ಟಿಎಂಸಿಯಲ್ಲಿ ಅಫಿಡವಿಟ್ ಕದನ: ಮೂಲ ಹೆಸರು, ಚಿಹ್ನೆ, ಹಣಕ್ಕಾಗಿ ಲಕ್ಷಾಂತರ ಅಫಿಡವಿಟ್ ಸಲ್ಲಿಕೆ

Date:

ಪಶ್ಚಿಮ ಬಂಗಾಳದ ಟಿಎಂಸಿಯಲ್ಲಿನ ಆಂತರಿಕ ವಿಭಜನೆಯು ಚುನಾವಣಾ ಆಯೋಗದ (ECI) ಅಂಗಳದಲ್ಲಿ ಬೃಹತ್ ‘ಅಫಿಡವಿಟ್ ಯುದ್ಧ’ವಾಗಿ ಮಾರ್ಪಟ್ಟಿದೆ. ವಿಧಾನಸಭಾ ಚುನಾವಣೆಯ ಪರಾಭವದ ನಂತರ ಪಕ್ಷ ಇಬ್ಭಾಗವಾಗಿದ್ದು, ಪಕ್ಷದ ಮೂಲ ಹೆಸರು, ಅಧಿಕೃತ ಚಿಹ್ನೆ ಹಾಗೂ ಪಕ್ಷದ ಖಾತೆಯಲ್ಲಿರುವ ಹಣದ ಮೇಲಿನ ಹಕ್ಕನ್ನು ಪಡೆಯಲು ಮಮತಾ ಬ್ಯಾನರ್ಜಿ ನೇತೃತ್ವದ ಬಣ ಮತ್ತು ಬಂಡಾಯವೆದ್ದಿರುವ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (DTC) ಬಣಗಳ ನಡುವೆ ಲಕ್ಷಾಂತರ ಅಫಿಡವಿಟ್ ಸಲ್ಲಿಕೆಯ ಪೈಪೋಟಿ ನಡೆಯುತ್ತಿದೆ.

- Advertisement -

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ, ರಾಜ್ಯಸಭಾ ಸಂಸದೆ ಡೋಲಾ ಸೇನ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಕೋಲ್ಕತ್ತಾ ಪೊಲೀಸ್ ಕಮಿಷನರ್‌ಗೆ ಸುದೀರ್ಘ ದೂರು ಪತ್ರ ಬರೆದಿದ್ದಾರೆ. “ಆಡಳಿತಾರೂಢ ಬಿಜೆಪಿ ಸರ್ಕಾರವು ಪೋಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಬಂಡಾಯ ನಾಯಕರಾದ ರಿತಬ್ರತ ಬ್ಯಾನರ್ಜಿ ಮತ್ತು ಅರೂಪ್ ರಾಯ್ ನೇತೃತ್ವದ ಬಣದ ಪರವಾಗಿ ಬಲವಂತವಾಗಿ ಅಫಿಡವಿಟ್‌ಗಳನ್ನು ಸಂಗ್ರಹಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

“ರಾಜ್ಯದ 607 ಪೊಲೀಸ್ ಠಾಣೆಗಳ ಪೋಲಿಸ್ ಅಧಿಕಾರಿಗಳಿಗೆ ತಲಾ 1,100ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ಸಂಗ್ರಹಿಸಲು ಸೂಚನೆ ನೀಡಲಾಗಿದೆ, ಕನಿಷ್ಠ 6 ಲಕ್ಷ ನಕಲಿ ಅಫಿಡವಿಟ್‌ಗಳನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಮಾತ್ರವಲ್ಲದೆ, ನಮ್ಮ ಬೆಂಬಲಿಗರಿಗೆ ಅಫಿಡವಿಟ್ ಸಲ್ಲಿಸಲು ಅಗತ್ಯವಿರುವ ಸ್ಟಾಂಪ್ ಪೇಪರ್‌ಗಳು ಸಿಗದಂತೆ ತಡೆಯಲಾಗುತ್ತಿದೆ” ಎಂದು ಡೋಲಾ ಸೇನ್ ದೂರಿದ್ದಾರೆ.

ಇನ್ನೊಂದೆಡೆ, ಬಿಜೆಪಿ ಬೆಂಬಲಿತ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ನಾಯಕ ರಿತಬ್ರತ ಬ್ಯಾನರ್ಜಿ ಅವರು, “ಅಕ್ಟೋಬರ್ 24 ರಂದು ಕೋಲ್ಕತ್ತಾದಿಂದ ನವದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ಅಫಿಡವಿಟ್‌ಗಳನ್ನು ಹೊತ್ತು ಸಾಗುತ್ತಿದ್ದ ತಮ್ಮ ಕಂಟೇನರ್ ಟ್ರಕ್ ಮೇಲೆ ಹರಿಯಾಣ-ದೆಹಲಿ ಗಡಿಯಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 28 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಬಳಿ ಮಮತಾ ಬಣದವರಂತೆ ಚಾರ್ಟರ್ಡ್ ವಿಮಾನಗಳಲ್ಲಿ ದಾಖಲೆಗಳನ್ನು ಕಳುಹಿಸುವಷ್ಟು ಹಣವಿಲ್ಲದ ಕಾರಣ ಟ್ರಕ್‌ಗಳಲ್ಲಿ ಕಳುಹಿಸಲಾಗುತ್ತಿತ್ತು; ಹರಿಯಾಣ ಗಡಿಯ ಬಳಿ ಬಂದೂಕು ತೋರಿಸಿ ಚಾಲಕ ಮತ್ತು ಸಿಬ್ಬಂದಿಯನ್ನು ಇಳಿಸಿ ಟ್ರಕ್ ಅಪಹರಿಸಲು ಯತ್ನಿಸಲಾಗಿದೆ. ಆದರೆ ಕಾರ್ಯಕರ್ತರು ಅದನ್ನು ತಡೆದಿದ್ದಾರೆ. ಒಟ್ಟು 9 ಟ್ರಕ್‌ಗಳ ಪೈಕಿ ಈಗಾಗಲೇ 6 ಟ್ರಕ್‌ಗಳು ದೆಹಲಿ ತಲುಪಿವೆ” ಎಂದು ಹೇಳಿದ್ದಾರೆ.

ಈ ಆರೋಪಗಳನ್ನು ಮಮತಾ ಬಣದ ಸಂಸದ ಕಲ್ಯಾಣ್ ಬ್ಯಾನರ್ಜಿ ತಳ್ಳಿಹಾಕಿದ್ದು, ಇದು ಕೇವಲ ನಾಟಕ ಎಂದು ಬಣ್ಣಿಸಿದ್ದಾರೆ.

ಅಂದಹಾಗೆ, ಸೆಪ್ಟೆಂಬರ್ 17 ರಂದು ಚುನಾವಣಾ ಆಯೋಗವು ‘ಟಿಎಂಸಿ’ ಹೆಸರು ಮತ್ತು ಚಿಹ್ನೆಯನ್ನು ಬಳಸದಂತೆ ಮಧ್ಯಂತರ ತಡೆ ನೀಡಿ, ಎರಡೂ ಬಣಗಳಿಗೆ ತಮ್ಮ ಬೆಂಬಲಿಗರ ಆಧಾರವನ್ನು ನಿರೂಪಿಸಲು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು. ಕಳೆದ ಅಕ್ಟೋಬರ್ 6ರ ಉಪಚುನಾವಣೆಗೆ ಆಯೋಗವು ಮಮತಾ ಬ್ಯಾನರ್ಜಿ ಬಣಕ್ಕೆ ‘ಫುಟ್‌ಬಾಲ್ ಆಟಗಾರ’ ಚಿಹ್ನೆ ಮತ್ತು ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್‌ಗೆ ‘ಲಕೋಟೆ’ ಚಿಹ್ನೆಯನ್ನು ತಾತ್ಕಾಲಿಕವಾಗಿ ನೀಡಿತ್ತು.

ಸಲ್ಲಿಸಲಾಗುವ ಅಫಿಡವಿಟ್‌ಗಳಲ್ಲಿ ನಾಯಕರ/ಕಾರ್ಯಕರ್ತರ ಹೆಸರು, ವಿಳಾಸ, ಮತದಾರರ ಗುರುತಿನ ಚೀಟಿ ಸಂಖ್ಯೆ, ಭಾರತೀಯ ಪೌರತ್ವ ಹಾಗೂ ಅವರು ಯಾವ ನಾಯಕನಿಗೆ (ಮಮತಾ ಅಥವಾ ಅರೂಪ್ ರಾಯ್) ಬೆಂಬಲ ನೀಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಈ ಪತ್ರಗಳು ಲಕ್ಷಾಂತರ ಸಂಖ್ಯೆಯಲ್ಲಿ ತಲುಪುತ್ತಿರುವುದರಿಂದ ಅವುಗಳನ್ನು ಪರಿಶೀಲಿಸಲು ಕನಿಷ್ಠ 6 ತಿಂಗಳು ಬೇಕು ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಈ ಹಿಂದೆ, ತಮಿಳುನಾಡಿನ ಎಐಎಡಿಎಂಕೆ, ಮಹಾರಾಷ್ಟ್ರದ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳ ವಿಭಜನೆಯ ಸಂದರ್ಭದಲ್ಲೂ ಇದೇ ರೀತಿಯಾಗಿ ಲಕ್ಷಾಂತರ ಅಫಿಡವಿಟ್‌ಗಳ ಮಹಾಪೂರವೇ ಹರಿದುಬಂದಿತ್ತು. ಇದೀಗ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದಲ್ಲೂ ಅದೇ ಇತಿಹಾಸ ಮರುಕಳಿಸಿದೆ. ಅಂತಿಮವಾಗಿ ಮೂಲ ತೃಣಮೂಲ ಕಾಂಗ್ರೆಸ್ ಯಾರ ವಶವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು ಅಲ್ಪಸಂಖ್ಯಾತರ ವಾಸ್ತವ ಸ್ಥಿತಿ

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು,...

ಬೀದರ್ ವಿವಿ ನೂತನ ಮೌಲ್ಯಮಾಪನ ಕುಲಸಚಿವರಾಗಿ ರಾಜಕುಮಾರ್ ಮಾಲಿಪಾಟೀಲ ನೇಮಕ

ಬೀದರ್ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಹುದ್ದೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ...

ಬೀದರ್‌ | ವಚನ-ದಾಸ ಸಾಹಿತ್ಯದಲ್ಲಿ ಮೊಳಗಿದ ಬಂಡಾಯ ಧ್ವನಿ: ಸಚಿವ ಈಶ್ವರ ಖಂಡ್ರೆ

ಬಿ.ಶ್ಯಾಮಸುಂದರ್‌ ವೇದಿಕೆ : ಸಮಾಜೋಧಾರ್ಮಿಕ ಕ್ರಾಂತಿಯ ಮೂಲಕ ಹೊಸ ಚಿಂತನೆಗಳಿಗೆ ನಾಂದಿ...