ಶಿವಮೊಗ್ಗ | ಕೆರೆಗೆ ವಿಷಕಾರಿ ನೀರು; ಸಾವನ್ನಪ್ಪುತ್ತಿವೆ ಮೀನುಗಳು

Date:

ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗದ ನಿದಿಗೆ ಗ್ರಾಮದ ಕೆರೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿವೆ. ಕೆರೆಗೆ ಕಲುಷಿತ ನೀರು ಸೇರಿಸುವುದರಿಂದ ಈ ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಈ ನಿದಿಗೆ ಗ್ರಾಮ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಿ.ಎಚ್. ರಸ್ತೆ ಪಕ್ಕದಲ್ಲಿ ಇದ್ದು. ಇದನ್ನು ಚುಂಚದ್ರಿ  ಫಿಶ್ ಡೆವಲಪ್ಮೆಂಟ್ ಮತ್ತು ವಾಟರ್ ಸ್ಪೋರ್ಟ್ ಅಡಿಯಲ್ಲಿ ಮೋಹನ್ ಎಂಬುವವರು ಬೋಟಿಂಗ್ ಹಾಗೂ ಇನ್ನಿತರೇ ಆಟದ ವ್ಯವಸ್ಥೆಯನ್ನು ಶುಲ್ಕ ವಿಧಿಸಿ ನಡೆಸುತ್ತಿದ್ದಾರೆ.

ಮೂರು ದಿನದ ಹಿಂದೆ ಸಾವಿರಾರು ಮೀನುಗಳನ್ನು ಕೆರೆಗೆ ಬಿಡಲಾಗಿತ್ತು. ಇದೀಗ ದಿನ ನಿತ್ಯ ನೂರಾರು ಮೀನುಗಳು ಸಾವನಪ್ಪುತ್ತಿದ್ದೂ ಕೆಟ್ಟ ವಾಸನೆ ಕೂಡ ಬರುತ್ತಿದೆ. ಈ ಸಂಬಂಧ ಮೋಹನ್ ಅವರನ್ನು ಸಂಪರ್ಕಿಸಲು ಈ ದಿನ.ಕಾಮ್ ಪ್ರಯತ್ನಿಸಿದಾಗ ತಾನು ಸಭೆಯೊಂದರಲ್ಲಿ ವ್ಯವಸ್ಥವಾಗಿದ್ದೇನೆ ಎಂದು ಹೇಳಿ ಘಟನೆ ಸಂಬಂಧ ಪ್ರತಿಕ್ರಿಯಿಸಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಂತರ ಶಿವಮೊಗ್ಗ ಕೃಷಿಕ್ ಸಂಘದ ನಿರ್ದೇಶಕರಾದ ವೆಂಕಟೇಶ್ ನಾಯ್ಕ್ ನಮ್ಮ ಈ.ದಿನ.ಕಾಮ್ ನೊಂದಿಗೆ ಮಾತನಾಡಿ, ನದಿಗೆ ಗ್ರಾಮದ ಉಚೈಣೆ ಕೆರೆ ನೀರು ನಿದಿಗೆ ಗ್ರಾಮದ ಕೆರೆಗೆ ಬಿಟ್ಟಿದ್ದು ಕೆರೆಯಲ್ಲಿ ಸ್ಟಾಕ್ ಆಗಿದ್ದ ನೀರನ್ನು ಈ ಕೆರೆಗೆ ಬಿಟ್ಟಿದ್ದಾರೆ. ಹಾಗೇ ರೈತರು ಕೆರೆಯಲ್ಲಿ ಅಲ್ಲಲ್ಲಿ ಟ್ಯೂಬ್‌ಗಳನ್ನು ಮಾಡಿಕೊಂಡಿದ್ದು, ಇದು ಭದ್ರಾ ಎಲ್ ಬಿ.ಸಿ ಉಪನಾಲೆ ರಸ್ತೆ ಪಕ್ಕದಲ್ಲಿ ಇದೆ. ಬೇಸಿಗೆಯಾದ್ದರಿಂದ ಚಾನೆಲ್ ನಲ್ಲಿ ನೀರು ಸಹ ಇಲ್ಲದ ಕರಾಣ ಮಾಚೇನಹಳ್ಳಿಯಲ್ಲಿ ಇರುವ ಶಾಹಿ ಗಾರ್ಮೆಂಟ್ಸ್ ನಾ ಕೆಮಿಕಲ್ ನೀರು ಎಲ್ಲಾ ಕೆರೆಗೆ ತುಂಬಿಕೊಂಡ ಪರಿಣಾಮ, ಮೂರು ನಾಲ್ಕು ದಿವಸದ ಹಿಂದೆ ಕೆರೆಗರ ಬಿಟ್ಟಿದ್ದ ಮೀನಿನ ಮರಿಗಳನ್ನು ಬಿಟ್ಟದರು. ಅವು ಈಗ ಸಾವನ್ನಪ್ಪುತ್ತಿವೆ ಎಂದರು.

ಇಂದು ಬೆಳ್ಳಗೆ ಸಹ ಸತ್ತಿರುವ ಮೀನುಗಳು ಕೆರೆಯಲ್ಲಿ ತೆಲುತ್ತಿರುವುದು ಕಾಣಿಸುತ್ತಿದೆ. ಭದ್ರಾವತಿ ಭಾಗದಿಂದ ಕೆರೆ ನೋಡಿದರೆ ಕೆರೆಯಲ್ಲಿ ಉದ್ದಕ್ಕೆ ಮೀನುಗಳ ಸತ್ತು ಬಿದ್ದಿರುವುದು ಕಾಣಿಸುತ್ತದೆ ಎಂದರು. ಕೆರೆಯ ನೀರು ಕೂಡ ನೊರೆಯಾಗಿದೆ, ಬಿಳಿಯಾಗಿದೆ ಇದು ಶಾಹಿ ಗಾರ್ಮೆಂಟ್ಸ್ ಕೆಮಿಕಲ್ ಮಿಶ್ರಣ. ಅದನ್ನು ಶಾಹಿ ಗಾರ್ಮೆಂಟ್ಸ್ ಅವರು ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದರು.

ನಮ್ಮಿಂದ ಶಿವಮೊಗ್ಗ ಭಾಗದ 20 ಹಳ್ಳಿಗೆ ತೊಂದರೆ ಆಗಿರುವದು ನಿಜ ಎಂದು ಕಂಪನಿ ಒಪ್ಪುಕೊಂಡಿದ್ದು, ಜಲಮಾಲಿನ್ಯ ಮಂಡಳಿ ಬೆಂಗಳೂರು ಇವರಿಗೆ ಮಾಹಿತಿ ನೀಡಿದ್ದಾರೆ. ಇದುಕ್ಕೂ ಮುನ್ನ ಚಿತ್ರದುರ್ಗ ಪ್ರಾದೇಶಿಕ ಕಚೇರಿಯವರು ಶಾಹಿ ಗಾರ್ಮೆಂಟ್ಸ್ ಬಾಗಿಲು ಮುಚ್ಚುವುದಕ್ಕೆ ಆದೇಶ ನೀಡಿದ್ದರು. ಅದುಕ್ಕು ಮುನ್ನ ಶಿವಮೊಗ್ಗ ಪೋಲ್ಯೂಷನ್ ಕಂಟ್ರೋಲ್ ಬೋರ್ಡ್ ಇಂದ ಶಾಹಿ ಗಾರ್ಮೆಂಟ್ಸ್ ಅವರಿಗೆ ನೋಟೀಸ್ ನೀಡಿದ್ದಾರೆ ಎಂದು ತಿಳಿಸಿದರು.

ಸಿಎಸ್‌ಆರ್‌ ಫಂಡ್ ಮೂಲಕ 4ಕೋಟಿ 12 ಲಕ್ಷ ಪರಿಹಾರವನ್ನು ಇಲ್ಲಿನ ಸಂತ್ರಸ್ತರಿಗೆ ಈವರೆಗೂ ಶಾಹಿ ಗಾರ್ಮೆಂಟ್ಸ್ ಕೊಟ್ಟಿಲ್ಲ. ಇದರ ಪರಿಹಾರ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದಾಗ, ಗಾಬರಿಗೊಂಡು ಈಗ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನು ಮಲವಗೋಪ್ಪದಲ್ಲಿ ಇರುವ ಕೆರೆಯಲ್ಲಿ 70,000 ಮೀನು ಮೂರು ತಿಂಗಳ ಹಿಂದೆ ಸತ್ತು ಹೋದವು. ಅವಾಗ್ ಶಾಹಿ ಗಾರ್ಮೆಂಟ್ಸ್ ಅವರು ನೀವು ಮಾರ್ಕೆಟ್ ಇಂದ ಸತ್ತಿರುವ ಮೀನನ್ನು ಬುಟ್ಟಿಯಲ್ಲಿ ತಂದು ಕೆರೆಗೆ ಹಾಕಿ ಸುಳ್ಳು ಹೇಳುತ್ತೀರಾ ಎಂದು ನಮ್ಮ ರೈತರ ಮೇಲೆ ಆರೋಪ ಮಾಡಿದರು ಎಂದು ಹೇಳುತ್ತಾರೆ ವೆಂಕಟೇಶ ನಾಯಕ್.‌

ಈಗಲೂ ಸಹ ನಿದಿಗೆ ಗ್ರಾಮದಲ್ಲಿ ಇರುವ ಉಚೈಣಿ ಕೆರೆಯ ನೀರು ನೋಡಿದರೆ ನಿಮಗೆ ಗೊತ್ತಾಗುತ್ತೆ. ಈ ಕೆರೆಯು ಶಾಹಿ ಗಾರ್ಮೆಂಟ್ಸ್ ಪಕ್ಕಕ್ಕೆ ಬರುತ್ತದೆ . ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಶಾಹಿ ಗಾರ್ಮೆಂಟ್ಸ್ ಇಂದ ಎಂದು ದೂರಿದರು.

ನಾವು ಪೊಲೀಸ್ ಕಂಪ್ಲೇಂಟ್ ನೀಡಲು ಹೋದಾಗ ಐಪಿಸಿ ಸೆಕ್ಷನ್ ಮುಖಾಂತರ ಕೇಸ್ ಹಾಕಲು ಬರುವುದಿಲ್ಲ. ಆದರೆ, ನೀವು ಜಿಲ್ಲಾಧಿಕಾರಿ ಮೂಲಕ ಆ ಸಮಿತಿಯವರು ಎಲ್ಲಾ ಕಡೆ ಇನ್ಸ್ಪೆಕ್ಷನ್ ಮಾಡಿ ಅವರು ತಪ್ಪಿತಸ್ಥರು. ಎಂದರೆ, ಅವಾಗ್ ಮಾತ್ರ ನಾವು ಎಫ್‌ಐಆರ್ ಹಾಕಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲೆ ರಕ್ಷಣಾಧಿಕಾರಿ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಅದ ಸತ್ಯನಾರಾಯಣ ಅವರು ತಿಳಿಸಿದ್ದಾರೆ ಎಂದರು.

ಇದರ ನಂತರ ನಿದಿಗೆ ಗ್ರಾಮಸ್ಥರಾದ ಆನಂದ್ ನಮ್ಮ ಈ ದಿನ.ಕಾಮ್ ನೊಂದಿಗೆ ಮಾತನಾಡಿ ಕೆಲ ದಿನಗಳ ಹಿಂದೆ ಸಾವಿರಾರು ಮೀನುಗಳು ಸತ್ತೋಗಿದಾವೆ ಎಂಬುದು ಸರಿಯಾಗಿ ಗೊತ್ತಾಗುತ್ತಿಲ್ಲ. ಆದರೆ, ಉಚೈಣಿ ಕೆರೆ ನೀರು ಕಲುಷಿತ ಆಗುವುದಕ್ಕೆ ಕಾರಣ ಶಾಹಿ ಗಾರ್ಮೆಂಟ್ಸ್ ಎಂಬುದು ಸತ್ಯ. ಆದರೆ, ಯಾವ ಕಾರಣಕ್ಕೆ ಮೀನುಗಳ ಸಾವು ಆಗಿದೆ ಎಂಬುದು ತನಿಖೆ ಆಗಬೇಕು. ಆದರೆ, ಗಾರ್ಮೆಂಟ್ಸ್ ನಡೆಸುವುದಕ್ಕೆ ರೈತರ, ಗ್ರಾಮಸ್ಥರ ವಿರೋಧವಿಲ್ಲ ಎಂದರು.

ಶಾಹಿ ಗಾರ್ಮೆಂಟ್ಸ್ ಅವರು ಕಲುಷಿತ ನೀರು ಬಿಡದಂತೆ ಅಥವಾ ಅದನ್ನು ಪೂರ್ಣ ಫಿಲ್ಟರ್ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಸುತ್ತಮುತ್ತಲಿನಲ್ಲಿ  ರೈತರಿಗೆ ಗ್ರಾಮಸ್ಥರಿಗೆ ಒಳ್ಳೆ ಪರಿಸರ ಒದಗಿಸುವಂತೆ ಮಾಡಿಕೊಡಬೇಕು. ಶಾಹಿ ಗಾರ್ಮೆಂಟ್ಸ್ ಅವರು ಏನು ಕೆರೆಯಲ್ಲಿ ಫಿಲ್ಟರ್ ಹಾಕಿದ್ದೇವೆ ಕೆರೆಗೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಏನು ಕೆಲಸ ಮಾಡುತ್ತಿಲ್ಲ ನಾಮಕವಸ್ಥೆಗೆ ಮಾಡಿದ್ದಾರೆ ಅಷ್ಟೇ ಎಂದರು

ನಾವು ಸುತ್ತಮುತ್ತಲಿನ ಗ್ರಾಮಸ್ಥರು, ರೈತೆರಲ್ಲ ಹೋರಾಟ ಮಾಡಿದ ನಂತರ ಇತ್ತೀಚಿನ ದಿನಗಳಲ್ಲಿ ನಾವು ಇನ್ನಷ್ಟು ಟ್ಯಾಂಕ್ ಮೇಲಕ್ಕೆ ಏರಿಸುವ ಕೆಲಸ ಮಾಡುತ್ತೇವೆ ನೀರು ಕಲುಷಿತ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ನಾವು ಇದರ ಕುರಿತು ಉಗ್ರ ಹೋರಾಟ ಎಚ್ಚರಿಕೆ ನೀಡಿದ ನಂತರ ಸ್ವಲ್ಪ ಮಟ್ಟಿಗೆ ಎಚ್ಚರ ಗೊಂಡಿದ್ದಾರೆ ಎಂದರು.

ಒಟ್ಟಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ನೀರು ಕಲುಷಿತವಾಗುತ್ತಿರುವುದರಿಂದ ಭಾರಿ ತೊಂದರೆ ಅನುಭವಿಸುತ್ತಿದ್ದು, ಇದಕ್ಕೊಂದು ಪರಿಹಾರ ಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಭಾರಧ್ವಾಜ್ ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಸಾಯಿ ಗಾರ್ಮೆಂಟ್ ಕಾರ್ಖಾನೆಯ ನೀರು ಭದ್ರಾ ಎಲ್‌ ಬಿ ಸಿ ನೀರಾವರಿ ಕಾಲುವೆಯ ಮೂಲಕ ಬಿದರೆಕೆರೆ, ಮಲವಗೊಪ್ಪ ಕೆರೆ, ಹರಿಗೆ ಕೆರೆ, ಸಂತೆ ಕಡೂರು ಕೆರೆ, ದುಮ್ಮಳ್ಳಿ ಕೆರೆ ಹೀಗೆ ಹತ್ತಕ್ಕೂ ಹೆಚ್ಚು ಕೆರೆಗಳ ಪ್ರತಿ ವರ್ಷ, ಸಾವಿರಾರು ಚಿಕ್ಕ ನೀನು ಮರಿಗಳ ಜೊತೆ ಜೊತೆಯಲಿ ದೊಡ್ಡ ದೊಡ್ಡ ಮೀನುಗಳು ಸತ್ತು ಹೋಗುತ್ತಿದ್ದರು. ಮೀನು ಸಾಕಾಣಿಕೆ ಮಾಲೀಕರು ಸಂಬಂಧಪಟ್ಟವರಿಗೆ ದೂರು ನೀಡುತ್ತಿಲ್ಲ ಯಾಕೆಂದರೆ ಉಳಿದ ರೋಗ ಗ್ರಸ್ತ ಕೆರೆಯ ಮೀನುಗಳನ್ನು ಮಾರುಕಟ್ಟೆ ಯಲ್ಲಿ ಮಾರಾಟ ಮಾಡುವುದು ಕಷ್ಟವಾಗುತ್ತದೆ ಎಂದು. ಅನ್ಯಾಯವಾದರೂ ಸಂಬಂಧಪಟ್ಟವರು ಪ್ರಶ್ನಿಸುವುದಿಲ್ಲವೆಂದರೆ, ಇನ್ನು ಐದಾರು ವರ್ಷಗಳಲ್ಲಿ ಒಳ್ಳೆಯ ನೀರು ಗಾಳಿ ಮರಿಚಿಕೆ, ಗೌರ್ಮೆಂಟ್ ಬೇರೆ ಕಡೆ ಹಾಕಿಕೊಳ್ಳುತ್ತಾರೆ, ನಮ್ಮ ಆರೋಗ್ಯವಾದ ಕೃಷಿ ಭೂಮಿ ಪೂರ್ತಿ ಬರಡು ಆಗಿರುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ: ಪ್ರದೀಪ್ ಈಶ್ವರ್

ರಾಜ್ಯದ ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಆದ್ದರಿಂದ ಕ್ಷೇತ್ರದ ಹಿತ...

ಬೀದರ್‌ | ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪಕ್ಷಕ್ಕೆ ಲಿಂಗಾಯತರು ಬೆಂಬಲಿಸಿ : ರೊಟ್ಟೆ

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಪಕ್ಷಕ್ಕೆ ಈ ಬಾರಿಯ...

ವಿಜಯಪುರ | ಬಿಜೆಪಿ ಸುಳ್ಳುಗಳು ಇನ್ನು ನಡೆಯುವುದಿಲ್ಲ: ಲಕ್ಷ್ಮಣ ಸವದಿ ವಾಗ್ದಾಳಿ

ಮೋದಿ ಮತ್ತವರ ಬಳಗವಾಗಿರುವ ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಬಾರಿ...