ರಾಯಚೂರು | ಎಲ್ಲರನ್ನೂ ಕತ್ತಲಿನಿಂದ ಬೆಳಕಿನೆಡೆಗೆ ತರುವುದೇ ಪ್ರವಾದಿ ಆಶಯ: ಯೋಗೇಶ್ ಮಾಸ್ಟರ್

Date:

ಕತ್ತಲಿನಿಂದ ಬೆಳಕಿನೆಡೆಗೆ ಬರುವುದು ಪ್ರವಾದಿಯವರ ಕರೆಯಾಗಿತ್ತು. ನಾವೆಲ್ಲರೂ ದ್ವೇಷವನ್ನು ಅಳಿಸಿ, ಪ್ರೀತಿಯನ್ನು ಹಂಚಬೇಕು ಎಂದು ಹಿರಿಯ ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದ್ದಾರೆ.

- Advertisement -

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ʼಜಮಾತೆ ಇಸ್ಲಾಂ ಹಿಂದ್ʼ ಆಯೋಜಿಸಿದ್ದ ಸಮಾನತೆಯ ಸಮಾಜದ ಶಿಲ್ಪಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಒಂದು ಕಾಲದಲ್ಲಿ ಅರೇಬಿಯಾ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ಅತೀಯಾಗಿ ನಡೆಯುತ್ತಿದ್ದವು. ಪ್ರವಾದಿ ಅವರು ಪ್ರೀತಿ, ಸಹನೆಯಿಂದ ಅವರೆಲ್ಲರನ್ನೂ ಸನ್ಮಾರ್ಗದ ಕಡೆಗೆ ಕರೆ ತಂದರು. ಪ್ರಾಣಿಗಳಿಗೂ ಕೂಡ ಗೊತ್ತು, ಆಹಾರವನ್ನು ಹಂಚಿಕೊಂಡು ತಿನ್ನಬೇಕು ಅಂತ. ಆದರೆ, ಮನುಷ್ಯನು ತಿನ್ನುವ ಆಹಾರವನ್ನು ಬಿಸಾಕಿ, ದ್ವೇಷ ಸಾಧಿಸುವ ಕಡೆಗೆ ಮುಖ ಮಾಡಿದ್ದಾನೆ ಎಂದು, ಬೇಸರ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಜಮಾತ್ ಇಸ್ಲಾಂ ಹಿಂದ್‌ನ ರಾಜ್ಯ ಮುಖಂಡ ಮಹಮದ್ ಕುಂಞಿ, ಪ್ರವಾದಿ ಅವರು ಹೇಳುತ್ತಾರೆ, ಕೊಲೆ ಮಾಡಿದವನು, ಕೊಲೆ ಆದವನು ಇಬ್ಬರು ಕೂಡ ನರಕಕ್ಕೆ ಎಂದು. ಕೊಲೆ ಮಾಡಬೇಕು ಎಂಬುದು ಇಬ್ಬರ ಮನಸ್ಥಿತಿ ಆಗಿರುತ್ತದೆ. ದೇವರ ಹೆಸರಲ್ಲಿ ಅಪಪ್ರಚಾರದಿಂದ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯದಲ್ಲಿ ವಿಭಜನೆ ಮಾಡುತ್ತಿದ್ದಾರೆ. ಸುಳ್ಳು ವಿಜೃಂಭಿಸುತ್ತಿವೆ, ಸತ್ಯವನ್ನು ಮರೆಮಾಚುತ್ತಿದ್ದಾರೆ. ಇಂತಹ ಮನಸ್ಥಿತಿಯಿಂದ ಹೊರ ಬರಬೇಕಿದೆ.

ಈ ಜಗತ್ತಿನ ಮುಸಲ್ಮಾನರು, ಪ್ರವಾದಿ ಅವರು ತೋರಿಸಿದ ದಾರಿಯಲ್ಲಿ ನಡೆಯುತ್ತಿಲ್ಲ, ಅವರನ್ನು ಪೂಜಿಸುವುದಿಲ್ಲ, ಆರಾಧಿಸುವುದಿಲ್ಲ. ಅವರು ದೇವರು ಆಗಿಲ್ಲ, ಸಾಮಾನ್ಯ ಮನುಷ್ಯನಾಗಿ ಉಳಿದಿದ್ದರು. ಪ್ರಪಂಚದಲ್ಲಿ ಸುಮಾರು ಪ್ರವಾದಿಗಳು, ದಾರ್ಶನಿಕಗಳು ಬಂದರು. ಅವರೆಲ್ಲರೂ ಎಲ್ಲರನ್ನೂ ಜೋಡಿಸುವುದಕ್ಕೆ ಬಂದರೆ, ಹೊರೆತು ವಿಭಜಿಸುವುದಕ್ಕೆ ಅಲ್ಲ. ಸದ್ಯದ ಪರೀಸ್ಥಿತಿಯಲ್ಲಿ ನಾವು, ಧರ್ಮದ ಬಗ್ಗೆ ಮಾತನಾಡುವಾಗ ವಿಪರೀತ ಕೋಪ, ದ್ವೇಷದಿಂದ ಮಾತನಾಡುತ್ತೇವೆ. ಧರ್ಮದ ಬಗ್ಗೆ ಹೇಳುವಾಗ ಮುಗುಳ್ನಗೆಯಿಂದ ಮಾತಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ವಿರೂಪಾಕ್ಷಪ್ಪ, ಜಮಾತ್ ಸಿಂಧನೂರು ತಾಲ್ಲೂಕು ಸಂಚಾಲಕ  ಮಹಮದ್ ಹುಸೇನ್‌, ವಿಭಾಗೀಯ ಸಂಚಾಲಕ ದಿಲವರ್ ಅಂಬರ್ ಖಾನ್, ಬಾಬರ್ ಬೇಗ್, ಸೈಯ್ಶದಾ ಸಹಬತ್ ನಾಜ್ ಇನ್ನಿತರರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...