ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ ಮಲೆನಾಡಿನ ಅಡಿಕೆ ಬೆಳೆಗಾರರ ಆಶಾಕಿರಣ: ಬಿ ಎ ರಮೇಶ್ ಹೆಗ್ಡೆ

Date:

“ಜಯಪ್ರಕಾಶ್ ಹೆಗ್ಡೆ ಅವರು ಅಡಿಕೆ ಬೆಳೆಗಾರರ ಆಶಾಕಿರಣ. ಕೇವಲ ಎರಡು ವರ್ಷಗಳಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಪ್ರತಿನಿಧಿಸಿದ್ದರು. ಆದರೆ, ಅಡಿಕೆಯ ಧಾರಣೆ ಹೆಚ್ಚಳಕ್ಕೆ ಜಯಪ್ರಕಾಶ್ ಹೆಗ್ಡೆ ಕಾರಣಕರ್ತರು ಎಂದರೆ ತಪ್ಪಾಗಲಾರದು” ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಬಿ ಎ ರಮೇಶ್ ಹೆಗ್ಡೆ ಹೇಳಿದರು.

ಈ ದಿನ.ಕಾಮ್‌ ಜೊತೆ ಮಾತನಾಡಿದ ಅವರು, “ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ವಿದೇಶಿ ಆಮದು ಅಡಿಕೆ ಖರೀದಿ ಪ್ರತಿ ಕೆ.ಜಿ.ಗೆ ₹35 ಇತ್ತು. ಅಡಿಕೆ ಧಾರಣೆ ಪ್ರತಿ ಕ್ವಿಂಟಾಲ್‌ಗೆ ₹10,000 ಇತ್ತು. 2012ರಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ ಚಿಕ್ಕಮಗಳೂರು ಸಂಸದರಾಗಿ ಆಯ್ಕೆಯಾದ ನಂತರ ಅಂದಿನ ಡಾ. ಮನಮೋಹನ್ ಸಿಂಗ್ ಸರ್ಕಾರದ ಮೇಲೆ ಒತ್ತಡ ತಂದು ವಿದೇಶಿ ಅಡಿಕೆ ಆಮದು ಕನಿಷ್ಠ ಖರೀದಿ ದರವನ್ನು ₹75ಗೆ ಹೆಚ್ಚಳ ಮಾಡಿಸಿದ್ದರು. ಮತ್ತೆ 2013ರಲ್ಲಿ ವಿದೇಶಿ ಅಡಿಕೆ ಆಮದು ಅಡಿಕೆ ಕನಿಷ್ಠ ಖರೀದಿ ದರವನ್ನು ₹110ಗೆ ಹೆಚ್ಚಳ ಮಾಡಿ ಈಶಾನ್ಯ ಭಾರತ ರಾಜ್ಯಗಳಿಂದ ಮಹಾರಾಷ್ಟ್ರ ಮತ್ತು ಉತ್ತರ ಭಾರತಕ್ಕೆ ಕಳ್ಳ ಸಾಗಣೆ ಆಗುತ್ತಿದ್ದ ಅಡಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಿದ್ದರು. ಇದರಿಂದ ಪ್ರತಿ ಕ್ವಿಂಟಲ್ ಗೆ ಸುಮಾರ್ ₹75,000 ರಿಂದ ₹80,000 ದರ ಹೆಚ್ಚಳಕ್ಕೆ ಕಾರಣ ಜಯಪ್ರಕಾಶ್ ಹೆಗ್ಡೆ. ಅವರು ಅಡಿಕೆಗೆ ಒಂದು ಗೌರವದ ಬೆಲೆ ತಂದುಕೊಟ್ಟರು” ಎಂದು ಶ್ಲಾಘಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಳದಿ ಎಲೆ ರೋಗ ವ್ಯಾಪಕವಾಗಿತ್ತು. ಇದರ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅಂದಿನ ತೋಟಗಾರಿಕೆ ಇಲಾಖೆಯ ನಿರ್ದೇಶಕರ ಗೋರಕ್ ಸಿಂಗ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದ ಅಡಿಕೆ ತೋಟಗಳಿಗೆ ಭೇಟಿ ನೀಡಿ ವರದಿ ನೀಡಿದ್ದರು. ಶಿವಮೊಗ್ಗ, ಚಿಕ್ಕಮಗಳೂರು 10ಎಕರೆವರೆಗಿನ ರೈತರ ಸಾಲ ಮನ್ನಾ ಮಾಡಬೇಕು ಎಂದು ವರದಿ ನೀಡಿದ್ದರು. ಕೊಳೆ ರೋಗ, ಹಳದಿ ರೋಗ ನಿಯಂತ್ರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ. ನಂತರ ಸಂಸದರಾದ ಶೋಭಾ ಕರಂದ್ಲಾಜೆ ಆಗಲಿ, ಯಾರೂ ಸಹ ಗೋರಕ್ ಸಿಂಗ್ ವರದಿ ಅನುಷ್ಠಾನ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿಲ್ಲ. ಅಡಿಕೆಗೆ ಬಂದ ಹಳದಿ ರೋಗ, ಕೊಳೆ ರೋಗದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಮೋದಿ ಸರ್ಕಾರ ಸ್ಪಂದಿಸಲಿಲ್ಲ” ಎಂದು ದೂರಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಗೃಹ ಸಚಿವ ಅಮಿತ್ ಶಾ ಅವರು 2018ರಲ್ಲಿ ಶಿವಮೊಗ್ಗದ ಸಮಾವೇಶದಲ್ಲಿ, ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಶಿವಮೊಗ್ಗ ಜಿಲ್ಲೆಯಲ್ಲಿ ₹500 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಅಡಿಕೆ ಸಂಶೋಧನೆ ಕೇಂದ್ರ ಸ್ಥಾಪನೆ ಮಾಡುವುದಾಗಿ ಹೇಳಿದ್ದರು. ಆದರೆ ಅಡಿಕೆ ಸಂಶೋಧನೆ ಕೇಂದ್ರ ಪ್ರಾರಂಭ ಮಾಡಲಿಲ್ಲ. ಬಿಜೆಪಿಯವರಿಗೆ ಅಡಿಕೆ ರಾಜಕಾರಣದ ಒಂದು ವಸ್ತು” ಎಂದರು.

ಮತ್ತೆ ಅಡಿಕೆ ಬೆಳೆಗಾರರ ಧ್ವನಿಯಾಗಿ ಜಯಪ್ರಕಾಶ್ ಹೆಗ್ಡೆ ಅವರು ಗೆಲ್ಲಬೇಕು. ಹಾಗಾಗಿ ಉಡುಪಿ ಮತ್ತು ಚಿಕ್ಕಮಗಳೂರು ಅಡಿಕೆ ಬೆಳೆಗಾರರು ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ರಾಘವೇಂದ್ರ ಭರದ್ವಾಜ್, ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ವಂತ ಕುಟುಂಬ ಒಡೆಯುವುದನ್ನು ಸಮಾಜ ಇಷ್ಟಪಡಲ್ಲ, ನನ್ನ ತಪ್ಪಿನ ಅರಿವಾಗಿದೆ: ಅಜಿತ್ ಪವಾರ್

"ಕುಟುಂಬಗಳಲ್ಲಿನ ಬಿರುಕುಗಳನ್ನು ಸಮಾಜವು ಇಷ್ಟಪಡುವುದಿಲ್ಲ. ನನ್ನ ತಪ್ಪಿನ ಅರಿವು ನನಗಾಗಿದೆ" ಎಂದು...

ರಾಜಕೀಯ ‘ಕುಸ್ತಿಯಂಗಳ’ಕ್ಕೆ ವಿನೇಶ್‌ ಫೋಗಟ್‌; ಇದೇನಾ ʼಹೋರಾಟ ಮುಂದುವರಿಯಲಿದೆ…ʼಎಂಬ ಮಾತಿನ ಒಳಾರ್ಥ?

ಕುಸ್ತಿ ಅಂಗಳದಲ್ಲಿ ಸತತ ಒಂದೊಂದೇ ಗೆಲುವಿನ ಮೆಟ್ಟಿಲೇರಿದ ಚರ್ಕಿ ದಾದ್ರಿಯ ಛಲಗಾರ್ತಿಗೆ...

ಜಮ್ಮು ಕಾಶ್ಮೀರ | ಕಾಂಗ್ರೆಸ್, ಎನ್‌ಸಿ 370ನೇ ವಿಧಿ ಮರುಸ್ಥಾಪಿಸಲು ಬಯಸುತ್ತದೆ : ಅಮಿತ್ ಶಾ

"ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) 370ನೇ ವಿಧಿಯನ್ನು ಮರಳಿ ತರಲು...