ಮೈಸೂರು ದಸರಾ ಸಿದ್ಧತೆಗಳು ಆರಂಭಗೊಂಡಿದ್ದು, ಪೂರ್ವಸಿದ್ಧತೆಯ ಮೊದಲ ಹಂತವಾಗಿ ಜಗತ್ಪ್ರಸಿದ್ಧ ಜಂಬೂಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಈ ಬಾರಿ ದಸರಾ ಪ್ರತಿ ಬಾರಿಗಿಂತ ತಡವಾಗಿ ನಡೆವುದರಿಂದ ಆನೆಗಳ ಆಯ್ಕೆಯೂ ವಿಳಂಬವಾಗಿದೆ.
ದುಬಾರೆ ದುರ್ಘಟನೆಯ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಸಮಯ ವಿನಿಯೋಗಿಸುತಿದ್ದಾರೆ. ಹಲವು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆನೆಗಳ ನಡವಳಿಕೆ, ಮನೋಧರ್ಮ ಹಾಗೂ ದೈಹಿಕ ಮಾನಸಿಕ ಸ್ಥಿತಿ ಗತಿಯನ್ನು ಕೂಲಂಕುಶ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ತಂಡವು ರಕ್ತ, ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ವಿವಿಧ ಪ್ರಯೋಗಾಲಗಳಿಗೆ ಕಳುಹಿಸಿದ್ದು, ಆನೆಗಳ ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯವನ್ನು ನಿರ್ಣಯಿಸಲು ಸುಧಾರಿತ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತಿದೆ.
“ನಾಗರಹೊಳೆ ಹುಲಿ ಅಭಯಾರಣ್ಯದ ಮತ್ತಿಗೋಡು, ಮಡಿಕೇರಿ ಅರಣ್ಯ ವಿಭಾಗದ ದುಬಾರೆ ಮತ್ತು ಬಂಡೀಪುರ ಹುಲಿ ಅಭಯಾರಣ್ಯದ ಆನೆ ಶಿಬಿರಗಳಿಗೆ ಭೇಟಿ ನೀಡಿ 20ಕ್ಕೂ ಹೆಚ್ಚು ಆನೆಗಳ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ” ಎಂದು ದಸರಾ ಆನೆಗಳ ಉಸ್ತುವಾರಿ ವಹಿಸಿರುವ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ ಬಿ ಪ್ರಭು ಹೇಳಿದ್ದಾರೆ.
ಕಳೆದ ವರ್ಷ 14 ಆನೆಗಳನ್ನು ಮೈಸೂರಿಗೆ ತರಲಾಗಿತ್ತು, ಈ ವರ್ಷ ಅಧಿಕಾರಿಗಳು ನಾಲ್ಕು ಹೆಣ್ಣು ಆನೆಗಳು ಸೇರಿದಂತೆ ಕೇವಲ 12 ಆನೆಗಳನ್ನು ಮಾತ್ರ ತರುವ ಸಾಧ್ಯತೆಯಿದೆ. ಅಲ್ಲದೆ, ಕಳೆದ ವರ್ಷ ಆನೆಗಳನ್ನು 65 ದಿನಗಳವರೆಗೆ ದಸರಾ ಶಿಬಿರದಲ್ಲಿ ಇರಿಸಲಾಗಿತ್ತು ಈ ಬಾರಿ ಹೆಚ್ಚಿನ ನಿರ್ವಹಣಾ ವೆಚ್ಚ ಮತ್ತು ಸುರಕ್ಷತಾ ದೃಷ್ಟಿಯಿಂದ 55 ದಿನಗಳವರೆಗೆ ಮಾತ್ರ ಆನೆಗಳನ್ನು ಮೈಸೂರಿನಲ್ಲಿ ಇರಿಸಿಕೊಳ್ಳಲಾಗುತ್ತದೆ.
ಮೈಸೂರು ದಸರಾ ಸಿದ್ಧತೆ ಆರಂಭ: ಆನೆಗಳ ಆಯ್ಕೆ ಪ್ರಕ್ರಿಯೆ ಚುರುಕು
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




