ಬಳ್ಳಾರಿ | ಮನರೇಗಾ ಸಮಸ್ಯೆ ಪರಿಹಾರಕ್ಕೆ ಕಾರ್ಮಿಕರ ಆಗ್ರಹ

Date:

ಕೂಲಿ ಮಾಡಿ ಜೀವನ ಸಾಗಿಸುವ ಬಡವರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ವರದಾನವಾಗಿದೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಎನ್‌ಎಂಆರ್‌ ನೀಡದೇ ಇರುವುದರಿಂದ ಬದುಕು ಅತಂತ್ರವಾಗಿದೆ ಎಂದು ಮನರೇಗಾ ತಾಲೂಕು ಸಂಚಾಲಕಿ ಪವಿತ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನಲ್ಲಿ ಮನರೇಗಾ ಸಮಸ್ಯೆ ಪರಿಹಾಕ್ಕೆ ಒತ್ತಾಯಿಸಿ ಗ್ರಾಮೀಣ ಕಾರ್ಮಿಕರ ಸಂಘಟನೆ ವತಿಯಿಂದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಸ್ ಮಲ್ಲನಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

“ಕಾನೂನಿನಲ್ಲಿ ಕಷ್ಟಪಟ್ಟು ಮಣ್ಣಿನ ಕೆಲಸ ಮಾಡಲು ಕಾರ್ಮಿಕರು ಅಳತೆ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಒಂದು ವಾರ ಕೆಲಸ ಕೊಟ್ಟರೆ, ಎರಡು ವಾರ ಮನೆಯಲ್ಲೇ ಇರಬೇಕು” ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಳೆದ ಎರಡು ವರ್ಷದಿಂದಲೂ ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ನೂರು ದಿನಗಳ ಕೆಲಸ ಸಿಕ್ಕಿಲ್ಲ. ನಮಗೆ ಅನವಶ್ಯಕತೆ ಇದ್ದಾಗ ಅರ್ಜಿ ಸಲ್ಲಿಸಿದರೂ, ಕೆಲಸ ಕೊಡುವುದಿಲ್ಲ. ನೆಪ ಹೇಳುತ್ತಾ ಪಿಡಿಒ ಮತ್ತು ಎಂಜಿನಿಯ‌ರ್ ಕಣ್ತಪ್ಪಿಸಿ ಹೋಗುತ್ತಿದ್ದಾರೆ” ಎಂದು ಆರೋಪಿಸಿದರು.

“ಒಂದು ಕಡೆ ಇಂತಹ ಸಮಸ್ಯೆಗಳಿದ್ದು, ಇನ್ನೊಂದು ಕಡೆ ನಿಯತ್ತಾಗಿ ಅಳೆತ ಕೆಲಸವನ್ನು ಈ ಬಿರು ಬಿಸಿಲಿನಲ್ಲಿ ಮಾಡಿದರೂ ತಾಂತ್ರಿಕ ಸಹಾಯಕ(ಟಿಎ) ಸ್ಥಳ ಪರಿಶೀಲನೆ ಮಾಡದೇ, ಡಿಎಫ್‌ಟಿ, ಎಂಟಿಇ, ಅವೈಜ್ಞಾನಿಕವಾಗಿ ಮಾಡಿ, ಗಟ್ಟಿ ಮಣ್ಣು ಇದ್ದರೂ ಕೆಲಸ ಹಂಚಿ, ಕೊನೆಗೆ ಕಡಿಮೆ ಕೆಲಸ ಎಂಬುದಾಗಿ ಬರೆದು ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುತ್ತಿರುವ ಕಾರ್ಮಿಕರಿಗೆ ಗೌರವಯುತ ಕೂಲಿ ಸಿಗದಂತಾಗಿದೆ” ಎಂದು ಅವಲತ್ತುಕೊಂಡಿದ್ದಾರೆ.

“ಪ್ರತಿ ಕಾರ್ಮಿಕರಿಗೂ 316 ರೂ.ಗಳ ನಿಗದಿ ಇದ್ದು, ತಾಂತ್ರಿಕ ಸಹಾಯಕರಿಂದ ಅತಿ ಕಡಿಮೆ ಕೂಲಿ ಸಿಗುತ್ತಿದೆ. ಇಂತಹ ಟಿಎಗಳನ್ನು ಕೆಲಸದಿಂದ ತೆಗೆದು ಹಾಕಬೇಕು. ಸ್ಥಳ ಪರಿಶೀಲಿಸಿ ಕೆಲಸ ಮಾಡುವ ಮಧ್ಯದಲ್ಲಿ ಕಾರ್ಮಿಕರ ಅಳತೆ ಪಡೆದು, ಹೆಚ್ಚು ಕಡಿಮೆ ಇರುವ ಬಗ್ಗೆ ಲೆಕ್ಕ ಮಾಡಿ ತಿಳಿಸಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸೀತನೂರು ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರ ಆಗ್ರಹ

“ಮನರೇಗಾ ಕಾರ್ಮಿಕರಿಗೆ ನಿಗದಿತ ಕೂಲಿಯನ್ನು ಹಾಕದೆ ₹240, ₹250 ಮತ್ತು ₹260 ಹಾಕುತ್ತಿದ್ದು, ನಮ್ಮ ಕೂಲಿ ಗ್ಯಾರಂಟಿ ಇಲ್ಲದಂತಾಗಿದೆ. ಈ ಕುರಿತು ಎರಡು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಕಾರ್ಮಿಕರ ನಮಗೆ ನಿಗದಿತ ಸಮಯಕ್ಕೆ ಕೆಲಸ ಪಾವತಿಸಲು ವ್ಯವಸ್ಥೆ ಮಾಡಿ, ಎಲ್ಲ ಕಾಯಕ ಕೂಲಿ ಬಂಧುಗಳಿಗೆ ಮೇಟ್ ಜಾರ್ಜ್‌(ಗೌರವಧನ) ಕೊಡಿಸಿ ಹಾಗೂ ಈ ಹಿಂದೆ ಕೆಲಸದ ಸ್ಥಳದಲ್ಲಿ ಎಮ್ಮಿಗನೂರು ಗ್ರಾಮದ ಕೂಲಿ ಕಾರ್ಮಿಕರ ಮರಣ(ಮುದ್ದಾಪುರ ಸಣ್ಣ ಜಡೆಪ್ಪ ಎಮ್ಮಿಗನೂರು)ಹೊಂದಿದ್ದು, ಆ ಕುಟುಂಬಕ್ಕೆ ಕೂಡಲೇ ಪರಿಹಾರ ಪಾವತಿಸಬೇಕು. ಕೆಲಸದ ಸ್ಥಳದಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಿ, ಗೌರವಯುತ ಕೂಲಿ ಕೊಡಬೇಕು” ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭಾಗ್ಯ, ಅಶ್ವಿನಿ, ಹುಲಿಗೆಮ್ಮ, ಸುನೀತಾ, ಹನುಮಂತ, ಅಂಜಿನಿ ಶಿವಶಂಕಪ್ಪ, ವಿರೇಶ, ಜಡಿಯಪ್ಪ, ಶಾಂತಮ್ಮ, ಅಕ್ಕಮ್ಮ ಸೇರಿದಂತೆ ಇತರರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ

ಪ್ರತಿವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬಜೆಟ್‌ನಲ್ಲಿ ಕಸ ವಿಲೇವಾರಿಗೆಂದೇ ಹಣ...

ಚನ್ನಪಟ್ಟಣ ಉಪಚುನಾವಣೆಯಲ್ಲಿ ದರ್ಶನ್ ಕಣಕ್ಕಿಳಿಸಲು ಡಿಕೆ ಸಹೋದರರು ಯೋಜಿಸಿದ್ದರು: ಸಿಪಿ ಯೋಗೇಶ್ವರ್

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಚನ್ನಪಟ್ಟಣ ಉಪಚುನಾವಣೆಯಲ್ಲಿ...

ಹಾಸನ | ಬೀದಿ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳ ದರ್ಪ; ಬದುಕು ಬೀದಿ ಪಾಲು

ಶಿಲ್ಪಕಲೆಗಳ ತವರೂರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ, ಚನ್ನಕೇಶವನ ನಾಡು ವಗೈರೆ...

ಹಾಸನ | 3ನೇ ಅವಧಿಗೆ ಮೋದಿ ಪ್ರಧಾನಿ; 12 ಕಿ.ಮೀ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದ ಮೋದಿ ಭಕ್ತ

ಮೋದಿ 3ನೇ ಬಾರಿಗೆ ಪ್ರಧಾನಿಯಗಬೇಕೆಂದು ಹರಕೆ ಹೊತ್ತಿದ್ದ ಮೋದಿ ಅಭಿಯಾನಿಯೊಬ್ಬ, 12...