ಯಾದಗಿರಿ | ಮೇ 25, 26 ರಂದು ಕಸಾಪದಿಂದ ಕಾವ್ಯ, ಕಥಾ ಕಮ್ಮಟ

Date:

ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ್‌ ಜಯಂತಿ ಅಂಗವಾಗಿ ಮೇ 25 ಹಾಗೂ 26 ರಂದು ಎರಡು ದಿನಗಳ ಕಾಲ ಕಾವ್ಯ, ಕಥಾ ಮತ್ತು ಕಮ್ಮಟ ಆಯೋಜಿಸಲಾಗಿದೆ ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ತಿಳಿಸಿದ್ದಾರೆ.

“ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಹೊರವಲಯದ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರಡು ದಿನದ ಕಮ್ಮಟದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಡಾ.ಅರುಣ ಜೋಳದಕೂಡ್ಲಿಗಿ, ಡಾ.ವಿಕ್ರಮ ವಿಸಾಜಿ, ಮಹಿಪಾಲರೆಡ್ಡಿ ಮನ್ನೂರ್‌, ಪ್ರೊ.ಕೃಷ್ಣ ನಾಯಕ ಹಾಗೂ‌ ಡಾ. ಕಾವ್ಯಶ್ರೀ ಮಹಾಗಾಂವಕಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಯುವಕವಿಗಳು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸ್ತಕರು ಕಮ್ಮಟದ ಸದುಪಯೋಗ ಪಡಿದುಕೊಳ್ಳಬೇಕು ಹಾಗೂ ಕಮ್ಮಟ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಶಿಬಿರಾರ್ಥಿಗಳು ಶಿಬಿರದ ನಿಯಮಗಳಿಗೆ ಬದ್ಧರಾಗಿ ಭಾಗವಹಿಸುವಂತೆ ಕೋರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ಶಿಬಿರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಶಿಬಿರಾಧಿಕಾರಿಗಳಾದ ರಾಘವೇಂದ್ರ ಹಾರಣಗೇರಾ, ಗೌರವ ಕಾರ್ಯದರ್ಶಿಗಳು 9740722431, ಸುರೇಶ ಕೆ, ಅರುಣಿ ಗೌರವ ಕಾರ್ಯದರ್ಶಿಗಳು 9901559873, ಸಂಯೋಜನಾಧಿಕಾರಿಗಳಾದ ಶಂಕರ್ ಹುಲಕಲ್ 9743735650, ನಿಂಗಣ್ಣ ನಾಟೆಕಾರ್ 9663327770 ಹಾಗೂ ಕಸಾಪ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ 9902570037 ಅವರನ್ನು ಸಂಪರ್ಕಿಸಲು ಕೋರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೇಡಂ | ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಅಂಬೇಡ್ಕರ್ ಯುವ ಸೇನೆ ಒತ್ತಾಯ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಘೀ, ಕಾಲರಾ, ಮಲೇರಿಯಾ...

ಕಲಬುರಗಿ | ಭೀಮಾನದಿ ಸಂರಕ್ಷಣೆಗಾಗಿ ಅರಿವಿನ ಅಭಿಯಾನ

ಕಲಬುರಗಿ ಜಿಲ್ಲೆಗೆ ಜೀವಜಲವಾಗಿರುವ ಭೀಮಾನದಿ ಸಂರಕ್ಷಣೆಗಾಗಿ ಸಂವಾದ ಯುವಸಂಪನ್ಮೂಲ ಕೇಂದ್ರ ಮತ್ತು...

ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಸರಬರಾಜು ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ಸಮಸ್ಯೆಯನ್ನು...

ತುಮಕೂರು | ಕೆಐಎಡಿಬಿ ಅಪರ ನಿರ್ದೇಶಕನ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೆಂಗಳೂರಿನ 'ಖನಿಜ ಭವನ'ದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಐಎಡಿಬಿ ಅಪರ ನಿರ್ದೇಶಕ ಮುದ್ದುಕುಮಾರ್‌ ಮನೆ...