ಅಗೌರವದಿಂದ ಮಾತನಾಡುವುದನ್ನು ನಿಲ್ಲಿಸಿ; ರೇವಣ್ಣಗೆ ಶಿವಲಿಂಗೇಗೌಡ ಎಚ್ಚರಿಕೆ

Date:

  • ʼರೇವಣ್ಣ ಅವರು ಏಕವಚನದಲ್ಲಿ ಕಳ್ಳನನ್ನು ಬೆಳೆಸಿಬಿಟ್ಟೆ ಎಂದಿದ್ದಾರೆʼ
  • ʼಸಾಮಾನ್ಯ ಹಳ್ಳಿ ರೈತನ ಮಗನಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೀನಿʼ

ರೇವಣ್ಣ ಅವರೇ ನಾನು ನಿಮ್ಮ ಬಗ್ಗೆ ಏಕವಚನದಲ್ಲಿ ಮಾತಾಡಬಹುದು. ಆದರೆ, ಹಾಗೆ ಮಾಡಲ್ಲ. ಅಗೌರವದಿಂದ ಮಾತನಾಡುವುದನ್ನು ನೀವು ಮೊದಲು ನಿಲ್ಲಿಸಿ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಮಾಜಿ ಶಾಸಕ ಕೆ ಎಂ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.

- Advertisement -

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ದಿನ ದೇವೇಗೌಡರು, ರೇವಣ್ಣ ಅವರು ಸತ್ಯ ಮರೆ ಮಾಚುವಂಥ ಮೂರ್ನಾಲ್ಕು ಆಪಾದನೆಗಳನ್ನು ನನ್ನ ಮೇಲೆ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಅವರು ಇಂತಹ ಕೆಲಸ ಮಾಡಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ತೆಂಗಿನಮರ ನಾಶವಾದಾಗ ರೈತರಿಗೆ ಪರಿಹಾರ ನೀಡಿ ಎಂದು ಹೋರಾಟ ಮಾಡಿ ಮಲಗಿದರೆ, ನಾಟಕ ಎಂದು ಹೇಳ್ತಾರಲ್ಲ. ಇದು ಅವರಿಗೆ ಗೌರವ ತರುವ ಕೆಲಸನಾ? ನಾನು ಏನಕ್ಕೆ ಮಲಗಿದ್ದೆ ಎಂದು ಅರಸೀಕೆರೆ ತಾಲೂಕಿನ ಜನಕ್ಕೆ ಗೊತ್ತಿದೆ. ಪಾಪ ಅವರಿಗೆ ಭಗವಂತ ಒಳ್ಳೆಯದು ಮಾಡಲಿ, ನಾನೇನು ದ್ವೇಷ ಮಾಡಲ್ಲ” ಎಂದಿದ್ದಾರೆ.

“ರಾಜಕೀಯವಾಗಿ ನಾನು ಬೆಳೆದಿದ್ದು ನನಗೆ ಗೊತ್ತಿದೆ. ರೇವಣ್ಣ ಅವರು ಏಕವಚನದಲ್ಲಿ ಕಳ್ಳನನ್ನು ಬೆಳೆಸಿಬಿಟ್ಟೆ ಎಂದಿದ್ದಾರೆ. ಅವರು ಏನು ಬೆಳೆಸಿರೋದು, ಎಷ್ಟು ಕೊಟ್ಟಿರೋದು, ಏನು ಕೊಟ್ಟಿದ್ದಾರೆ. ನಾನು ಹೇಗೆ ಬೆಳೆದಿದ್ದೀನಿ ಅಂತ ನನಗೆ ಗೊತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.

“ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ 13 ಸಾವಿರ ಮತಗಳಷ್ಟೇ ಬರುತ್ತಿದ್ದವು. ಬೇಕಾದರೆ ತೆಗೆದು ನೋಡಲಿ. ನಾನು ಸ್ಪರ್ಧಿಸಿದ ಬಳಿಕ 80 ಸಾವಿರ ಮತಗಳು ಬಂದಿದ್ದು, ಹೆಚ್ಚಾಗಿದ್ದು ಏಕೆ ಎಂಬುದನ್ನು ಇವರು ತಿಳಿದುಕೊಳ್ಳಬೇಕು. ಎಂಪಿ ಚುನಾವಣೆಯಲ್ಲಿ ಎಷ್ಟು ಓಟು ಕೊಡುತ್ತಿದ್ದೇನೆ. ಇದೆಲ್ಲಾ ಸುಳ್ಳಾ, ಅಂಕಿ ಅಂಶಗಳನ್ನು ತೆಗೆದು ನೋಡಲಿ” ಎಂದು ಗುಡುಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಾಸನ | ಬಿಇಒ ಬಲರಾಮ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ; ಎಚ್ ಪಿ ಸ್ವರೂಪ್ ಕಿಡಿ

“ಈ ಬಾರಿ ಅರಸೀಕೆರೆಯಲ್ಲಿ ಚುನಾವಣೆ ಮಾಡಲಿ ಗೊತ್ತಾಗುತ್ತೆ. ಪಾಪ ಟಿಕೆಟ್ ಕೊಡುತ್ತೇನೆಂದು ಬಾಣಾವರ ಆಶೋಕ್ ಅವರನ್ನು ಕರೆದುಕೊಂಡು ಬಂದು ಇವರು ಮಾಡಿದ್ದು ಮೋಸ ಅಲ್ವಾ? ಈಗ ಅವನ್ಯಾರೋ ಬಿಜೆಪಿಯಲ್ಲಿ ಇದ್ದವನನ್ನು ಕರೆದುಕೊಂಡು ಬಂದು ಹೋರಾಟ ಮಾಡುತ್ತಿದ್ದಾರಲ್ಲಾ ಮಾಡಲಿ” ಎಂದು ಸವಾಲು ಹಾಕಿದ್ದಾರೆ.

“ನಿಮ್ಮ ಘನತೆ, ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿಕೊಳ್ಳಬೇಡಿ. ನನಗೂ ನೋವಿದೆ ರೇವಣ್ಣ ಅವರೇ, ನಿಮ್ಮ ಬಗ್ಗೆ ಮಾತನಾಡಲ್ಲ. ಸಭೆ, ಸಮಾರಂಭಗಳಲ್ಲಿ ಗೌರವದಿಂದ ಮಾತನಾಡಿ” ಎಂದು ಎಚ್ಚರಿಸಿದ್ದಾರೆ.

“ನೀವೇನು ಎಲ್ಲವನ್ನೂ ತಂದು ಹಾಕಿಲ್ಲ, ನಾನೂ ಕಷ್ಟಪಟ್ಟು ಮೇಲೆ ಬಂದಿದ್ದೀನಿ. ನಾನೇನು ಮಾಜಿ ಪ್ರಧಾನಿಯ ಮಗ ಅಲ್ಲ, ವಂಶಸ್ಥನೂ ಅಲ್ಲ. ಸಾಮಾನ್ಯ ಹಳ್ಳಿ ರೈತನ ಮಗನಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೀನಿ” ಎಂದು ತಿರುಗೇಟು ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಕೋಲಾರ | ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಆಪ್ತ ಸಹಾಯಕರಿಗೆ ಮನವಿ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವುದು, ತಡೆಹಿಡಿದಿರುವ ಕನಿಷ್ಠ ವೇತನ ಜಾರಿಗೊಳಿಸುವುದು, ಗುತ್ತಿಗೆ...