ರಾಜ್ಯ ಬಜೆಟ್ | ವಿವಿಧ ಇಲಾಖೆಗಳಿಗೆ ನೀಡಿರುವ ತೆರಿಗೆ ಗುರಿ; ಆದಾಯದ ಪಾಲು ಮತ್ತು ಖರ್ಚಿನ ವೆಚ್ಚ

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೂರು ಗಂಟೆಯ ಭಾಷಣದಲ್ಲಿ ಈ ಬಾರಿ ದಾಖಲೆಯ 3.27 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ.

- Advertisement -

ಹಿಂದಿನ ಸರ್ಕಾರದ 2.65 ಲಕ್ಷ ಕೋಟಿ ರೂ ಬಜೆಟ್ ಗಾತ್ರಕ್ಕಿಂತ ಈ ಬಾರಿ ಶೇ. 20ಕ್ಕಿಂತ ಹೆಚ್ಚಿದೆ. ಮುಖ್ಯಮಂತ್ರಿಯವರ ಆಯವ್ಯಯದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ಅತೀ ಹೆಚ್ಚು 52,000 ಕೋಟಿ ರೂ. ಅನುದಾನ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಈ ಬಜೆಟ್‌ನಲ್ಲಿ ಸಾಲ ಪಾವತಿಗಳಿಗೆ 22,441 ಕೋಟಿ ರೂ ಖರ್ಚಾಗುತ್ತದೆ. ಬಂಡವಾಳ ಹೂಡಿಕೆ ವೆಚ್ಚ 54,374 ಕೋಟಿ ರೂ ಇದೆ. ಬಜೆಟ್​ಗೆ ಇಷ್ಟೊಂದು ಹಣವನ್ನು ಸರ್ಕಾರ ಹೊಂದಿಸಲು ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಿದೆ. ವಾಣಿಜ್ಯ ತೆರಿಗೆ ಇಲಾಖೆಗೆ ಅತೀ ಹೆಚ್ಚು ತೆರಿಗೆ ಗುರಿ ನೀಡಲಾಗಿದೆ.  

ಈ ಸುದ್ದಿ ಓದಿದ್ದೀರಾ? 3 ಲಕ್ಷ ಮನೆಗಳು: ಸ್ವಿಗ್ಗಿ, ಜೊಮಾಟೋ ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ

ಈ ಬಾರಿಯ ಬಜೆಟ್ ವರದಿಯಲ್ಲಿ ವಾಣಿಜ್ಯ ಇಲಾಖೆಗೆ ತೆರಿಗೆ ಗುರಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ನೀಡಲಾಗಿದೆ. ಸರ್ಕಾರದ ಪ್ರಮುಖ ಆದಾಯ ವಾಣಿಜ್ಯ ತೆರಿಗೆಯಿಂದ ಬರುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ವಾಣಿಜ್ಯ ಇಲಾಖೆಗೆ ಶೇ. 20ಕ್ಕಿಂತ ಹೆಚ್ಚು ತೆರಿಗೆ ಗುರಿ ಕೊಡಲಾಗಿದೆ. ಇನ್ನುಳಿದಂತೆ ನೊಂದಣಿ ಮುದ್ರಾಂಕ ಮತ್ತು ಸಾರಿಗೆ ಇಲಾಖೆಗೂ ಹೆಚ್ಚಿನ ತೆರಿಗೆ ಗುರಿ ನೀಡಲಾಗಿದೆ.

ಸರ್ಕಾರದಿಂದ 2023-24ಕ್ಕೆ ತೆರಿಗೆ ಗುರಿ

  • ಒಟ್ಟು ರಾಜಸ್ವ ನಿರೀಕ್ಷೆ: 1,62,000 ಕೋಟಿ ರೂ
  • ವಾಣಿಜ್ಯ ತೆರಿಗೆ ಇಲಾಖೆ: 1,01,000 ಕೋಟಿ ರೂ
  • ಅಬಕಾರಿ ಇಲಾಖೆ: 36,000 ಕೋಟಿ ರೂ
  • ನೊಂದಣಿ ಮತ್ತು ಮುದ್ರಾಂಕ ಇಲಾಖೆ: 25,000 ಕೋಟಿ ರೂ
  • ಸಾರಿಗೆ ಇಲಾಖೆ: 11,500 ಕೋಟಿ ರೂ
  • ಇತರೆ ಮೂಲಗಳಿಂದ: 2,153 ಕೋಟಿ ರೂ

ಅಬಕಾರಿ ತೆರಿಗೆ ದಾಖಲೆ ಏರಿಕೆ

ಸಿದ್ದರಾಮಯ್ಯನವರ ಬಜೆಟ್ ಭಾಷಣದಲ್ಲಿ ಬಿಯರ್ ಮೇಲಿನ ಅಬಕಾರಿ ತೆರಿಗೆಯನ್ನು ಶೇ. 10ರಷ್ಟು ಏರಿಸಲಾಗಿದೆ. ಈಗಾಗಲೇ ಬಿಯರ್ ಮೇಲೆ ಶೇ. 175ರಷ್ಟು ತೆರಿಗೆ ಹೇರಲಾಗಿತ್ತು. ಈಗ ಪುನಃ ಈ ತೆರಿಗೆ ಪ್ರಮಾಣ ಬರೋಬ್ಬರಿ ಶೇ. 185ಕ್ಕೆ ಏರಿಕೆಯಾಗಿದೆ. ವಿಸ್ಕಿ, ರಮ್, ಬ್ರಾಂದಿ ಸೇರಿದಂತೆ ಮುಂತಾದ ಮದ್ಯಗಳ ಮೇಲೆ ಶೇ. 20ರಷ್ಟು ಅಬಕಾರಿ ತೆರಿಗೆ ಏರಿಕೆಯಾಗಿದೆ. ವಿಸ್ಕಿಯ ತಯಾರಿಕೆಯ ದರ 100 ರೂ.ಇದ್ದರೆ, ಇದರ ಮೇಲಿನ ತೆರಿಗೆಯೇ 40 ರೂ. ಇರುತ್ತೆ. ಇನ್ನು ಮದ್ಯದ ಸಾಗಾಟ ವೆಚ್ಚ, ಮಾರಾಟಗಾರರ ಲಾಭಾಂಶ ಎಲ್ಲವನ್ನೂ ಸೇರಿಸಿ ಎಂಆರ್‌ಪಿ ನಗದಿ ಮಾಡಲಾಗುತ್ತದೆ. ಎಲ್ಲವೂ ಸೇರಿ ಮದ್ಯ ಪ್ರಿಯರ ಕೈಗೆಟಕುವಾಗ 170 ರೂಪಾಯಿ ತಲುಪಿರುತ್ತದೆ.

ತೆರಿಗೆಯ ಆದಾಯ ಪಾಲು

1 ರೂಪಾಯಿಯ ಆದಾಯದಲ್ಲಿ ರಾಜ್ಯದ ಬೊಕ್ಕಸಕ್ಕೆ ತೆರಿಗೆ ಆದಾಯದಿಂದಲೇ 54 ಪೈಸೆ ಬರಲಿದೆ. ಸಾಲದಿಂದ 26 ಪೈಸೆ ಬರಲಿದೆ. ಕೇಂದ್ರ ತೆರಿಗೆ ಪಾಲಿನಿಂದ 12 ಪೈಸೆ, ಕೇಂದ್ರ ಸರಕಾರದ ಸಹಾಯ ಧನದಿಂದ 4 ಪೈಸೆ ಹಾಗೂ ರಾಜ್ಯ ತೆರಿಗೆಯೇತರ ರಾಜಸ್ವದಿಂದ 4 ಪೈಸೆ ಬರಲಿದೆ.

ವೆಚ್ಚದ ಪಾಲು

ಇನ್ನು ವೆಚ್ಚದ ಲೆಕ್ಕಕ್ಕೆ ಬಂದಾಗ ಸಾಲ ತೀರಿಸಲು 18 ಪೈಸೆ ಖರ್ಚಾಗಲಿದೆ. ಇತರ ಸಾಮಾನ್ಯ ಸೇವೆಗಳು ಹಾಗೂ ಇತರ ಆರ್ಥಿಕ ಸೇವೆಗಳಿಗೆ ತಲಾ 17 ಪೈಸೆ ವೆಚ್ಚವಾಗಲಿದೆ. ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿಗೆ 15 ಪೈಸೆ, ಸಮಾಜ ಕಲ್ಯಾಣಕ್ಕೆ 13 ಪೈಸೆ, ಶಿಕ್ಷಣಕ್ಕೆ 10 ಪೈಸೆ, ಆರೋಗ್ಯಕ್ಕೆ 4 ಪೈಸೆ, ಇತರ ಸಾಮಾಜಿಕ ಸೇವೆಗಳಿಗೆ 4 ಪೈಸೆ ಹಾಗೂ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕೆ 2 ಪೈಸೆ ಹಣ ವೆಚ್ಚವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಲೂನ್ ಮಾರುವ 9 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಕಾರ್ತಿಕ್‌ಗೆ ಗಲ್ಲು ಶಿಕ್ಷೆ

ಕಳೆದ ವರ್ಷದ ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ 9...

ಬಾಗೇಪಲ್ಲಿ | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ ಕಾಲೇಜು ವಿದ್ಯಾರ್ಥಿಗಳ ಗುಡ್ಡಗಾಡು ಓಟ ಸ್ಪರ್ಧೆ

ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ...

ರಾಯಚೂರು | ಮಾನ್ವಿ ಬಳಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಚಾಲಕ, ಕ್ಲೀನರ್‌ಗೆ ಗಾಯ

ಮಾನ್ವಿ ತಾಲೂಕಿನ ಗ್ರಾಮದ ಸಮೀಪದ ಹೊರವಲಯದಲ್ಲಿ ಮಾನ್ವಿ ರಸ್ತೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ...