ಹಾಸನ | ಕಸ್ತೂರಿ ರಂಗನ್ ವರದಿ: ಕೇರಳ ಮಾದರಿಯಲ್ಲಿ ಕರ್ನಾಟಕ ವಿನಾಯಿತಿ ಪಡೆಯಲು ಕೆ.ಪಿ.ಆರ್.ಎಸ್ ಆಗ್ರಹ

Date:

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಏಳನೇ ಕರಡು ಅಧಿಸೂಚನೆ ಹೊರಬಿದ್ದಿದೆ. ಕೇವಲ ರಾಜಕೀಯ ವಿರೋಧ ಮಾಡುವ ಬದಲು, ಕೇರಳ ರಾಜ್ಯದ ಮಾದರಿಯಲ್ಲಿ  ಪಶ್ಚಿಮ ಘಟ್ಟಗಳ  ಸ್ಥಳೀಯ ನಿವಾಸಿ ಜನರ ಆತಂಕಗಳನ್ನು ಸಂಪೂರ್ಣವಾಗಿ ನಿವಾರಿಸುವ, ನಿಜವಾದ ಪರಿಸರ ಸಂರಕ್ಷಣೆಗೆ ಪೂರಕವಾಗುವಂತಹ ಸ್ಪಷ್ಟ ಹಾಗೂ ಪ್ರಾಯೋಗಿಕ ಪರ್ಯಾಯ ಪ್ರಸ್ತಾಪಗಳನ್ನು ಸಿದ್ದಪಡಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿ ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ಹಾಕುವಂತೆ ರಾಜ್ಯ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಸನ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.  

- Advertisement -

27 ಜುಲೈ 2026 ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಈ ಕರಡು ಅಧಿಸೂಚನೆ ಪ್ರಕಾರ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ಜಿಲ್ಲೆಗಳ 39 ತಾಲ್ಲೂಕುಗಳ 1449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಗಳಾಗಿದ್ದು ಇಲ್ಲಿನ ರೈತರು, ಅದಿವಾಸಿಗಳು ಮುಂತಾದ ಜನರ ಜೀವನೋಪಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ವಿನಾಯಿತಿಯನ್ನು ಪಡೆದುಕೊಳ್ಳಲು ಸೆಪ್ಟೆಂಬರ್ 21 ರಂದು ಪ್ರಾರಂಭವಾಗುವ ವಿಶೇಷ ವಿಧಾನಸಭೆ ಅಧಿವೇಶನವನ್ನು ಸದ್ಬಳಕೆ ಮಾಡಿಕೊಳ್ಳಲು ಆಡಳಿತ ಹಾಗೂ ವಿರೋಧ ಪಕ್ಷಗಳ ಶಾಸಕರನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS ) ಒತ್ತಾಯಿಸುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

ಇದನ್ನ ಓದಿದ್ದೀರಾ?ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಸಂಪೂರ್ಣ ಬಂದ್ 

ಕೇರಳದ ಈ ಹಿಂದಿನ ಎಡರಂಗ ಸರ್ಕಾರ ಸ್ಥಳೀಯ ಜನರ ಜೀವನೋಪಾಯ ಹಾಗೂ ಪರಿಸರ ಸಂರಕ್ಷಣೆ ಎರಡನ್ನೂ ಬಹಳ ಯಶಸ್ವಿಯಾಗಿ ಸಮತೋಲನ ಮಾಡುವಂತಹ ಸ್ಪಷ್ಟ ಹಾಗೂ ಪ್ರಾಯೋಗಿಕ ಪರ್ಯಾಯ ಪ್ರಸ್ತಾಪಗಳನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಹಾಗೂ ನ್ಯಾಯಲಯಗಳಿಗೆ ಸಲ್ಲಿಸಿದ್ದರಿಂದಾಗಿ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜನ ವಸತಿ ಪ್ರದೇಶಗಳು, ಕೃಷಿ ಭೂಮಿ, ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೆ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವಂತಹ ವಿನಾಯಿತಿ ಪಡೆಯಲು ಯಶಸ್ವಿಯಾಗಿದೆ. ಕರ್ನಾಟಕ ಸರ್ಕಾರವು ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದೇ ಪರ್ಯಾಯ ಪ್ರಸ್ತಾಪಗಳನ್ನು ಪಶ್ಚಿಮ ಘಟ್ಟದ ಜನರು ಹಾಗೂ ಜನ ಸಂಘಟನೆಗಳ ಜೊತೆ ಸಮಾಲೋಚಿಸಿ ಸಿದ್ದಪಡಿಸಬೇಕು. ಪರಿಸರಕ್ಕೆ ಮಾರಕವಾದ ಬೃಹತ್ ಕ್ವಾರಿ, ಗಣಿಗಾರಿಕೆ ಮತ್ತು ಪರಿಸರ ನಾಶಕ ಯೋಜನೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಸನ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಸಂವಿಧಾನವನ್ನು ಮನುವಾದಕ್ಕೆ ಜೋಡಿಸುವ ಪ್ರಯತ್ನ ಖಂಡನೀಯ: ಎಸ್.ಎಂ. ಪಾಟೀಲ ಗಣಿಹಾರ

ದೇಶದ ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳಿವೆ ಎಂಬ ಹೇಳಿಕೆಯನ್ನು ಖಂಡಿಸಿರುವ ಅಹಿಂದ ಮುಖಂಡ...

ಯರಗೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ‘ನನ್ನ ಕನಸು’ ವಿನೂತನ ಕಾರ್ಯಕ್ರಮ: ಯುಪಿಎಸ್‌ಸಿ ಸಾಧಕರೊಂದಿಗೆ ವಿದ್ಯಾರ್ಥಿಗಳ ಸಂವಾದ

ವಿದ್ಯಾರ್ಥಿಗಳಲ್ಲಿ ಭವಿಷ್ಯದ ಗುರಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸುವ...

ಕಲಬುರಗಿ | 2,350ಕ್ಕೂ ಹೆಚ್ಚು ಅನಾಥರು, ಅಂಗವಿಕಲರು, ಪೌರ ಕಾರ್ಮಿಕರಿಗೆ ಉಚಿತ ಕ್ಷೌರ ಸೇವೆ

ವೃತ್ತಿ ಕೇವಲ ಜೀವನೋಪಾಯದ ಮಾರ್ಗವಾಗದೆ, ಸಮಾಜ ಸೇವೆಯ ಸಾಧನವಾಗುವ ಮೂಲಕ ಮಾನವೀಯತೆಯ...

ಉಡುಪಿ | ಹಾಲಿನ ಬೆಲೆ ಏರಿಕೆ: ಮಹಿಳೆಯರ ಅಡುಗೆ ಮನೆಯ ಲೆಕ್ಕಾಚಾರಕ್ಕೆ ಸರ್ಕಾರದ ಹೊಡೆತ !

ಬೆಲೆ ಏರಿಕೆಯ ಬಿಸಿ ಈಗ ಜನಸಾಮಾನ್ಯರ ಅಡುಗೆ ಮನೆಯನ್ನೂ ತಟ್ಟಿದೆ. ಅಡುಗೆ...