ಕೊಡವ ಸಂಸ್ಕೃತಿ ಉಳಿವಿಗೆ ದುಡಿ, ತಾಳ, ಒಡಿಕತ್ತಿ ವಿತರಣೆ

Date:

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳ ಸಂರಕ್ಷಣೆಯ ಉದ್ದೇಶದಿಂದ ವಿವಿಧ ಕುಟುಂಬಗಳು ಮತ್ತು ಸಂಘ-ಸಂಸ್ಥೆಗಳಿಗೆ ಗುರುವಾರ ದುಡಿ, ತಾಳ ಹಾಗೂ ಒಡಿಕತ್ತಿಗಳನ್ನು ವಿತರಿಸಲಾಯಿತು.

- Advertisement -

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಪರಿಕರಗಳನ್ನು ವಿತರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸರ್ಕಾರಿ ಶಾಲೆಗಳ ಕಣ್ಮರೆ ಎಂದರೆ ಬಹುತ್ವದ ನಾಶ; ಹರಳಿಮಠ...

ರಾಜ್ಯಾದ್ಯಂತ ಹರಡಿರುವ ಸರ್ಕಾರಿ ಶಾಲೆಗಳು ಬಹುತ್ವದ ಕೇಂದ್ರಗಳು. ಇವು ಕನ್ನಡದ ಗುರುತುಗಳು ಕೂಡ ಹೌದು. ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಎಂದಿಗೂ ಮುಚ್ಚದೇ ಜೀವಂತವಾಗಿ ಮುಂದುವರೆಯಲೇ ಬೇಕಾಗಿದೆ. ಏಕೆಂದರೆ ಈ ಶಾಲೆಗಳು ಗುಪ್ತಗಾಮಿನಿಯಾಗಿ...

ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ...

ಸರ್ಕಾರದ ಅಧಿಕೃತ ಆದೇಶದ ಪ್ರತಿ ಎಲ್ಲಿದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೂ ಬಾರದ ನೇಮಕಾತಿ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಹೇಗೆ? ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳ ಮೇಲೆ ರಾಜಕೀಯ ಹಿಡಿತ ಸಾಧಿಸುವ...

ಉತ್ತರ ಪ್ರದೇಶ | ಜೈಲಿನಿಂದ ಹೊರಬಂದ ಆಜಂ ಖಾನ್:ಚುನಾವಣಾ...

ಹನ್ನೊಂದು ತಿಂಗಳ ಸುದೀರ್ಘ ಜೈಲುವಾಸದ ನಂತರ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ಸಮಾಜವಾದಿ ಪಕ್ಷದ (SP) ಹಿರಿಯ ನಾಯಕ ಆಜಂ ಖಾನ್ ಅವರ ಆಕ್ರಮಣಕಾರಿ ಮಾತುಗಳು ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ...

ಚೋಯಮಾಡಂಡ ಕುಟುಂಬಕ್ಕೆ 4 ದುಡಿ, ಪುತ್ತರೀರ ಕುಟುಂಬಕ್ಕೆ 4 ದುಡಿ, ಕೊಡಗು ಹೆಗ್ಗಡೆ ಸಮಾಜದ ಪೊಮ್ಮಕ್ಕಡ ತಂಡಕ್ಕೆ 12 ಜೊತೆ ತಾಳ (24), ನಗರದ ಸುಬ್ರಮಣ್ಯಕೇರಿಗೆ 8 ಜೊತೆ ತಾಳ (16), ವಿನಾಯಕ ಕೇರಿಗೆ 12 ಜೊತೆ ತಾಳ (24), ಸಣ್ಣುವಂಡ ಕುಟುಂಬಕ್ಕೆ 4 ದುಡಿ, ಕೊಡಗು ಹೆಗ್ಗಡೆ ಸಮಾಜದ ಬಿಟ್ಟಂಗಾಲಕ್ಕೆ ಒಂದು ಒಡಿಕತ್ತಿ ಹಾಗೂ ಅರಮೇರಿಯ ಐರಿ ಸಮಾಜಕ್ಕೆ ಒಂದು ಒಡಿಕತ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೊಡವ ಪದ್ಧತಿ, ಸಂಸ್ಕೃತಿ ಹಾಗೂ ಸಂಸ್ಕಾರಗಳು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಕೊಡವ ಭಾಷಿಕ ಜನಾಂಗದ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಕೊಡವ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಉಳಿಸುವ ಉದ್ದೇಶದಿಂದ ಅಕಾಡೆಮಿ ವತಿಯಿಂದ ದುಡಿ, ತಾಳ ಸೇರಿದಂತೆ ಸಾಂಪ್ರದಾಯಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ. ಪ್ರತಿಯೊಂದು ಬಲ್ಯಮನೆ ಹಾಗೂ ಐನ್‌ಮನೆಗಳಲ್ಲಿ ಹಬ್ಬ, ಮದುವೆ, ತಿಥಿ ಸೇರಿದಂತೆ ಸಾಂಪ್ರದಾಯಿಕ ಸಂದರ್ಭಗಳಲ್ಲಿ ದುಡಿ ಬಳಕೆಯಾಗಬೇಕು. ಇಂತಹ ಆಚರಣೆಗಳು ನಿರಂತರವಾಗಿ ನಡೆದಾಗ ಮಾತ್ರ ಕೊಡವಾಮೆಯ ತನ್ನತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೊಡವ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅಭಿಮಾನದಿಂದ ಉಳಿಸಿ ಬೆಳೆಸುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ಸಂಗತಿ. ಆದರೆ, ಕೆಲವೆಡೆ ಸಾವಿನ ಸಂದರ್ಭಗಳಲ್ಲಿ ಮದ್ಯ ಸೇವನೆ ಹಾಗೂ ವಿತರಣೆ ಮಾಡುವ ಮೂಲಕ ಜನಾಂಗದ ಗೌರವಕ್ಕೆ ಧಕ್ಕೆ ತರುವ ಬೆಳವಣಿಗೆಗಳು ನಡೆಯಬಾರದು. ಸಾವಿನ ಮನೆಯಲ್ಲಿ ದುಃಖದ ವಾತಾವರಣವಿರುತ್ತದೆ. ಅಂತ್ಯಕ್ರಿಯೆ ಮುಗಿಸಿ ಮನೆಗೆ ಮರಳಿದ ತಕ್ಷಣ ಮದ್ಯ ವಿತರಿಸಿ ಸಂಭ್ರಮಿಸುವುದು ಸೂಕ್ತ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪರಿಕರಗಳನ್ನು ಸ್ವೀಕರಿಸಿದ ಗಣಪತಿ ಸಿ.ಎಂ. ಮಾತನಾಡಿ, ಅನಾದಿಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯಗತ್ಯ ಎಂದರು.

ಚೊಟ್ಟೆಯಂಡ ಸಂಜು ಕಾವೇರಪ್ಪ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ ಕೊಡವ ಭಾಷಿಕ ಜನಾಂಗಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಅಲ್ಲದೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೂ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಈ ತನಿಖಾ ವರದಿ ಓದಿದ್ದೀರಾ? ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಬದಲಾವಣೆ ಸುತ್ತ ರಾಜಕೀಯ: ಆದೇಶವಿಲ್ಲದೆ ನೇಮಕದ ಸುದ್ದಿ ಹರಡಿದ್ದೇಕೆ?

ಕೊಡವ ಭಾಷಿಕರು ಮದುವೆ ಸೇರಿದಂತೆ ಶುಭಕಾರ್ಯಗಳಲ್ಲಿ ಕುಪ್ಪೆಚಾಲೆ ಉಡುಪನ್ನು ಧರಿಸಿ ಪಾಲ್ಗೊಳ್ಳಬೇಕು. ಇದರಿಂದ ಕೊಡವ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಾಂಪ್ರದಾಯಿಕ ಉಡುಗೆಗಳ ಮಹತ್ವವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಈ ವಿಶೇಷ ಲೇಖನ ಓದಿದ್ದೀರಾ? ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಅಕಾಡೆಮಿ ಸದಸ್ಯ ನಾಪಂಡ ಗಣೇಶ್, ಮಾಜಿ ಸದಸ್ಯ ತೋರೇರ ಮುದ್ದಯ್ಯ, ಪರಿಕರ ಸ್ವೀಕರಿಸಿದ ತೋರೇರ ಪೊನ್ನಕ್ಕಿ, ಸಣ್ಣುವಂಡ ಕಿಶೋರ್ ನಾಚಪ್ಪ, ಅಕಾಡೆಮಿ ಸದಸ್ಯರಾದ ಪುತ್ತರೀರ ಪಪ್ಪು ತಿಮ್ಮಯ್ಯ, ಕೊಂಡಿಜಮ್ಮನ ಎಂ. ಬಾಲಕೃಷ್ಣ, ಕಂಬೆಯಂಡ ಡೀನಾ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಪೊನ್ನಿರ ಯು. ಗಗನ್, ಪಾನಿಕುಟ್ಟಿರ ಕೆ. ಕುಟ್ಟಪ್ಪ ಸೇರಿದಂತೆ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ಪ್ರಕರಣ: ವಿದ್ಯಾರ್ಥಿಗಳ ಆರೋಪಕ್ಕೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಸ್ಪಷ್ಟನೆ

ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ದೀಪಾವಳಿ ದಿನದ ಘಟನೆಗೆ ಸಂಬಂಧಿಸಿ ಪೊಲೀಸರ...

ಕಲಬುರಗಿ | 55 ವರ್ಷಗಳಾದರೂ ಕುಡಿಯುವ ನೀರಿಗೆ ಪರದಾಟ; ಪಾಲಿಕೆ ಎದುರು ಕರವೇ ಪ್ರತಿಭಟನೆ

ನಗರದ ವಾರ್ಡ್ ನಂ.30ರ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ...

ಕಲಬುರಗಿ | ನೋಟ್‌ಬುಕ್, ಪೆನ್ನು ವಿತರಿಸುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡ ಸ್ನೇಹ ಹಡಪದ

ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಪವಾಡ ಪುರುಷ ಸದ್ಗುರು ಶ್ರೀ ಕೋರಿಸಿದ್ದೇಶ್ವರ...