ವಾರಾಣಸಿ | ‘ಭಾರತ ರತ್ನ’ ಉಸ್ತಾದ್ ಬಿಸ್ಮಿಲ್ಲಾ ಖಾನ್ ಮನೆ ಧ್ವಂಸ; ಸ್ಪಷ್ಟನೆ ನೀಡಿದ ಅಧಿಕಾರಿಗಳು

Date:

ವಾರಾಣಸಿಯ ಹಡಹಾ ಸಾರಾಯ್ ಪ್ರದೇಶದಲ್ಲಿರುವ ಭಾರತ ರತ್ನ, ಶಹನಾಯಿ ದಿಗ್ಗಜ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮನೆಯನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಆಡಳಿತದ ಈ ಕ್ರಮವು ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ವಿರೋಧಕ್ಕೆ ಗ್ರಾಸವಾಗಿದೆ.

- Advertisement -

ವಿರೋಧಗಳ ನಡುವೆಯೇ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಈ ಧ್ವಂಸ ಕ್ರಮವು ಯಾವುದೇ ಸರ್ಕಾರಿ ಕ್ರಮ ಅಥವಾ ಬುಲ್ಡೋಜರ್ ಕಾರ್ಯಾಚರಣೆಯಲ್ಲ. ಬದಲಿಗೆ, ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಆ ಕಟ್ಟಡವನ್ನು ನವೀಕರಿಸಲು ಮತ್ತು ಮರುನಿರ್ಮಾಣ ಮಾಡಲು ಕುಟುಂಬದ ಸದಸ್ಯರೇ ಸ್ವತಃ ಕೈಗೆತ್ತಿಕೊಂಡಿರುವ ಕಾರ್ಯ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಈ ಮನೆಯು ಬಹಳ ಹಳೆಯದಾಗಿದ್ದು, ತೀವ್ರ ಹಾನಿಗೊಳಗಾಗಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡದ ಅಪಾಯಕಾರಿ ಭಾಗಗಳನ್ನು ತೆರವುಗೊಳಿಸುವಂತೆ ವಾರಾಣಸಿ ನಗರ ಪಾಲಿಕೆ (VMC) ಹಿಂದೆ ನೋಟಿಸ್ ನೀಡಿತ್ತು ಎಂದು ತಿಳಿದುಬಂದಿದೆ.

ಉಸ್ತಾದ್ ಅವರ ಮೊಮ್ಮಗ ಮೊಹಮ್ಮದ್ ಸಿಬ್ಟೇನ್ ನೀಡಿರುವ ಮಾಹಿತಿಯಂತೆ, ಕುಟುಂಬದಲ್ಲಿ ಆರಂಭದಲ್ಲಿದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡ ನಂತರ, ಶಿಥಿಲಗೊಂಡಿದ್ದ ಮನೆಯ ಭಾಗಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಕುಟುಂಬವೇ ನಿರ್ಧರಿಸಿದೆ. ನಿರ್ಮಿಸಲಾಗುವ ಹೊಸ ಕಟ್ಟಡದ ನೆಲಮಹಡಿಯ ಒಂದು ಭಾಗವನ್ನು ಬಿಸ್ಮಿಲ್ಲಾ ಖಾನ್ ಅವರ ನೆನಪಿಗಾಗಿ ಆಡಿಯೋ ಮ್ಯೂಸಿಯಂ ಮಾಡಲು ನಗರ ಪಾಲಿಕೆಗೆ ಬಿಟ್ಟುಕೊಡಲು ಕುಟುಂಬ ಯೋಜಿಸಿದೆ.

ಆದಾಗ್ಯೂ, ಕಟ್ಟಡದ ಭಾಗಗಳನ್ನು ತೆರವುಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜಕೀಯ ರಂಗದಲ್ಲಿ ತೀವ್ರ‌ ವಿರೋಧ-ಚರ್ಚೆಗಳು ನಡೆದಿವೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಧ್ವಂಸಗೊಂಡ ಮನೆಯ ಚಿತ್ರಗಳನ್ನು ಹಂಚಿಕೊಂಡು, “ಬಿಜೆಪಿ ಸರ್ಕಾರವು ಬಿಸ್ಮಿಲ್ಲಾ ಖಾನ್ ಅವರ ಸಾಂಸ್ಕೃತಿಕ ಪರಂಪರೆ ಮತ್ತು ದೇಶದ ಪರಂಪರೆಯನ್ನು ನಾಶಪಡಿಸುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದರು.

ಅಖಿಲೇಶ್ ಯಾದವ್ ಅವರ ಆರೋಪಗಳಿಗೆ ತಕ್ಷಣವೇ ಸ್ಪಷ್ಟನೆ ನೀಡಿದ ವಾರಾಣಸಿ ನಗರ ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯ ಚೌಕ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು, “ಈ ಧ್ವಂಸ ಕಾರ್ಯಾಚರಣೆಯಲ್ಲಿ ಆಡಳಿತ ಮಂಡಳಿ ಅಥವಾ ಸರ್ಕಾರದ ಯಾವುದೇ ಪಾತ್ರವಿಲ್ಲ.‌ಆಸ್ತಿಯ ಮಾಲೀಕರೇ ಖಾಸಗಿಯಾಗಿ ಪುನರ್ನಿರ್ಮಾಣ ಕಾರ್ಯಕ್ಕಾಗಿ ಹಳೆಯ ಭಾಗಗಳನ್ನು ತೆರವುಗೊಳಿಸುತ್ತಿದ್ದಾರೆ” ಎಂದು ಖಚಿತಪಡಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುರ್ತು ಪರಿಸ್ಥಿತಿ ಒಂದು ದೊಡ್ಡ ತಪ್ಪು; ಇಂದಿರಾ ಗಾಂಧಿಗೂ ಪಶ್ಚಾತ್ತಾಪವಿತ್ತು: ಸೋನಿಯಾ ಗಾಂಧಿ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು1975ರಲ್ಲಿ ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಯ...

ಶಿರಸಿ | ಬೆಲೆ ಏರಿಕೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಹಾಲಿನ ಬೆಲೆ, ಬಸ್ ಪ್ರಯಾಣ ದರ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ...

ಬಾಗಲಕೋಟೆ | ವಕೀಲ ವೃತ್ತಿ ಯಶಸ್ಸಿಗೆ ನಿರಂತರ ಅಧ್ಯಯನ, ಭಾಷಾ ಪ್ರೌಢಿಮೆ ಅಗತ್ಯ: ಪದ್ಮಾವತಿ ಮಾನೆ

ವಕೀಲ ವೃತ್ತಿಯು ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಶ್ರೇಷ್ಠ...