ರೈತರಿಂದ ಖರೀದಿಸುವ ಹಾಲಿನ ಬೆಲೆ ಇಳಿಕೆ; 1 ರೂ. ಕಡಿತ

Date:

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) ಹಾಲಿನ ದರವನ್ನು ಕಡಿಮೆ ಮಾಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ. ತನ್ನ ವ್ಯಾಪ್ತಿಯಲ್ಲಿ ಪ್ರತಿ ಲೀಟರ್‌ ಹಾಲಿಗೆ 1 ರೂ. ಕಡಿತ ಮಾಡಿ ಮನ್ಮುಲ್ ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಜೂನ್ 1ರಿಂದಲೇ ಜಾರಿಯಾಗಲಿದೆ ಎಂದೂ ಹೇಳಿದೆ.

ಮನ್ಮುಲ್ ಆಡಳಿತ ಮಂಡಳಿಯ ಸಭೆ ಮೇ 26 ರಂದು ನಡೆದಿತ್ತು. ಆ ಸಭೆಯಲ್ಲಿ ದರ ಕಡಿತ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ, ಜೂನ್‌ 1ರಿಂದ ಜಾರಿಗೆ ಬರುವಂತೆ ಪರಿಷ್ಕೃತ ದರವನ್ನು ಘೋಷಿಸಲಾಗಿದೆ ಎಂದು ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ ಪಿ.ಆರ್ ಮಂಜೇಶ್ ತಿಳಿಸಿದ್ದಾರೆ.

ಮನ್ಮುಲ್‌ನಲ್ಲಿ ಪ್ರತಿದಿನ 9,38,035 ಕೆಜಿ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ, ಬೇಸಿಗೆಯ ಕಾರಣದಿಂದಾಗಿ, ಹಸಿರು ಮೇವಿನ ಕೊರತೆ ಉಂಟಾಗಿತ್ತು. ಹಾಲಿನ ಇಳುವರಿ ಕಡಿಮೆಯಾಗಿತ್ತು. ಹಾಗಾಗಿ, ರೈತರಿಗೆ ನೆರವು ನೀಡುವ ಉದ್ದೇಶದಿಂದ ಪ್ರತಿ ಲೀಟರ್‌ಗೆ 2 ರೂ. ಹೆಚ್ಚುವರಿಯಾಗಿ ನೀಡಲಾಗುತ್ತಿತ್ತು. ಇದೀಗ, ಬೇಸಿಗೆ ಕಳೆದು, ಮಳೆಗಾಲ ಆರಂಭವಾಗುತ್ತಿದೆ. ಹಸಿರು ಮೇವಿನ ಲಭ್ಯತೆ ಇದೆ. ಹೀಗಾಗಿ, ದರ ಪರಿಷ್ಕರಿಸಿದೆ. 1 ರೂ. ಇಳಿಸಲಾಗಿದೆ ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪರಿಷ್ಕೃತ ದರದಂತೆ ಪ್ರತಿ ಲೀಟರ್‌ ಹಾಲಿಗೆ ಸಂಘಗಳಿಗೆ 32.15 ರೂ. ಹಾಗೂ ಹಾಲು ಉತ್ಪಾದಕರಿಗೆ 31.25 ರೂ. ನೀಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಪೊರೇಟ್-ಕೋಮುವಾದ ಮೈತ್ರಿ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿದೆ: ಸುರೇಶ್ ಕಲ್ಲಾಗರ

ಉಡುಪಿಯಲ್ಲಿ ಮೇ ದಿನಾಚರಣೆ ಕಾರ್ಪೊರೇಟ್-ಕೋಮುವಾದ ಮೈತ್ರಿಯಿಂದ ಕಾರ್ಮಿಕರನ್ನು ಬಂಡವಾಳಗಾರರ ಗುಲಾಮರಾಗಿ ಮಾಡಿ...

ಬೆಂಗಳೂರು | ಜೈನ ಸನ್ಯಾಸಿಯಾದ ಉದ್ಯಮಿಯ ಪತ್ನಿ ಮತ್ತು ಮಗ

ಗುಜರಾತ್‌ನ ದಂಪತಿಗಳು ಸನ್ಯಾಸಿತ್ವ ಸ್ವೀಕರಿಸಲು ₹200 ಕೋಟಿ ಮೌಲ್ಯದ ಸಂಪತ್ತನ್ನು ದಾನ...

ಬೆಂಗಳೂರು | ಕಡಿಮೆ ಸಮಯದಲ್ಲಿ ಝೀರೋ ಬ್ಯಾಕ್ಟೀರಿಯಲ್‌ ಸಂಸ್ಕರಿಸಿದ ನೀರು ಉತ್ಪಾದನೆ; ದೇಶೀಯ ತಂತ್ರಜ್ಞಾನ ಅಳವಡಿಕೆ

ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಜಲಮಂಡಳಿ, ಕೇವಲ 2 ವಾರಗಳ...