ದಸರಾ ಕಲಾ ಕೆಲಸಗಳನ್ನು ನೇರವಾಗಿ ಕಲಾವಿದರಿಗೆ ನೀಡಲು ಆಗ್ರಹ

Date:

ಮೈಸೂರು ದಸರಾ ಮಹೋತ್ಸವದ ಕಲಾ ಚಟುವಟಿಕೆಗಳ ಗುತ್ತಿಗೆಗಳನ್ನು ಮಧ್ಯವರ್ತಿಗಳು ಹಾಗೂ ಖಾಸಗಿ ಇವೆಂಟ್ ಸಂಸ್ಥೆಗಳ ಮೂಲಕ ನೀಡುವ ಬದಲು ನೇರವಾಗಿ ಕಲಾವಿದರಿಗೆ ನೀಡಬೇಕು ಎಂದು ಮೈಸೂರು ದಸರಾ ಕಲಾವಿದರ ಸಂಘ ಆಗ್ರಹಿಸಿದೆ.

- Advertisement -

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಅವರ ಮೂಲಕ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಚಿತ್ರ ಹಾಗೂ ಶಿಲ್ಪ ಕಲಾವಿದರಾದ ತಾವುಗಳು ಹಿಂದಿನಿಂದಲೂ ದಸರಾ ಮಹೋತ್ಸವದ ಸ್ತಬ್ಧಚಿತ್ರಗಳು, ವಸ್ತುಪ್ರದರ್ಶನ ಮಳಿಗೆಗಳು, ವೇದಿಕೆಗಳು, ಸ್ವಾಗತ ಕಮಾನುಗಳ ನಿರ್ಮಾಣ ಸೇರಿದಂತೆ ವಿವಿಧ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇವೆ. ದಸರಾ ಕಲಾ ಕೆಲಸಗಳನ್ನೇ ನಂಬಿ ಅನೇಕ ಕಲಾವಿದರು ಹಾಗೂ ಅವರ ಕುಟುಂಬಗಳು ಜೀವನ ನಡೆಸುತ್ತಿವೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಕಲಾವಿದರನ್ನು ಕಡೆಗಣಿಸಿ ರಾಜಕಾರಣಿಗಳ ಬೆಂಬಲಿತರು, ಖಾಸಗಿ ಇವೆಂಟ್ ಸಂಸ್ಥೆಗಳು ಹಾಗೂ ಇತರೆ ಗುತ್ತಿಗೆದಾರರಿಗೆ ಕಲಾ ಕೆಲಸಗಳನ್ನು ನೀಡಲಾಗುತ್ತಿದೆ. ಗುತ್ತಿಗೆದಾರರ ಮೂಲಕ ಕಲಾವಿದರು ಕೆಲಸ ಮಾಡುವ ಮಧ್ಯವರ್ತಿ ವ್ಯವಸ್ಥೆ ರೂಪುಗೊಂಡಿದ್ದು, ಇದರಿಂದ ಕಲಾವಿದರಿಗೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ ಎಂದು ಆರೋಪಿಸಿದರು.

ದಸರಾ ಕಲಾ ಕೆಲಸಗಳು ವರ್ಷವಿಡೀ ನಿರಂತರವಾಗಿ ಕೆಲಸ ದೊರೆಯದ ಕಲಾವಿದರಿಗೆ ಪ್ರಮುಖ ಆದಾಯದ ಮೂಲವಾಗಿವೆ. ಈ ಕೆಲಸಗಳೂ ಗುತ್ತಿಗೆದಾರರ ಪಾಲಾದರೆ ಕಲೆಯನ್ನೇ ನಂಬಿ ಬದುಕುತ್ತಿರುವ 1,500ಕ್ಕೂ ಹೆಚ್ಚು ಕಲಾವಿದರು ಹಾಗೂ ಅವರ ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಸರಾ ಮಹೋತ್ಸವದಲ್ಲಿ ಕಲಾವಿದರ ಅಸ್ತಿತ್ವ ಹಾಗೂ ಹಕ್ಕುಗಳನ್ನು ಕಾಪಾಡಲು ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘ ಒತ್ತಾಯಿಸಿದೆ.

  1. ದಸರಾ ಮಹೋತ್ಸವದ ಎಲ್ಲ ಕಲಾ ಕೆಲಸಗಳನ್ನು ನೇರವಾಗಿ ಕಲಾವಿದರಿಗೆ ನೀಡಬೇಕು.
  2. ಸ್ತಬ್ಧಚಿತ್ರ ಸಮಿತಿ ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಕಲಾವಿದರ ಸಭೆ ನಡೆಸಬೇಕು.
  3. ಸ್ತಬ್ಧಚಿತ್ರ ಮತ್ತು ವಸ್ತುಪ್ರದರ್ಶನ ಮಳಿಗೆಗಳ ನಿರ್ಮಾಣ ಸ್ಥಳಗಳಲ್ಲಿ ವಿದ್ಯುತ್, ನೀರು, ಸ್ವಚ್ಛತೆ ಹಾಗೂ ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು.
  4. ಕೆಲಸದ ಸ್ಥಳಗಳಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.
  5. ಜಂಬೂಸವಾರಿ ದಿನ ಅರಮನೆಯೊಳಗೆ ಕಲಾವಿದರಿಗೆ ಪ್ರವೇಶ, ಊಟ-ತಿಂಡಿ ಹಾಗೂ ಸೂಕ್ತ ಪಾಸ್ ವ್ಯವಸ್ಥೆ ಮಾಡಬೇಕು.
  6. ಜಂಬೂಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರದೊಂದಿಗೆ ಕಲಾವಿದರಿಗೆ ಸಾಗಲು ಅವಕಾಶ ನೀಡಬೇಕು.
  7. ಬನ್ನಿಮಂಟಪದಲ್ಲಿ ಸ್ತಬ್ಧಚಿತ್ರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು.

ಕಲಾವಿದರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವ ಮೂಲಕ ದಸರಾ ಮಹೋತ್ಸವದಲ್ಲಿ ಕಲಾವಿದರ ಅಸ್ತಿತ್ವ ಹಾಗೂ ಜೀವನೋಪಾಯವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.

ಈ ವಿಶೇಷ ವರದಿ ಓದಿದ್ದೀರಾ? E-KYC: ಎಲ್ಲವೂ ‘ಆನ್‌ಲೈನ್‌’… ಆದರೆ, ಜನರ ಸಂಕಷ್ಟ ಮಾತ್ರ ‘ಆಫ್‌ಲೈನ್‌’!

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ದಸರಾ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಚಿಕ್ಕಪಾಳ್ಯ, ಉಪಾಧ್ಯಕ್ಷ ಗೋಪಾಲಕೃಷ್ಣ, ಮುತಾಲ್ ಪಾಷ ಸೇರಿದಂತೆ ಹಲವರು ಇದ್ದರು.

ಈ ವಿಶೇಷ ವರದಿ ಓದಿದ್ದೀರಾ? ಡಿಬಿ ಕುಪ್ಪೆ-ಬಾವಲಿ ನಡುವಿನ ಕಳಪೆ ರಸ್ತೆ ಕಾಮಗಾರಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಇಒ ಅಧಿಕಾರಿಗೆ ಹಲ್ಲೆ ಆರೋಪ; ಪ್ರತಿ ದೂರು ದಾಖಲು 

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಇಒ ಹಾಗೂ ಬ್ಲಾಕ್ ಕಾಂಗ್ರೆಸ್...

ಹಾಸನ | ವಾಟೆಹೊಳೆ ಜಲಾಶಯ: ನಾಲೆಗೆ ನೀರು ಬಿಡುಗಡೆ; ರೈತರಿಗೆ ಸಂತಸ 

ಹಾಸನ ಜಿಲ್ಲೆ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಶನಿವಾರ ರಾತ್ರಿ ನಾಲೆಗೆ...

ಚಿಕ್ಕಮಗಳೂರು | ರೇಬೀಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ ಡಾ.ಗುರುಶಾಂತಪ್ಪ 

ರೇಬೀಸ್ ಖಾಯಿಲೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುವಂತಹದ್ದು. ಜಗತ್ತಿನಲ್ಲಿ ಸುಮಾರು 60,000...

ಚಿಕ್ಕಮಗಳೂರು | ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಿ; ಡಾ.ಭೀಮೇಶ್ವರ ಜೋಷಿ

ಕಳಸ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ...