ಹಾಸನ | ಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ಪಸ್ಥ; ಆಸ್ಪತ್ರೆಗೆ ದಾಖಲು

Date:

ಮಧ್ಯಾಹ್ನದ ಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ವಸ್ಥರಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ.

ಸದ್ಯ ಅಸ್ವಸ್ಥ ಸೈನಿಕರಿಗೆ ಸಕಲೇಶಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಡಗರಹಳ್ಳಿಯಲ್ಲಿ ಮಿಲಿಟರಿ ಟ್ರೈನಿಂಗ್‌ ಕ್ಯಾಂಪ್‌ ಇದ್ದು, ವಾಹನ ಚಾಲನಾ ತರಬೇತಿಗೆ ಸೈನಿಕರು ಅಶ್ವಸ್ಥರಾಗಿದ್ದಾರೆ.

ಮಧ್ಯಾಹ್ನ ಕ್ಯಾಂಪ್‌ನಲ್ಲೇ ತಯಾರಾದ ಆಹಾರ ಸೇವಿಸಿದ ಬಳಿಕ ಸೈನಿಕರು ಅಸ್ವಸ್ಥತೆಗೆ ಒಳಗಾಗಿದ್ದಾರೆ. ತಾಲೂಕು ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿದ್ದು, ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ.

ಏಕಕಾಲಕ್ಕೆ 35 ಮಂದಿ ಅಸ್ವಸ್ಥರಾಗಿದ್ದು, ಸಕಲೇಶಪುರ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ. ಒಂದು ಬೆಡ್‌ ಮೇಲೆಯೇ ಇಬ್ಬರು ಸೈನಿಕರನ್ನು ಮಲಗಿಸಿ ಚಿಕಿತ್ಸೆ ನೀಡುತ್ತಿದುರುವುದನ್ನು ಗಮನಿಸಬಹುದಾಗಿದೆ.

ಈ ಸುದ್ದಿ ಓದಿದ್ದೀರಾ? ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ತಮ್ಮ ಹಕ್ಕುಗಳಿಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಗೌರವಯುತ ಜೀವನ ನಡೆಸಲು ತಮಗೆ ಲಿಂಗತ್ವ ಅಲ್ಪಸಂಖ್ಯಾತರ...

ಕಲಬುರಗಿ | ಅಕ್ರಮ ಸಾಗಾಟ; 9 ಲೀಟರ್ ಮದ್ಯ, 45 ಲಕ್ಷ ರೂ. ಮೌಲ್ಯದ ಬಸ್ ವಶ

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಸ್‌ ತಡೆದು ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ...

ಯಾದಗಿರಿ | ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ

ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ...

ಗದಗ | ಜನತಾದರ್ಶನ: ವೃದ್ಧೆಗೆ ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ ವಿತರಣೆ

ಶತಾಯುಷಿ ವೃದ್ಧೆಯೊಬ್ಬರು ಆಧಾರ್ ಕಾರ್ಡ್‌ ಇಲ್ಲದ ಕಾರಣ, ಮಾಸಾಶನ ಪಡೆಯಲು ಸಾಧ್ಯವಾಗಿರಲಿಲ್ಲ....