ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣ ನೀರು ಹರಿಸಲು ಆಗ್ರಹ; ನ.16ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ

Date:

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ಬಾಳೆ, ತೆಂಗು, ಜಾನುವಾರುಗಳಿಗೆ, ಕೆರೆ ಕುಂಟೆಗಳಿಗೆ ನವೆಂಬರ್ ತಿಂಗಳಲ್ಲಿ 20 ದಿವಸ ನೀರು ಹರಿಸಬೇಕೆಂದು ಆಗ್ರಹಿಸಿ, ಸೋಮವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

- Advertisement -

ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರೈತ ಸಂಘದ ಮುಖಂಡ ಕೆ ತಿ ಗಂಗಾಧರ, “ಬೇಸಿಗೆ ಹಂಗಾಮಿನ ಭತ್ತದ ಬೆಳೆಯನ್ನು ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳ ವ್ಯಾಪ್ತಿಗೆ, ಗೋಂದಿ ನಾಲೆಗೆ ಒಟ್ಟು 36 ಟಿಎಂಸಿ ನೀರಿನ ಅಗತ್ಯವಿದೆ. ಆದರೆ ಜಲಾಶಯ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ 120 ದಿವಸ ನೀರು ಹರಿಸಲು 7 ಟಿಎಂಸಿ ನೀರಿನ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಮೂರು ಟಿಎಂಸಿ ನೀರು ಹರಿಸಿ ಮತ್ತೆ ಹೆಚ್ಚುರಿಯಾಗಿ ಒಂದು ಟಿಎಂಸಿ ನೀರು ಹರಿಸಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ...

ಒಂದು ಜನಪದ ಕಾವ್ಯ, ನೂರಾರು ವರ್ಷಗಳ ಮೌಖಿಕ ಪರಂಪರೆ, ತಲೆಮಾರುಗಳಿಂದ ತಂಬೂರಿಯ ನಾದದಲ್ಲಿ ಉಳಿದು ಬಂದ ತತ್ವ. ಜನಸಾಮಾನ್ಯರ ಬದುಕು, ಸಾಮಾಜಿಕ ಅಸಮಾನತೆ ಮತ್ತು ಮಾನವ ಘನತೆಯ ಪ್ರಶ್ನೆಗಳನ್ನು ಜನರ ಮುಂದಿಟ್ಟ ಪರಂಜ್ಯೋತಿ...

ಉತ್ತರ ಕನ್ನಡ | ಯುವನಿಧಿ ಫಲಾನುಭವಿಗಳ ಸಂಖ್ಯೆ ಹೆಚ್ಚಳ:...

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ 10,280ಕ್ಕೆ ಏರಿಕೆಯಾಗಿರುವುದು ಕೇವಲ ಒಂದು ಸರ್ಕಾರಿ ಯೋಜನೆಯ ಫಲಾಫಲದ ಅಂಕಿ-ಅಂಶವಲ್ಲ. ಜಿಲ್ಲೆಯಲ್ಲಿನ ಉದ್ಯೋಗಾವಕಾಶಗಳು, ಯುವಜನರ ಸದೃಢ ಭವಿಷ್ಯ, ಸ್ಥಳೀಯ ಆರ್ಥಿಕ...

ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!

1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳು. ಅಲ್ಲಿಂದ ಪಕ್ಷವನ್ನು ರಾಷ್ಟ್ರೀಯ ಅಧಿಕಾರದ ಕೇಂದ್ರಕ್ಕೆ ತರುವಲ್ಲಿ ಅಡ್ವಾಣಿ ಅವರ ಪಾತ್ರ ದೊಡ್ಡದು. ರಥಯಾತ್ರೆ, ರಾಮಮಂದಿರ ಚಳವಳಿ ಮತ್ತು ಹಿಂದುತ್ವದ ರಾಜಕಾರಣದ...

“ಅಕ್ಟೋಬರ್‌ 30ರಿಂದ ಭದ್ರಾ ಮೇಲ್ದಂಡೆ ಯೋಜನೆಯ ಅಧಿಕ್ಷಕರ ಇಂಜಿನಿಯರ್ ಕಛೇರಿ ಬಿ.ಆರ್.ಪ್ರಾಜೆಕ್ಟ್ ಎದುರು ಹಲವಾರು ದಿನ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರೂ ಸರ್ಕಾರವು ತನ್ನ ನಿರ್ಧಾರವನ್ನು ಬದಲಾಯಿಸುವ ಕ್ರಮ ಅನುಸರಿಸಲಿಲ್ಲ. ಆಗ ರೈತರೇ ಜಲಾಶಯದ ಗೇಟನ್ನು ಹಾಕುವ ಕಾರ್ಯಕ್ಕೆ ಮುಂದಾದರು. ಪೊಲೀಸರು ಚಳವಳಿಗಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು” ಎಂದರು.

ನಂತರ ಚಳುವಳಿಗಾರರು ಚಳವಳಿಯನ್ನು ತೀವ್ರಗೊಳಿಸಿ ಪ್ರತಿ ತಾಲೂಕು ಗ್ರಾಮ ಘಟಕಗಳಲ್ಲಿ ರೈತ ಜಾಗೃತಿ ಸಭೆಗಳನ್ನು ಮಾಡುವ ಮೂಲಕ, ನೀರು ಹರಿಸುವುದನ್ನು ನಿಲ್ಲಿಸಿ ಭದ್ರ ಅಚ್ಚುಕಟ್ಟುದಾರರ ಪ್ರದೇಶದಲ್ಲಿ ಬೆಳೆದು ನಿಂತಿರುವ ಅಡಿಕೆ, ಬಾಳೆ, ತೆಂಗು, ಜಾನುವಾರುಗಳಿಗೆ, ಕೆರೆ-ಕುಂಟೆಗಳಿಗೆ ನವೆಂಬರ್ ತಿಂಗಳಲ್ಲಿ 20 ದಿವಸ ನೀರು ಹರಿಸಬೇಕೆಂದು ಚಳವಳಿಗಳನ್ನು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದನ್ನು ವಿವರಿಸಿದರು.

ಬೃಹತ್‌ ರೈತರ ಜಾಗೃತಿ ಸಭೆ ಹಾಗೂ ನೀರಿನ ಹಕ್ಕೋತ್ತಾಯ, ರೈತ ಮುಖಂಡರಾದ ಕೆ.ಟಿ ಗಂಗಾಧರ್‌ರವರ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು 16ರಂದು ಮತ್ತೆ ನಡೆಸಲಾಗುವುದು ಎಂದರು. ನಡೆಯಲಿದೆ , ಭದ್ರಾ ಅಚ್ಚುಕಟ್ಟು ಪ್ರದೇಶದ ಸಮಸ್ತ ರೈತರು, ಕೃಷಿ ಕೂಲಿ ಕಾರ್ಮಿಕರು, ಯುವಕ ಯುವತಿಯರು, ಮಹಿಳೆಯರು ಪ್ರಜ್ಞಾವಂತ ನಾಗರಿಕರು ಜಾತ್ಯತೀತವಾಗಿ, ಪಕ್ಷ ಭೇದ ಮರೆತು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೃಹತ್‌ ರೈತರ ಜಾಗೃತಿ ಸಭೆ ಮತ್ತು ಧರಣಿ ಸತ್ಯಾಗ್ರಹವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಯಾಂಗ್ ಯೋಜನೆ: ಜೈಲಿನಿಂದ ಹೊರಬರುತ್ತಿದ್ದಂತೆ ಹೋರಾಟದ ಕಿಚ್ಚು ಹೊತ್ತಿಸಿದ ಅಡುಮ್ ತಯೋಂಗ್! 

ಸಿಯಾಂಗ್ ಮೇಲ್ದಂಡೆ ವಿವಿಧೋದ್ದೇಶ ಯೋಜನೆಯ (SUMP) ವಿರುದ್ಧದ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು...

‘ಮೋದಿ ನನ್ನೊಂದಿಗೆ ಮುಖಾಮುಖಿ ಚರ್ಚಿಸಿದರೆ ಪ್ರಧಾನಿಯಾಗಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಕ್ತ ಚರ್ಚೆಗೆ ಆಹ್ವಾನ ನೀಡುವುದನ್ನು ಲೋಕಸಭೆಯ...

ನ.15ರಂದು ತಿತಿಮತಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಜಯಂತಿ: ಜನ್‌ಜಾತಿಯ ಗೌರವ ದಿವಸ್ ಆಚರಣೆ

ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಅಂಗವಾಗಿ ನವೆಂಬರ್ 15ರಂದು...