ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೋಸ್ಟರ್ ವಾರ್ ಶಿವಮೊಗ್ಗ ಜಿಲ್ಲೆಯಲ್ಲೂ ಸಂಚಲನ ಸೃಷ್ಟಿಸಿದೆ. ಛಲವಾದಿ ನಾರಾಯಸ್ವಾಮಿ ಮನೆಗೆ ಚಾಕು, ಚೂರಿಗಳನ್ನ ಕೊರಿಯರ್ ಮಾಡಿದ ಪ್ರಕರಣದ ಬೆನ್ನಲ್ಲೇ ಇವತ್ತು ಬೆಳಗಿನ ಜಾವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಶಿವಮೊಗ್ಗದ ನಿವಾಸ ಮತ್ತು ಶಿವಮೊಗ್ಗ ಬಿಜೆಪಿ ಕಚೇರಿ ಗೋಡೆ ಹಾಗೂ ಶಟರ್ಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ಗಳನ್ನ ಅಂಟಿಸಿದ್ದಾರೆ.
ವಿಜಯೇಂದ ಹೇಳಿಕೆಯನ್ನ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ನಗರದ ವಿವಿಧೆಡೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. “ಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು ಕಳ್ನನ್ ಮಕ್ಕಳು” ಎಂಬ ಬರಹವಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.
ಜಿಲ್ಲಾ ಬಿಜೆಪಿ ಕಚೇರಿ ಹಾಗೂ ವಿಜಯೇಂದ್ರ ಅವರ ನಿವಾಸ ಸೇರಿದಂತೆ ಮನೆಯ ಕಾಂಪೌಂಡ್ ಮೇಲೂ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಶಿವಮೊಗ್ಗ ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ, ಬೈಪಾಸ್ ರಸ್ತೆಯ ಸಮೀಪವಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಮೈತ್ರಾದೇವಿ ನಿವಾಸದ ಬಳಿ ಈ ಪೋಸ್ಟರ್ಗಳನ್ನ ಅಂಟಿಸಲಾಗಿದೆ.





