ಬೀದರ್ | ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ; ಶಾಸಕ ಶೈಲೇಂದ್ರ ಬೆಲ್ದಾಳೆ ಎಚ್ಚರಿಕೆ

Date:

ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಮಂದಕನಳ್ಳಿ ಗ್ರಾಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಬಳಿಕ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

“ಹಿಂದೆ ಯಾವ ರೀತಿ ನೀವು ಕೆಲಸ ಮಾಡಿದ್ದೀರೊ ಗೊತ್ತಿಲ್ಲ, ಈಗ ನಾನು ಜನರ ಸೇವೆ ಮಾಡಲು ಶಾಸಕನಾಗಿದ್ದೇನೆ ನನಗೆ ನನ್ನ ಕ್ಷೇತ್ರದ ಜನರ ಹಿತ ಮುಖ್ಯ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಮೂಲ ಸೌಕರ್ಯ ಕೊರತೆ ಕಂಡು ಬಂದರೆ ತಕ್ಷಣ ಪರಿಹರಿಸಬೇಕು” ಎಂದು ಸೂಚಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಂದಕನಳ್ಳಿ ಗ್ರಾಮದಲಲ್ಲಿನ ಹನುಮಾನ ದೇವಸ್ಥಾನದ ಪಕ್ಕದಲ್ಲಿ ಹಲವು ದಿನಗಳಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ಹಾಗೆ ನಿಂತಿರುವ ಕುರಿತು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಸ್ಪಂದನೆ ನೀಡಿಲ್ಲ. ಹೀಗಾಗಿ ಗ್ರಾಮಸ್ಥರು ಶಾಸಕರಿಗೆ ದೂರು ನೀಡಿರುವ ಕಾರಣ ಈ ಕುರಿತು ಸ್ವತಃ ಶಾಸಕರೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ರಾಮಸ್ಥರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಳಿಕ ಗ್ರಾಮದ ಸ್ವಚ್ಛತೆ, ಕುಡಿಯುವ ನೀರು ಮೂಲ ಸೌಕರ್ಯ ಕುರಿತು ಪರಿಶೀಲನೆ ನಡೆಸಿ ಗ್ರಾಮಸ್ಥರ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿದರು.

ಸಣ್ಣ ಪುಟ್ಟ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂದಕನಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಧ್ಯಾರ್ಥಿಗಳ ಫಲಿತಾಂಶ ಕುರಿತು ಚರ್ಚೆ ನಡೆಸಿದರು. ಮಕ್ಕಳ ಪೋಷಕರೊಂದಿಗೆ ಸಲಹೆಗಳನ್ನು ಪಡೆದರು. ಶಿಕ್ಷಕರರು ಉತ್ತಮ ಶಿಕ್ಷಣ ನೀಡಲು ಶ್ರಮ ವಹಿಸುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ಪಾಲಕರು ಮನವಿ ಮಾಡಿದರು.

ವಿಧ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿಸಲು ಶಿಕ್ಷಕರು ಇನ್ನೂ ಶ್ರಮ ಪಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಖಡಕ್ ಸೂಚನೆ ನೀಡುವಂತೆ ಶಿಕ್ಷಣ ಅಧಿಕಾರಿಗಳಿಗೆ ತಿಳಿಸಿದರು.

ಈ ಸುದ್ದಿಓದಿದ್ದೀರಾ? ಬಳ್ಳಾರಿ | ಮನರೇಗಾ ಸಮಸ್ಯೆ ಪರಿಹಾರಕ್ಕೆ ಕಾರ್ಮಿಕರ ಆಗ್ರಹ

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್, ತಾ.ಪಂ ಸಹಾಯಕ ನಿರ್ದೇಶಕ ಸಂಜುಕುಮಾರ ಕಾಡವಾದ, ತಾ.ಪಂ ಸಹಾಯಕ ನಿರ್ದೇಶಕಿ ಲಕ್ಷ್ಮಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಅಖೀಲಾಡೇಶ್ವರಿ, ಶಿಕ್ಷಣ ಸಂಯೋಜಕ ಸಚಿದಾನಂದ, ಶಿಕ್ಷಣ ಅಧಿಕಾರಿ ಗೋಪಾಲರಾವ, ಮುಖಂಡರಾದ ಕುಶಲರಾವ ಯಾಬಾ, ಗ್ರಾಮದ ಮುಖಂಡರಾದ ದತ್ತಾತ್ರಿ ಲಕ್ಕಾ, ಚಂದ್ರಕಾಂತ ಪಿಲ್ಲಿ, ಕಾಶಿನಾಥ ಚನ್ನಪ್ಪ ಗೌರಶೆಟ್ಟಿ, ಧರ್ಮಣ್ಣ ಲಕ್ಕಾ, ಮಲ್ಲಿಕಾರ್ಜುನ್ ಹಲಬುರ್ಗೆ, ರಾಜು ಮಹಾರಾಜ, ಅನೀಲ ಕೋಳಿ, ಅನೀನ ಶೇರಿಕಾರ, ಗಂಗಾಧರ ಗೌರಶೆಟ್ಟಿ, ಸಂತೋಷ ಗೌರಶೆಟ್ಟಿ, ನರ್ಸಿಂಗ್ ಪಾಂಚಳಾ, ಗಂಗಾಧರ ದಾಲಗುಂಡಿ, ವೈಜನಾಥ ಪಿಲ್ಲಿ, ಅನೀಲ್ ಮೇತ್ರೆ, ಅವೀನಾಶ, ಕರಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೆನ್‌ಡ್ರೈವ್ ಕಾಮಕೃತ್ಯ | ಹಾಸನಕ್ಕೆ ಸೀಮಿತವಾ? ರಾಜ್ಯ ಮತದಾರರ ಕರ್ತವ್ಯವೇನು?

ರಾಯಕೀಯ ಯುವ ನಾಯಕನೊಬ್ಬರ ಕಾಮಕೃತ್ಯಗಳ ಪೆನ್‌ಡ್ರೈನ್‌ ಹಾಸನ ಜಿಲ್ಲೆಯಲ್ಲಿ ಅಂತಕ ಸೃಷ್ಟಿಸಿದೆ....

ಹಾಸನ | ಪೆನ್‌ಡ್ರೈವ್ ಪ್ರಕರಣ; ಪ್ರಭಾವಿ ಕುಟುಂಬದ ಅಟ್ಟಹಾಸ ಮಟ್ಟಹಾಕಲು ಒಕ್ಕಲಿಗ ಸಮುದಾಯ ಮುಂದಾಗುವುದೇ?

ಹಾಸನ ನಗರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಪೆನ್‌ಡ್ರೈವ್ ಮುಖಾಂತರ ಅಶ್ಲೀಲ...

ಪೆನ್‌ಡ್ರೈವ್ ಆತಂಕ ಕೊನೆಗೊಳಿಸಿ – ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ; ಸಿಪಿಐಎಂ ಆಗ್ರಹ

"ಕಳೆದ ಎರಡು ಮೂರು ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ವಿಚಾರ ಭಾರೀ ಚರ್ಚೆಯಾಗುತ್ತಿದೆ....

ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ ಎಂದ ನಟಿ ಶೃತಿ: ಮಹಿಳಾ ಆಯೋಗದಿಂದ ನೋಟಿಸ್

“ಪ್ರೀ ಬಸ್ ಬಿಟ್ಟ ತಕ್ಷಣ ಹೆಣ್ಣುಮಕ್ಕಳು ತೀರ್ಥಯಾತ್ರೆ ಹೋಗ್ತೇವೆಂದು ಹೇಳಿ, ಎಲ್ಲಿಗೆ...