ಶಿವಮೊಗ್ಗ | ಅಂಬೇಡ್ಕರ್ ಬರಹಗಳು ಸ್ತ್ರೀವಾದಕ್ಕೆ ಹತ್ತಿರ : ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯ

Date:

ಶಿವಮೊಗ್ಗ, ಜಗತ್ತಿನ ಎಲ್ಲಾ ಧರ್ಮಗಳು ಪಿತೃ ಪ್ರಧಾನ ಮೌಲ್ಯಗಳನ್ನೇ ಅಳವಡಿಸಿಕೊಂಡಿವೆ. ಯಾವುದೇ ಧರ್ಮ ಸ್ತ್ರೀವಾದವನ್ನು ಬೆಂಬಲಿಸುವುದಿಲ್ಲ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

- Advertisement -

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ “ವೀಣಾ ಶಾಂತೇಶ್ವರ ಅವರ ಕಥನ : ಓದು ಮತ್ತು ಸಂವಾದ” ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...
1002463466

ಅಂಬೇಡ್ಕರ್ ಬರಹಗಳು ಸ್ತ್ರೀವಾದಕ್ಕೆ ಹತ್ತಿರವಾಗಿದ್ದು ಹೆಣ್ಣಿನ ಬದುಕನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಅನೇಕ ತಾತ್ವಿಕತೆಗಳ ಹಿನ್ನೆಲೆಯಲ್ಲಿ ಸ್ತ್ರೀವಾದವನ್ನು ನೋಡಲಾಗುತ್ತಿದೆ. ಸ್ತ್ರೀವಾದ ಇಂದು ಹಲವಾರು ನೆಲೆಗಳಲ್ಲಿ ಹರಡಿಕೊಂಡಿದೆ. ಜೊತೆಗೆ ಗೊಂದಲಗಳೂ ಕಾಣುತ್ತಿವೆ. ಇದನ್ನು ಎಚ್ಚರಿಕೆಯಿಂದ ಅರಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.

1002463465

ಕುವೆಂಪು ವಿವಿ ಕನ್ನಡ ಆಧ್ಯಾಪಕರ ವೇದಿಕೆ ಹಾಗೂ ಕನ್ನಡ ಭಾರತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷೆ ಡಾ. ಸಬಿತಾ ಬನ್ನಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ವೀಣಾ ಶಾಂತೇಶ್ವರ ಅವರು ಅರವತ್ತು ಎಪ್ಪತ್ತರ ದಶಕದಲ್ಲಿಯೇ ವಿಶಿಷ್ಟವಾದ ಕಥೆಗಳನ್ನು ರಚಿಸಿದರು. ವೀಣಾ ಅವರ ಕಥೆಗಳನ್ನು ಸಾಹಿತ್ಯ ವಲಯದವರು ಮಾತ್ರವಲ್ಲದೆ ಭಿನ್ನ ವಲಯಗಳಿಂದ ಬಂದು ಓದುಗರು ಇಂದು ಓದುತ್ತಿದ್ದಾರೆ. ಅವರ ಕಥೆಗಳಲ್ಲಿ ಮೇಲ್ನೋಟಕ್ಕೆ ಪುರುಷ ದ್ವೇಷ ಇದೆ ಎನಿಸಿದರೂ ಅವರ ಒಟ್ಟು ಕಥೆಗಳ ಆಶಯ ಬದುಕಿನ ಅನ್ವೇಷಣೆಯೇ ಆಗಿದೆ ಎಂದರು.

ವಿಮರ್ಶೆಕ ಡಾ. ಕೆ. ಕೇಶವ ಶರ್ಮ ಹಾಗೂ ಬರಹಗಾರ್ತಿ ಡಾ. ತಾರಿಣಿ ಶುಭದಾಯಿನಿ ಅವರು ವೀಣಾರವರ ಕಥೆಗಳ ಕುರಿತು ಉಪನ್ಯಾಸ ನೀಡಿದರು. ಕನ್ನಡ ಭಾರತಿ ನಿರ್ದೇಶಕ ಡಾ. ಸಿದ್ದೇಶ್ ನೆಲ್ಲಿಕಟ್ಟೆ ಅವರು ಸ್ವಾಗತ ಕೋರಿದರು.

1002463464

ವೇದಿಕೆಯ ಉಪಾಧ್ಯಕ್ಷ ಡಾ. ಕುಂಸಿ ಉಮೇಶ್ ಉಪಸ್ಥಿತರಿದ್ದರು. ಮಧ್ಯಾಹ್ನದ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ವೀಣಾ ಶಾಂತೇಶ್ವರ ಅವರ ನಿರಾಕರಣೆ ಕಥೆ ಆಧಾರಿತ ನಾಟಕ ಏಕವ್ಯಕ್ತಿ ಪ್ರದರ್ಶನ ನಡೆಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | SIR ರದ್ದು;,ಗ್ಯಾನೇಶ್ ಕುಮಾರ್ ವಜಾಕ್ಕೆ DYFI, SFI, AIDSO ಆಗ್ರಹ

ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ...

ಶಿವಮೊಗ್ಗ | ಎಫ್‌ಸಿಐ ಗೋದಾಮಿನ ಹುಳು-ನುಸಿ ಕಾಟದಿಂದ ಬೇಸತ್ತ ಸ್ಥಳೀಯರು: ಸ್ಥಳಾಂತರಕ್ಕೆ ಆಗ್ರಹ

ಶಿವಮೊಗ್ಗದ ಆಲ್ಕೊಳ ಬಳಿ ಇರುವ ಎಫ್‌ಸಿಐ ಗೋದಾಮಿನಲ್ಲಿ ಸಂಗ್ರಹವಾಗಿರುವ ಅಕ್ಕಿಯಿಂದ ಹುಳು,...

ಚಿಕ್ಕಮಗಳೂರು | ಮಾನವ ಪ್ರಕೃತಿಯ ಭಾಗ ಎಂಬುದನ್ನು ಮರೆಯಬಾರದು; ಹರೀಶ್ ಎನ್.ಆರ್

ಕಳಸ : ಇಂದಿನ ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರಿತ್ಯ ಸೇರಿದಂತೆ...

ಶಿವಮೊಗ್ಗ | ಅಕ್ಟೋಬರ್ 11ರಂದು ರಾಜ್ಯ, ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ...