನ ವೇತನ ಕಾಯ್ದೆಗಳನ್ನು ರದ್ದು ಪಡಿಸುವ ಮೂಲಕ ಉದ್ಯಮ ಸ್ನೇಹಿ ವಾತವರಣವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಮಾತನಾಡುತ್ತಾರೆ. ವೇತನವನ್ನು ನೀಡುವ ಬದಲು ಕನಿಷ್ಟ ನೆಲಮಟ್ಟದ ದೈನಂದಿನ ಕೂಲಿಯನ್ನು ₹178 ರೂಪಾಯಿ ನಿಗದಿ ಮಾಡುತ್ತಿದೆ. ಅಲ್ಲದೇ, ಉದ್ಯೋಗ ಖಾತ್ರಿ ಯೋಜನೆಯನ್ನು ಮಾರ್ಪಾಡಿಸಿ ಗ್ರಾಮೀಣ ಬದುಕಿಗೆ ಕೊಳ್ಳಿ ಇಡುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, ಇತ್ತೀಚಿಗೆ ಜಾರಿಯಾಗಿರುವ ಉದ್ಯಮಸ್ನೇಹಿ ಲೇಬರ್ ಕೋಡ್ ಗಳು, ಕಾರ್ಮಿಕರ ಮೇಲಾಗುತ್ತಿರುವ ನೇರವಾದ ದಾಳಿಯೇ ಸರಿ. ಇವುಗಳ ಜಾರಿಯಿಂದಾಗಿ ಕಾರ್ಮಿಕರ ಹಕ್ಕುಗಳು ನಾಮಾವಶೇಷವಾಗಲಿವೆ. ಕಾರ್ಮಿಕರು ಹಲವು ದಶಕಗಳಿಂದ ಹೋರಾಟ ಮಾಡಿ ಗಳಿಸಿಕೊಂಡ ಹಲವಾರು ಶಾಸನಾತ್ಮಕ ಹಕ್ಕುಗಳು ಮತ್ತು ಉದ್ಯೋಗ ಭದ್ರತೆ ನಾಶವಾಗುತ್ತದೆ. ಸರ್ಕಾರಗಳ ಈ ಬಂಡವಾಳಶಾಹಿ ಪರವಾದ, ಕಾರ್ಮಿಕ ವಿರೋಧಿ ನಿಲುವುಗಳನ್ನು ವಿರೋಧಿಸಿ, ಲೇಬರ್ ಕೋಡ್ ಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ, ಎಐಯುಟಿಐಸಿ ಅಖಿಲ ಭಾರತ ಸಮಿತಿಯು ಬಲಿಷ್ಠ ಜನ ಹೋರಾಟವನ್ನು ನಡೆಸಲು ತೀರ್ಮಾನಿಸಿದ್ದು ಇದರ ಭಾಗವಾಗಿ, ಮೈಸೂರು ಜಿಲ್ಲಾ ಸಮಿತಿಯು ಈ ಸಮಾವೇಶವನ್ನು ಸಂಘಟಿಸುತ್ತಿದೆ. ಫೆಬ್ರವರಿ.12ರ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕರು ಸಜ್ಜಾಗಬೇಕೆಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಜಿಲ್ಲೆಯ ಯುವಜನರು ಉದ್ಯಮ ಅವಕಾಶಗಳ ಸದುಪಯೋಗ ಪಡೆದುಕೊಳ್ಳಿ: ಶ್ರೀರೂಪ

ಸಮಾವೇಶದಲ್ಲಿ ಎಐಯುಟಿಯುಸಿ ಜಿಲ್ಲಾ ಸಮಿತಿಯ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಪಿ. ಎಸ್. ಸಂಧ್ಯಾ, ಜಿಲ್ಲಾ ಸಮಿತಿಯ ಸದಸ್ಯ ಹರೀಶ್ ಎಸ್.ಎಚ್. ವಿವಿಧ ಘಟಕಗಳ ಮುಖಂಡರಾದ ಶಿವಾನಂದ್, ರಾಘವೇಂದ್ರ ಪ್ರಸಾದ್, ರವಿಕುಮಾರ್, ಮಹೇಶ್ ಹರವೆ, ನಾಗೇಂದ್ರ, ಪವಿತ್ರ, ಮಹದೇವಸ್ವಾಮಿ, ಚಂದನ್, ಜಯಶಂಕರ್, ಹರೀಶ್, ಸತೀಶ್, ಪ್ರಮೋದ್, ಲೋಕೇಶ್, ರಮೇಶ್, ಅರವಿಂದ್, ಅಕ್ಕಮಹಾದೇವಿ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ವಿದ್ಯುತ್ ಬಿಲ್ ಬಾಕಿ: ಅಂಬೇಡ್ಕರ್ ವಸತಿ ನಿಲಯದ ವಿದ್ಯುತ್ ಸಂಪರ್ಕ ಕಡಿತ

ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್....

ಉಡುಪಿ | ಗೃಹಜ್ಯೋತಿ ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಕಾಲಾವಕಾಶ ವಿಸ್ತರಣೆ: ರಮೇಶ್ ಕಾಂಚನ್

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ...

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...