ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ ರಾಜಕೀಯ ನಿಲುವು ಯಾವ ದಿಕ್ಕಿಗೆ?

Date:

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ ಯುವ ಮತದಾರರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಭಾರತದಲ್ಲಿಯೂ ನಿರುದ್ಯೋಗ, ಪರೀಕ್ಷಾ ಅಕ್ರಮಗಳು, ಶಿಕ್ಷಣ ವೆಚ್ಚ, ಸಾಮಾಜಿಕ ಅಸಮಾನತೆ ಹಾಗೂ ಪ್ರಜಾಪ್ರಭುತ್ವದ ಪ್ರಶ್ನೆಗಳು 2029ರ ಲೋಕಸಭಾ ಚುನಾವಣೆಯಲ್ಲಿ ಯುವಜನರ ರಾಜಕೀಯ ಚರ್ಚೆಯ ಕೇಂದ್ರವಾಗುವ ನಿರೀಕ್ಷೆ ಇದೆ.

- Advertisement -

ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಫಲಿತಾಂಶವು ಒಂದು ಮಹತ್ವದ ರಾಜಕೀಯ ಬೆಳವಣಿಗೆಯನ್ನು ದಾಖಲಿಸಿದೆ. ಕೇವಲ ಎರಡು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರತ್ತ ಒಲವು ತೋರಿದ್ದ ಯುವ ಮತದಾರರು ಈ ಬಾರಿ ಬಹುತೇಕ ಡೆಮಾಕ್ರಟಿಕ್ ಪಕ್ಷದತ್ತ ವಾಲಿದ್ದಾರೆ. ಟಫ್ಟ್ಸ್ ವಿಶ್ವವಿದ್ಯಾಲಯದ ಸರ್ಕಲ್ ಸಂಸ್ಥೆಯ ಸಂಶೋಧನಾ ವರದಿ ಮತ್ತು ಸಾರ್ವಜನಿಕ ಸಮೀಕ್ಷೆಗಳ ಪ್ರಕಾರ, ಯುವಜನರಲ್ಲಿ ಮೂರನೇ ಎರಡರಷ್ಟು ಭಾಗದಷ್ಟು ಮತದಾರರು ರಿಪಬ್ಲಿಕನ್ ಪಕ್ಷದ ಆಡಳಿತಾತ್ಮಕ ನೀತಿಗಳನ್ನು ಕಟುವಾಗಿ ತಿರಸ್ಕರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಹಂತಕ ಗೋಡ್ಸೆಯ ಹೇಳಿಕೆಯೇ ಇತಿಹಾಸವಲ್ಲ; ಸ್ವಾತಂತ್ರ್ಯ ಹೋರಾಟಗಾರರ ಚಾರಿತ್ರ್ಯಹರಣಕ್ಕೆ...

ಅಡ್ಡಂಡ ಕಾರ್ಯಪ್ಪನವರ ‘ಗಾಂಧಿ ಹತ್ಯೆಯ ಸತ್ಯ’ ಪುಸ್ತಕ ಮತ್ತು ನಾಟಕವನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಬಲವಾದ ಐತಿಹಾಸಿಕ ಕಾರಣಗಳಿವೆ. ಮನಶಾಸ್ತ್ರದ ದೃಷ್ಟಿಯಿಂದಲೂ ಹಂತಕನ ಸಮರ್ಥನೆಗೆ ಎಚ್ಚರಿಕೆ ಅಗತ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅಡ್ಡಂಡ...

ಯುವಜನರಲ್ಲಿನ ಈ ಮಹತ್ವದ ರಾಜಕೀಯ ಬದಲಾವಣೆಗೆ ಪ್ರಮುಖ ಕಾರಣ ಅಮೆರಿಕದಲ್ಲಿ ಸೃಷ್ಟಿಯಾಗಿರುವ ತೀವ್ರ ಆರ್ಥಿಕ ಅನಿಶ್ಚಿತತೆ, ನಿರಂತರವಾಗಿ ಹೆಚ್ಚುತ್ತಿರುವ ಮನೆಬಾಡಿಗೆ ಮತ್ತು ಜೀವನ ವೆಚ್ಚ, ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲದ ಹೊರೆ ಹಾಗೂ ಭವಿಷ್ಯದ ಬದುಕಿನ ಬಗೆಗಿನ ಭೀತಿ ಎಂದು ಸಮೀಕ್ಷೆಗಳು ಹೇಳಿವೆ. ಯುವ ಮತದಾರರು ನಾಯಕನ ಜನಪ್ರಿಯತೆಗಿಂತ ತಮ್ಮ ದೈನಂದಿನ ಜೀವನೋಪಾಯದ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂಬುದನ್ನು ಒತ್ತಿ ಹೇಳಿದೆ.

ಈ ಚುನಾವಣೆಯು ಜಾಗತಿಕ ರಾಜಕೀಯಕ್ಕೆ ‘ಯುವಜನರು ಯಾರೊಬ್ಬರ ಶಾಶ್ವತ ಮತಬ್ಯಾಂಕ್ ಅಲ್ಲ’ ಎಂಬ ಅತಿದೊಡ್ಡ ಸಂದೇಶ ನೀಡಿದೆ. ಇದು. ಭಾರತದ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಭಾರತದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಯುವಜನರು ದೇಶದ ಆಡಳಿತ, ಸಾಮಾಜಿಕ ಪರಿಸ್ಥಿತಿ, ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗದ ಬಿಕ್ಕಟ್ಟುಗಳ ಕುರಿತು ಮುಕ್ತವಾಗಿ ಚರ್ಚಿಸಲು ಆರಂಭಿಸಿದ್ದಾರೆ. ಆದಾಗ್ಯೂ, ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳ ಪ್ರಭಾವದ ಜೊತೆಗೆ ಪ್ರಾದೇಶಿಕ ಅಸ್ಮಿತೆಗಳು, ಜಾತಿ ಮತ್ತು ಸಮುದಾಯಗಳ ಸಮೀಕರಣಗಳು, ಧಾರ್ಮಿಕ ಭಾವನೆಗಳು ಹಾಗೂ ಸ್ಥಳೀಯ ಅಭಿವೃದ್ಧಿಯ ವಿಷಯಗಳು ಮತದಾನದ ನಿರ್ಧಾರವನ್ನು ಪ್ರಭಾವಿಸುತ್ತವೆ.

WhatsApp Image 2026 11 07 at 10.08.59 AM

ಅದೇನೇ ಇದ್ದರೂ, ಅಮೆರಿಕದ ಯುವಜನರನ್ನು ಕಾಡಿದ ಅದೇ ಮೂಲಭೂತ ಜೀವನಾಧಾರಿತ ಪ್ರಶ್ನೆಗಳು ಭಾರತದ ಯುವಸಮುದಾಯವನ್ನೂ ಅಷ್ಟೇ ತೀವ್ರವಾಗಿ ಬಾಧಿಸುತ್ತಿವೆ. ಹೀಗಾಗಿ, 2029ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಕೋಟ್ಯಂತರ ಯುವ ಮತದಾರರು ಯಾರ ಪರವಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳಲಿದ್ದಾರೆ ಮತ್ತು ದೇಶದ ರಾಜಕೀಯವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿದ್ದಾರೆ ಎಂಬುದು ಕುತೂಹಲಕಾರಿ ಸಂಗತಿ.

ಪ್ರಸ್ತುತ, ಭಾರತದಲ್ಲಿ ಪ್ರತಿವರ್ಷ ಕೋಟ್ಯಂತರ ಯುವಕ-ಯುವತಿಯರು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸಿ ಉದ್ಯೋಗ ಮಾರುಕಟ್ಟೆಗೆ ಧುಮುಕುತ್ತಿದ್ದಾರೆ. ಆದರೆ ಶಿಕ್ಷಣದ ಪ್ರಮಾಣಕ್ಕೆ ತಕ್ಕಂತೆ ಸೂಕ್ತವಾದ, ಗೌರವಯುತ ಹಾಗೂ ಸ್ಥಿರವಾದ ಉದ್ಯೋಗಗಳು ದೊರೆಯದಿರುವುದು ದೇಶದ ಅವರಲ್ಲಿ ಆತಂಕ ಹುಟ್ಟುಹಾಕಿದೆ. ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆ’ಯ ಅಂಕಿಅಂಶಗಳು ಯುವಜನರ ನಿರುದ್ಯೋಗ ದರದಲ್ಲಿ ಕೆಲ ಮಟ್ಟಿನ ಸುಧಾರಣೆಯನ್ನು ತೋರಿಸುತ್ತಿದ್ದರೂ, ನೈಜ ಸ್ಥಿತಿ ಭಿನ್ನವಾಗಿದೆ. ಇಂಜಿನಿಯರಿಂಗ್ ಅಥವಾ ಸೈನ್ಸ್ ಪದವಿ ಪಡೆದ ಯುವಜನರು ತಮ್ಮ ಕೌಶಲ್ಯಕ್ಕೆ ಸಂಬಂಧವಿಲ್ಲದ, ಅತ್ಯಂತ ಕಡಿಮೆ ವೇತನದ ಗಿಗ್ ಆರ್ಥಿಕತೆಯ ಕೆಲಸಗಳಲ್ಲಿ ಅಥವಾ ಗುತ್ತಿಗೆ ಆಧಾರದ ಕೆಲಸಗಳಲ್ಲಿ ತೊಡಗಿದ್ದಾರೆ. ಕುಟುಂಬಗಳು ಶಿಕ್ಷಣಕ್ಕಾಗಿ ಮಾಡಿದ ಬೃಹತ್ ಆರ್ಥಿಕ ಹೂಡಿಕೆ ಮತ್ತು ಯುವಜನರ ನೈಜ ಆದಾಯದ ನಡುವಿನ ಅಂತರವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಯುವಜನರಲ್ಲಿ ತೀವ್ರ ಅಸಮಾಧಾನ ಮತ್ತು ನಿರಾಶೆಯನ್ನು ಹುಟ್ಟುಹಾಕಿದೆ.

ಉದ್ಯೋಗದ ಅಭಾವ ಒಂದೆಡೆಯಾದರೆ, ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಸರಣಿ ಅಕ್ರಮಗಳು ಮತ್ತು ವಿಳಂಬಗಳು ಯುವಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿವೆ. ಭಾರತದಲ್ಲಿ ಸರ್ಕಾರಿ ಉದ್ಯೋಗ ಎಂದರೆ ಕೇವಲ ಆದಾಯದ ಮೂಲವಲ್ಲ, ಬದಲಾಗಿ ಅದೊಂದು ಸಾಮಾಜಿಕ ಭದ್ರತೆ ಮತ್ತು ಗೌರವದ ಸಂಕೇತವಾಗಿದೆ. ಲಕ್ಷಾಂತರ ಯುವಜನರು ತಮ್ಮ ಜೀವನದ ಅತ್ಯಮೂಲ್ಯ ವರ್ಷಗಳನ್ನು ಕೊಠಡಿಗಳಲ್ಲಿ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ವ್ಯಯಿಸುತ್ತಾರೆ. ಆದರೆ, ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ನ್ಯಾಯಾಲಯದ ತಡೆಯಾಜ್ಞೆಗಳು, ನೇಮಕಾತಿ ಮಂಡಳಿಗಳ ಭ್ರಷ್ಟಾಚಾರ ಹಾಗೂ ಫಲಿತಾಂಶಗಳ ರದ್ದತಿಯಂತಹ ಘಟನೆಗಳು ಯುವಜನರ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ನಡೆದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ವಿವಾದಗಳು ಯುವಜನರಲ್ಲಿ ಪ್ರಸ್ತುತ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕ್ಷೀಣಗೊಳಿಸಿವೆ. ಈ ಆಕ್ರೋಶವು ಕೇವಲ ಬೀದಿ ಹೋರಾಟಗಳಿಗೆ ಸೀಮಿತವಾಗದೆ ಮತಪೆಟ್ಟಿಗೆಯ ಮೇಲೂ ಪರಿಣಾಮ ಬೀರಲಿವೆ. ಪಾರದರ್ಶಕ ನೇಮಕಾತಿ ವ್ಯವಸ್ಥೆ ಮತ್ತು ನಿಗದಿತ ವೇಳಾಪಟ್ಟಿಯನ್ನು ಖಾತರಿಪಡಿಸುವ ಪಕ್ಷಗಳತ್ತ ಯುವಜನರು ಒಲವು ತೋರುವ ಸಾಧ್ಯತೆಯಿದೆ.

ಇನ್ನೊಂದೆಡೆ, ರಾಷ್ಟ್ರೀಯತೆ, ಸಾಂಸ್ಕೃತಿಕ ಹೆಮ್ಮೆ, ಬಲಿಷ್ಠ ನಾಯಕತ್ವ ಮತ್ತು ಜಾಗತಿಕವಾಗಿ ಭಾರತ ಪ್ರಭಾವವಿದೆ ಎಂಬ ಪ್ರಚಾರವು ಭಾರತೀಯ ಯುವಜನರ ರಾಜಕೀಯ ನಿಲುವಿನ ಮೇಲೆ ಈವರೆಗೆ ಪ್ರಭಾವ ಬೀರಿದೆ. ಆದ್ದರಿಂದಲೇ, 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಯುವ ಮತದಾರರಿಂದ ಬೃಹತ್ ಬೆಂಬಲ ಪಡೆದಿತ್ತು. ಆದರೆ, 2024ರ ಲೋಕಸಭಾ ಚುನಾವಣೆ ವೇಳೆಗೆ, ಯುವಜನರ ನಿಲುವುಗಳು ಬದಲಾಗಲಾರಂಭಿಸಿದವು. ‘ಭಾವನಾತ್ಮಕ ವಿಷಯಗಳೇ ಅಂತಿಮ ನಿರ್ಣಾಯಕವಲ್ಲ’ ಎಂಬುದನ್ನು ಅರಿತರು. ಆದ್ದರಿಂದಲೇ, ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯದೆ, ಎನ್‌ಡಿಎ ಮಿತ್ರಪಕ್ಷಗಳ ದಾಕ್ಷಿಣ್ಯದಲ್ಲಿ ಮೋದಿ 3ನೇ ಅವಧಿಯ ಪ್ರಧಾನಿಯಾಗಬೇಕಾಯಿತು. ಆದರೆ, ಈಗ ಪರಿಸ್ಥಿತಿಗಳು ಮತ್ತಷ್ಟು ಬಿಗಡಾಯಿಸಿವೆ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಶಿಕ್ಷಣದ ವೆಚ್ಚದ ಹೊರೆ ಭೀಕರವಾಗಿದೆ. ಈ ದುಸ್ಥಿತಿಯು 2029ರ ಚುನಾವಣೆಯ ವೇಳೆಗೆ ಯುವಜನರ ಒಲವು-ನಿಲುವುಗಳಲ್ಲಿ ಸ್ಪಷ್ಟತೆ ತರುವ ಸಾಧ್ಯತೆ ಇದೆ.

ಸಾಮಾಜಿಕ ಮಾಧ್ಯಮಗಳ ಡಿಜಿಟಲ್ ಕ್ರಾಂತಿಯು ಯುವಜನರ ರಾಜಕೀಯ ಪ್ರಜ್ಞೆಯನ್ನು ರೂಪಿಸುವಲ್ಲಿ ಅಭೂತಪೂರ್ವ ಪಾತ್ರ ವಹಿಸುತ್ತಿದೆ. ಇಂದಿನ ಯುವಜನರು ಯೂಟ್ಯೂಬ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಹಾಗೂ ಸ್ವತಂತ್ರ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಪ್ರತಿಯೊಂದು ಸರ್ಕಾರಿ ನಿರ್ಧಾರ, ಆಡಳಿತಾತ್ಮಕ ವೈಫಲ್ಯ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಗಮನಿಸುತ್ತಿದ್ದಾರೆ, ಹಂಚುತ್ತಿದ್ದಾರೆ, ಪ್ರಶ್ನಿಸುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಜೆಪಿಗೆ ಬಿಸಿತುಪ್ಪವಾದ ಪರೀಕ್ಷಾ ಹಗರಣ, ವಾಂಗ್ಚುಕ್, ರಾಮಮಂದಿರ, ಎಥೆನಾಲ್!

2029ರ ಲೋಕಸಭಾ ಚುನಾವಣೆಯ ಹೊತ್ತಿಗೆ ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ಸಂಭವಿಸಲಿದೆ. ಅದೇನೆಂದರೆ, 21ನೇ ಶತಮಾನದ ಮೊದಲ ದಶಕದಲ್ಲಿ ಜನಿಸಿ, ಸಂಪೂರ್ಣ ಡಿಜಿಟಲ್ ಯುಗದಲ್ಲಿ ಬೆಳೆದ ಹೊಸ ಪೀಳಿಗೆಯ ಲಕ್ಷಾಂತರ ಯುವಜನರು ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆಯಲಿದ್ದಾರೆ. ಈ ಹೊಸ ಮತದಾರರ ಆದ್ಯತೆಗಳು, ಆಲೋಚನೆಗಳು ಹಾಗೂ ಆಕಾಂಕ್ಷೆಗಳು ಹಳೆಯ ಪೀಳಿಗೆಯ ರಾಜಕೀಯ ಚಿಂತನೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಕೃತಕ ಬುದ್ಧಿಮತ್ತೆ (AI), ಆಧುನಿಕ ತಂತ್ರಜ್ಞಾನ ಹಾಗೂ ಜಾಗತಿಕ ಮಾರುಕಟ್ಟೆಯ ವಿಸ್ತರಣೆಯ ನಡುವೆ ಬೆಳೆಯುತ್ತಿರುವ ಈ ಯುವಜನರಿಗೆ ಸಾಂಪ್ರದಾಯಿಕ ರಾಜಕೀಯ ಭಾಷಣಗಳು ಅಥವಾ ಜಾತಿ-ಧರ್ಮಗಳ ಹಳೆಯ ಲೆಕ್ಕಾಚಾರಗಳು ಆಕರ್ಷಕವಾಗಿ ಕಾಣುವುದಿಲ್ಲ. ಅವರಿಗೆ ತಮ್ಮ ಬದುಕಿನ ಗುಣಮಟ್ಟ, ಕೌಶಲ್ಯಕ್ಕೆ ತಕ್ಕ ಅವಕಾಶಗಳು ಹಾಗೂ ವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಮುಖ್ಯವಾಗುತ್ತವೆ. ಇದೆಲ್ಲವನ್ನೂ ಇತ್ತೀಚೆಗೆ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ತೋರಿಸಿವೆ.

ಯುವಜನರ ನಿಲುವುಗಳನ್ನು ಗಮನಿಸುತ್ತಿರುವ ಮೋದಿ ಸರ್ಕಾರ – ಬಿಜೆಪಿ/ಆರ್‌ಎಸ್‌ಎಸ್‌ 2029ರ ಚುನಾವಣೆ ವೇಳೆಗೆ, ಮೂಲಸೌಕರ್ಯ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ, ತಂತ್ರಜ್ಞಾನ ಆಧಾರಿತ ಆಡಳಿತದಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಮತಯಾಚಿಸಬಹುದು. ಆದರೆ, ಕಳೆದ ಒಂದೂವರೆ ದಶಕದ ಆಡಳಿತದ ನಂತರದ ಆಡಳಿತ ವಿರೋಧಿ ಅಲೆ ಮತ್ತು ನಿರುದ್ಯೋಗದ ಸವಾಲುಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಇದೇ ಹೊತ್ತಿನಲ್ಲಿ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ಸಾಮಾಜಿಕ ನ್ಯಾಯ, ಆರ್ಥಿಕ ಅಸಮಾನತೆಯ ನಿವಾರಣೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಯ ಅಜೆಂಡಾದೊಂದಿಗೆ ಯುವಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆದರೆ, ಮುಂದಿನ ಲೋಕಸಭಾ ಚುನಾವಣೆಗೆ ಇನ್ನೂ 2 ವರ್ಷ ಸಮಯವಿದ್ದು, ಯುವಜನರ ಚುನಾವಣಾ ಚಿತ್ತವನ್ನು ಸ್ಪಷ್ಟವಾಗಿ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ.

ಆದಾಗ್ಯೂ, ತಮ್ಮ ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ಸಂಬಂಧಿಸಿದಂತೆ ಇಂದು ಯುವಜನರು ಕೇಳುತ್ತಿರುವ ಪ್ರಶ್ನೆಗಳು ಚುನಾವಣಾ ವಿಷಯವಾಗುವುದರಲ್ಲಿ ಸಂದೇಹವಿಲ್ಲ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ವಕೀಲ ವೃತ್ತಿ ಯಶಸ್ಸಿಗೆ ನಿರಂತರ ಅಧ್ಯಯನ, ಭಾಷಾ ಪ್ರೌಢಿಮೆ ಅಗತ್ಯ: ಪದ್ಮಾವತಿ ಮಾನೆ

ವಕೀಲ ವೃತ್ತಿಯು ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಶ್ರೇಷ್ಠ...

ಶೈನ್ ಶೆಟ್ಟಿಯ ‘ಶಂಕರಾಭರಣ’ ಟ್ರೇಲರ್‌ಗೆ ಪ್ರೇಕ್ಷಕರಿಂದ ಮೆಚ್ಚುಗೆ; ನವೆಂಬರ್ 20ಕ್ಕೆ ಸಿನಿಮಾ ಬಿಡುಗಡೆ!

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿರುವ ನಟ...

ವಿಜಯಪುರ | ನ.17, 18ರಂದು ಕಲಾ ಪ್ರತಿಭೋತ್ಸವ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮಕ್ಕಳು ಮತ್ತು ಯುವಜನರಲ್ಲಿನ ಸುಪ್ತ ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ...