ತುಮಕೂರು | ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ: ಕಾರ್ಯಕರ್ತರು ಹೊರಹೋಗದಂತೆ ಪ್ರವೇಶದ್ವಾರಕ್ಕೆ ಬೀಗ!

Date:

  • ಬೀಗ ಮುರಿಯಲೆತ್ನಿಸಿದ ಕಾರ್ಯಕರ್ತರು
  • ಜೆಡಿಎಸ್ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸಭೆ

ತುಮಕೂರು ನಗರದ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ಮೖತ್ರಿಪಕ್ಷಗಳ ಸಮನ್ವಯ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸಭೆಗೆ ಬಂದಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ಎದ್ದು ಹೋಗುವುದನ್ನು ತಡೆಯಲು, ಸಭೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ, ಕೂಡಿಟ್ಟ ಘಟನೆ ನಡೆದಿದೆ.

ಗೇಟ್‌ಗೆ ಬೀಗ ಹಾಕಿದ್ದರಿಂದ ಕಾರ್ಯಕರ್ತರು ಹೊರಗಡೆ ಹೋಗಲು, ಒಳಗಡೆ ಬರಲು ಪರದಾಡಿದರು. ಮಹಿಳೆಯೊಬ್ಬರು ಬ್ಯಾಂಕ್‌ಗೆ ತೆರಳಬೇಕು, ಸಮಯ ಆಗುತ್ತಿದೆ. ಗೇಟ್ ಬೀಗ ತೆಗೆಯುವಂತೆ ಜೋರಾದ ಧ್ವನಿಯಲ್ಲಿ ಪ್ರವೇಶದ್ವಾರದ ಬಳಿ ಕಾಯುತ್ತಿದ್ದ ಮುಖಂಡರ ಬಳಿ ಹೇಳುತ್ತಿರುವುದು ಕೂಡ ಕಂಡುಬಂತು. ಮಹಿಳೆಯ ಜೊತೆಗೆ ಹಲವು ಕಾರ್ಯಕರ್ತರು ಕೂಡ ಹೊರ ಹೋಗಲು ಕಾಯುತ್ತಿದ್ದರು. ಆದರೆ ‘ಗೇಟ್ ಪಾಲಕ’ ಅವಕಾಶ ನೀಡಲಿಲ್ಲ. ಅಲ್ಲೇ ಇದ್ದ ಕೆಲ ಮಾಧ್ಯಮದ ಮಂದಿ, ಬೀಗ ಯಾಕೆ ಹಾಕುತ್ತಿದ್ದೀರಿ ಎಂದು ”ಗೇಟ್ ಪಾಲಕ’ರ ಬಳಿ ಕೇಳಿದಾಗ, “ಬೀಗ ಹಾಕಿಲ್ಲ. ಗೇಟಿಗೆ ಯಡಿಯೂರಪ್ಪನವರ ಫ್ಲೆಕ್ಸ್ ಅಂಟಿಸಿದ್ದು ಕಾಣಲಿ ಎಂದು ಬಂದ್ ಮಾಡಿದ್ದಷ್ಟೇ” ಎಂದು ಸಮಜಾಯಿಷಿ ನೀಡಿದರು.

ಹೊರಗಡೆ ಹೋಗದಂತೆ ತಡೆಯಲು ಬೀಗ ಹಾಕಿಕೊಂಡು ಹೋಗಿದ್ದರಿಂದ ತುರುವೇಕೆರೆ ಬಿಜೆಪಿ ಮಾಜಿ ಶಾಸಕ ಮಸಾಲೆ ಜಯರಾಮ್ ಮತ್ತು ಗುಬ್ಬಿ ಜೆಡಿಎಸ್ ಪಕ್ಷದ ಮುಖಂಡ ಬಿ. ಎಸ್. ನಾಗರಾಜು ಅವರು ಅಲ್ಪ ಹೊತ್ತು ಕಾದರು. ನಂತರ ತುರುವೇಕೆರೆ ಮಾಜಿ ಶಾಸಕ ಮಸಾಲೆ ಜಯರಾಮ್ ಬೀಗ ಒಡೆಯುವಂತೆ ಕಾರ್ಯಕರ್ತರಿಗೆ ಹೇಳಿದರು. ಅಷ್ಟೊತ್ತಿಗೆ ಜೆಡಿಎಸ್ ಮುಖಂಡರೊಬ್ಬರು ಬಂದು ಬೀಗ ತೆಗೆದರು. ಆ ಬಳಿಕ ಮುಖಂಡರೊಬ್ಬರು ಗೇಟ್ ಬಳಿಯೇ ನಿಂತು ಸಭೆಯಿಂದ ಹೊರಗಡೆ ಹೋಗುತ್ತಿದ್ದವರನ್ನು ತಡೆದು, ಮತ್ತೆ ಒಳಗೆ ಕಳಿಸುತ್ತಿದ್ದ ದೃಶ್ಯ ಕಂಡು ಬಂತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಕೆಲ ನಾಯಕರಲ್ಲಿ ಅಸಮಾಧಾನವಿತ್ತು. ರಾಜ್ಯದ ಹಲವೆಡೆ ನಡೆಯುತ್ತಿರುವ ಮೈತ್ರಿ ಸಭೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗುತ್ತಿರುವ ಸುದ್ದಿಗಳು ವರದಿಯಾಗುತ್ತಿದೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಕಳೆದ  ಸೋಮವಾರ ನಡೆದ ಸಭೆಯಲ್ಲಿ ಮಾತಿನ ಚಕಮಕಿ ಉಂಟಾದ ಘಟನೆ ಕೂಡ ನಡೆದಿದ್ದು. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಇದ್ದ ಸಭೆಯಲ್ಲೇ ಈ ಮಾತಿನ ಚಕಮಕಿ ಉಂಟಾಗಿ, ಇದೇ ವೇಳೆ ತಳ್ಳಾಟ-ನೂಕಾಟ ಕೂಡ ನಡೆದಿತ್ತು.

ವರದಿ: ಚಂದನ್, ತುಮಕೂರು

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಲಿಕಾಪ್ಟರ್ ಹತ್ತುವಾಗ ಎಡವಿ ಬಿದ್ದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ಪ್ರಚಾರದ...

ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು...

ತುಮಕೂರು | ಕೇಂದ್ರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ: ಗೃಹ ಸಚಿವ ಪರಮೇಶ್ವರ್

ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ...

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...