ಶಿವಮೊಗ್ಗ | ರಸ್ತೆ ಮಧ್ಯದಲ್ಲಿ ಶಿವಮೊಗ್ಗ – ಭದ್ರಾವತಿ KSRTC ಬಸ್ ನಿಲುಗಡೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗೆ ಅವಾಚ್ಯ ನಿಂದನೆ

Date:

ಶಿವಮೊಗ್ಗ-ಭದ್ರಾವತಿ KSRTC ಬಸ್ ಇಂದು ರಾತ್ರಿ ಸಮಯ ಸುಮಾರ್ 8 : 20 ರಿಂದ 8:30 ರ ವೇಳೆಯಲ್ಲಿ ಶಿವಮೊಗ್ಗದಿಂದ ಭದ್ರಾವತಿ ತೆರಳುವ ವೇಳೆ ಶುಗರ್ ಫ್ಯಾಕ್ಟರಿ ಯಿಂದ ಸ್ವಲ್ಪ ಮುಂದೆ ಇರುವ Hums ದಾಟಿ ಏಕ ಏಕಿ ರಸ್ತೆಯಲ್ಲೇ ಬಸ್ ನಿಲ್ಲಿಸಿದ್ದು, ಯಾವದೇ ಇಂಡಿಕೆಟರ್ ಹಾಕಿಲ್ಲ ಹಾಗೂ ರಸ್ತೆಯಿಂದ ಕೆಳಗೆ ನಿಲ್ಲಿಸಲಿಲ್ಲ, ಹಿಂದೆಯೇ ಬರುತ್ತಿದ್ದ ಈದಿನ ಮಾಧ್ಯಮ ಪ್ರತಿನಿಧಿ ಅಚಾನಕ್ಕಾಗಿ ಬಸ್ ನಿಲುಗಡೆ ಇಲ್ಲದಿದ್ದರೂ ಬಸ್ ನಿಲ್ಲಿಸಿದ ಪರಿಣಾಮ ಗಾಡಿಯನ್ನ ನಿಲ್ಲಿಸಿ ಬೇಕಾಯಿತು.

- Advertisement -

ಈ ಕುರಿತು ಅಪಘಾತ ಸಂಭಾವಿಸಿದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಕ್ಕೆ,ರಸ್ತೆಯಲ್ಲಿ ಯಾಕೆ ಈ ರೀತಿ ನಿಲ್ಲಿಸಿದ್ದೀರಾ ಇಲ್ಲಿ ಸ್ಟಾಪ್ ಇದ್ದೀಯ ಎಂದು ಪ್ರಶ್ನೆ ಮಾಡಿದಕ್ಕೆ, ಬಸ್ ನಿರ್ವಾಹಕ ಬಸ್ ನಿಂದ ಇಳಿದುಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಭದ್ರಾವತಿಗೆ ಬಂದು ಅದೇನೋ ಕಂಪ್ಲೇಂಟ್ ಕೊಡುತ್ತೀಯೋ ಏನು ಮಾಡುತ್ತಿಯೋ ಮಾಡಿಕೋ ಎಂದು ನಿಂದಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದು ಹೊಸದೇನು ಇಲ್ಲ ಈ ಹಿಂದೆ ಕೂಡ ಈ ರೀತಿ ಘಟನೆಗಳು ಆಗಿದೆ ಇದಕ್ಕೆ ಸರಿಮಾಡುತ್ತೇವೆ ಎಂಬುದು KSRTC ಅಧಿಕಾರಿಗಳ ಉಡಾಫೆ ಉತ್ತರ. ಇದು ಮುಂದುವರೆದಿದೆ.

ಹಾಗೂ ಬಸ್ ನಿಲ್ಲಿಸದೆ ಚಾಲಕ ನಿರ್ವಾಹಕ ಬಸ್ ಚಲಾಯಿಸಿ ಹೋಗಿರುತ್ತಾರೆ. ಈ ಸಂಬಂಧ ಭದ್ರಾವತಿ ಡಿಪೋ ಮ್ಯಾನೇಜರ್ ಗೆ ಕರೆ ಮಾಡಿದಕ್ಕೆ ಇದು ನಮ್ಮ ಭದ್ರಾವತಿ ಡಿಪೋ ಬಸ್ ಅಲ್ಲ ನೀವು ಶಿವಮೊಗ್ಗ ಡಿಪೋ ಅವರ ಬಳಿ ಮಾತಾಡಿ ಅಂತ ತಿಳಿಸಿದ್ದಾರೆ.

ಅದರಂತೆ ಶಿವಮೊಗ್ಗ ಡಿಪೋ ಮ್ಯಾನೇಜರ್ ಬಳಿ ಮಾತನಾಡಿದ್ದು ಅದರಂತೆ ಸ್ವಲ್ಪ ಸಮಯ ಕೊಡಿ ಮಾಹಿತಿ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ನಂತರ ಡಿಟಿಒ ದಿನೇಶ್ ಅವರ ಬಳಿ ಈ ಸಂಬಂಧ ಮಾತನಾಡಿದಕ್ಕೆ ನಾನು ಮಂಗಳವಾರ ತನಕ ರಜೆಯಲ್ಲಿ ಇರುತ್ತೇನೆ ನಂತರ ಬರುತ್ತೇನೆ. ನೀವು ಒಂದು ಇಮೇಲ್ ಹಾಗೂ ಕಂಪ್ಲೇಂಟ್ ಕೊಡಿ ಈ ಸಂಬಂಧ ತನಿಖೆಗೆ ಒಳಪಡಿಸುತ್ತೇನೆ ಎಂದು ಏನಾಗಿದೆ ಅಂತ ಮಾಹಿತಿ ನನಗಿಲ್ಲ ನೀವು ಮತ್ತು ಬಸ್ ಅವರು ಮಾತ್ರ ಅಲ್ಲಿದ್ದಿದ್ದು ಹಾಗಾಗಿ ಮಾಹಿತಿ ಪಡೆದುಕೊಂಡು ತಿಳಿಸುತ್ತೇನೆ ಎಂದಿದ್ದಾರೆ.

ಇನ್ನು ಶಿವಮೊಗ್ಗ KSRTC ಡಿ ಸಿ ಕರೆ ಮಾಡಿದ್ದೂ ಹಲವು ಬಾರಿ ಕರೆ ಮಾಡಿದರು ಕರೆ ಸ್ವೀಕರಿಸಿಲ್ಲ ನಂತರ ಮಾಹಿತಿ ಮೆಸೇಜ್ ಮಾಡುತ್ತಿದ್ದಂತೆ ಸ್ವಿಚಾಫ್ ಮಾಡಿಕೊಂಡರು. ಮಾಹಿತಿ ಕೇಳಿದರೆ ಸ್ವಿಚ್ಆಫ್ ಆಗತ್ತೆ.ಈ ರೀತಿ ವ್ಯವಸ್ಥೆ ಆಗಿದೆ ಶಿವಮೊಗ್ಗ KSRTC ಅಧಿಕಾರಿಯದ್ದು.

ದಿನ ನಿತ್ಯ ಶಿವಮೊಗ್ಗ ಭದ್ರಾವತಿ ಬಸ್ ಗಳ ಸರಿಯಾಗಿ ವ್ಯವಸ್ಥೆ ಇಲ್ಲದೆ ಬರುವ ಬಸ್ ಗಳು ಸಹ ಕೆಂಪು ಬೋರ್ಡ್ ಹಾಕಿಕೊಂಡು ಬರುತ್ತವೆ ಜೊತೆಗೆ ಗಂಟೆಗಟ್ಟಲೆ ಪ್ರಯಾಣಿಕರು ಪರದಾಡುತ್ತಿದ್ದಾರೆ ಇದರ ಜೊತೆಗೆ ಈ ರೀತಿಯ ವರ್ತನೆಗಳು ಸಹ ಜನಸಾಮಾನ್ಯರಲ್ಲಿ ಅಸಮಾಧಾನ ಉಂಟಾಗಿದೆ.

ಮೊನ್ನೆ ದಿವಸ ಒಂದು ಶಿವಮೊಗ್ಗ ಭದ್ರಾವತಿ ಬಸ್ ಟೈಯರ್ ಸಮಸ್ಯೆಯಿಂದ ಪ್ರಯಾಣಿಕರನ್ನ ಹತ್ತಿಸಿಕೊಳ್ಳದೆ ಸಮಸ್ಯೆಗೆ ಒಳಪಟ್ಟಿದ್ದು ಇದರ ಸಂಬಂಧ ಚಾಲಕ ನಮಗೆ ದಯವಿಟ್ಟು ನಮ್ಮ ಪರಿಸ್ಥಿತಿ ಕೂಡ ಅವಲೋಕಿಸಿ ಸರ್ ಅಧಿಕಾರಿಗಳು ಕೊಡುವ ಕಿರುಕುಳಕ್ಕೆ ಬೇಸತ್ತು ನಮಗೂ ನ್ಯಾಯ ಒದಗಿಸಿ, ಗಂಟೆಗಟ್ಟಲೆ ಬಸ್ ಬಂದಿಲ್ಲ ಸರ್ ಭದ್ರಾವತಿಯಿಂದ ಈಗ ನನಗೆ ಹಳೆಯ ಸಮಸ್ಯೆಯಿರುವ ಬಸ್ ನೀಡಿದ್ದಾರೆ ನಾನು ಎಷ್ಟು ಪ್ರಯಾಣಿಕರನ್ನ ಹತ್ತಿಸಿಕೊಳ್ಳಲು ಸಾಧ್ಯವಿದೆ ನೀವೇ ತಿಳಿಸಿ ಎಂದು ನಮ್ಮ ಈದಿನ ಡಾಟ್ ಕಾಮ್ ಗೆ ತಿಳಿಸಿದ್ದರು.

ಅಧಿಕಾರಿಗಳ ಉಡಾಫೆ ಉತ್ತರ ಸಮಸ್ಯೆ ಬಗೆಹರಿಸಿಕೊಡುವ ಬದಲು, ರಜೆ ಇದ್ದೇನೆ ಯಾವತ್ತೋ ಬರುತ್ತೇನೆ ಅಂದು ಬನ್ನಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಬೇಜವಾಬ್ದಾರಿತನದ ಉತ್ತರ.

ಒಟ್ಟಾರೆಯಾಗಿ ಪ್ರಯಾಣಿಕರ ಗೋಳು ಯಾರು ಕೇಳದಂತೆ ಪರಿಸ್ಥಿತಿ ಆಗಿದ್ದು ಸರ್ಕಾರದ ಮಹತ್ತರ ಯೋಜನೆ ಶಕ್ತಿ ಯೋಜನೆ ಶಿವಮೊಗ್ಗದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಗೆ ಬಲಿಯಾಗುತ್ತಿದೆ.

ನಗರದಲ್ಲಿ ದಿನ ನಿತ್ಯ ಶಿವಮೊಗ್ಗ ಭದ್ರಾವತಿ KSRTC ಬಸ್ ಸಮಸ್ಯೆ ಹೆಚ್ಚಾಗಿಯಿದೆ ಇದಕ್ಕೆ ಅಧಿಕಾರಿಗಳು ಚಾಲಕ ನಿರ್ವಾಹಕರು ಎಲ್ಲರೂ ಅಸಡ್ಡೆಯಾಗಿ ವರ್ತಿಸುತ್ತಿದ್ದಾರೆ, ಇವರುಗಳ ಈ ಮನೋಸ್ಥಿತಿ ಪರಿಣಾಮ ಜನಸಾಮಾನ್ಯರು ಮಹಿಳೆಯರು ವಿದ್ಯಾರ್ಥಿಗಳು ವೃದ್ಧರು ಪ್ರತಿಯೊಬ್ಬರೂ ಅಸಹಾಯಕ ಪರಿಸ್ಥಿತಿಯಿಂದ ಒದ್ದಾಡುತ್ತಿರುವ ಪರಿಸ್ಥಿತಿ ದಿನ ನಿತ್ಯ ಕಾಣಬಹುದಾಗಿದೆ.

ಈ ಸಂಬಂಧ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರಾದರೂ ಇಲ್ಲಿರುವ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರ, ನಾಗರೀಕರ ಸಮಸ್ಯೆಗೆ ಧ್ವನಿ ಆಗುತ್ತರ ಎಂಬುದು ನಾಗರಿಕರ ನಿರೀಕ್ಷೆಯಾಗಿದೆ?

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...