ತುಮಕೂರು | ಜಾತಿ ಮೀರಿ ಮಾನವೀಯತೆ ಸಾರುವ ತತ್ವಪದಗಳು : ಎಚ್.ಎಸ್. ಶಿವಪ್ರಕಾಶ್

Date:

 ನಶ್ವರವಾದ ಈ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಆದರೆ, ಈ ಬದಲಾವಣೆಗಳ ನಡುವೆಯೂ ಶಾಶ್ವತವಾಗಿ ಉಳಿಯುವ ಮೌಲ್ಯವೇ ಪಂಚತತ್ವ. ತತ್ವಪದಗಳನ್ನು ಕೇವಲ ಶೈಕ್ಷಣಿಕ ಅಧ್ಯಯನದ ದೃಷ್ಟಿಯಿಂದ ನೋಡದೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಮಾಡಬೇಕು. ಬದುಕಿಗೆ ಆಳವಾದ ಅರ್ಥವನ್ನು ನೀಡುವುದೇ ತತ್ವಪದಗಳ ಮೂಲ ಉದ್ದೇಶ ಎಂದು ಹಿರಿಯ ವಿದ್ವಾಂಸ ಹಾಗೂ ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.

- Advertisement -

ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ (ನ.13) ಆಯೋಜಿಸಿದ್ದ ‘ಸಂತ ಶಿಶುನಾಳ ಶರೀಫ ಮತ್ತು ತತ್ವಪದಕಾರರು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

ವಚನಕಾರರು ಮತ್ತು ಹರಿದಾಸರು ನಿರ್ದಿಷ್ಟ ಪಂಥಗಳಿಗೆ ಸೇರಿದವರಾಗಿದ್ದರೆ, ತತ್ವಪದಕಾರರಿಗೆ ಯಾವುದೇ ನಿರ್ದಿಷ್ಟ ಪಂಥದ ಚೌಕಟ್ಟಿಲ್ಲ. ಜಾತಿ ನಿವಾರಣೆಯಲ್ಲಿ ತತ್ವಪದಗಳ ಪಾತ್ರ ಮಹತ್ವದ್ದಾಗಿದೆ. ಸಮಾಜದಲ್ಲಿನ ಅನೇಕತೆಯಲ್ಲಿ ಏಕತೆಯನ್ನು ಸಾರುವ ಕಾರ್ಯವನ್ನು ತತ್ವಪದಗಳು ಮಾಡಿವೆ. ಬದುಕಿನ ಆಳವಾದ ಅರ್ಥವನ್ನು ತಿಳಿಸುವುದೇ ಅವುಗಳ ಮೂಲ ಆಶಯವಾಗಿದೆ ಎಂದರು.

ತತ್ವಪದಗಳ ಪರಿಭಾಷೆಯಲ್ಲಿ ಸ್ವರ ಎಂದರೆ ಸದಾ ಉಸಿರು ಎಂಬ ಅರ್ಥವಿದೆ. ಅನುಭವದ ಅನೇಕ ಸಂಗತಿಗಳನ್ನು ವಾಕ್ ರೂಪದಲ್ಲಿ ನಮ್ಮನ್ನು ತಲುಪಿಸುವುದೇ ಅನುಭಾವ. ಸತ್ಸಂಗವೇ ತತ್ವಪದಗಳ ನಿಜವಾದ ಸಂದರ್ಭ. ಯಾವುದು ಸ್ಮರಣೆಯ ಹಂಗಿಲ್ಲದೆ ಉಳಿಯುತ್ತದೆಯೋ ಅದೇ ನಮ್ಮ ಅನುಭವವನ್ನು ನಿಯಂತ್ರಿಸುತ್ತದೆ. ಪುಸ್ತಕ ಪರಂಪರೆ ನಿಂತ ನೀರಿನಂತಿದ್ದರೆ, ವಾಕ್ ಪರಂಪರೆ ನಿರಂತರವಾಗಿ ಹರಿಯುವ ಪ್ರಕ್ರಿಯೆಯಾಗಿದೆ ಎಂದು ವಿಶ್ಲೇಷಿಸಿದರು.

ಬುದ್ಧನು ಆಸೆಯೇ ದುಃಖಕ್ಕೆ ಮೂಲ ಎಂದು ಪ್ರತಿಪಾದಿಸಿದರೆ, ತತ್ವಪದಗಳು ಆನಂದ ಮತ್ತು ಕ್ಷಣಿಕತೆಯೇ ದುಃಖಕ್ಕೆ ಮೂಲ ಎಂಬ ಸತ್ಯವನ್ನು ಸಾರಿವೆ. ಆಧುನಿಕತೆಯ ಪ್ರಭಾವದಿಂದ ದೇವಾಲಯಗಳ ಆವರಣಗಳು ಇಂದು ಪಂಚತಾರಾ ಹಾಗೂ ಏಳುತಾರಾ ಹೋಟೆಲ್‌ಗಳ ಮಾದರಿಯಲ್ಲಿ ಬದಲಾಗುತ್ತಿವೆ. ಆದರೆ, ಹಿಂದಿನ ದೇವಾಲಯಗಳಲ್ಲಿ ನೆಲೆಸಿದ್ದ ಆಧ್ಯಾತ್ಮಿಕ ವಾತಾವರಣ ಮತ್ತು ಭಕ್ತಿಯ ಭಾವ ಇಂದು ಮರೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಎಚ್.ಎಸ್. ಮೋಹನ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಸಾಹತುಶಾಹಿ ಪ್ರಭಾವಗಳು ಪ್ರವೇಶಿಸಿದ ಸಂದರ್ಭದಲ್ಲಿ ಅವುಗಳನ್ನು ಅಳವಡಿಸಿಕೊಂಡು ಮುನ್ನಡೆಯುವಲ್ಲಿ ತತ್ವಪದಕಾರರು ವಿಫಲರಾದರು. ಇದರ ಪರಿಣಾಮವಾಗಿ ತತ್ವಪದಗಳ ಕುರಿತ ಚರ್ಚೆಗಳು ಕ್ರಮೇಣ ನಿಧಾನಗತಿಗೆ ತಲುಪಿದ್ದು, ಅವು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಚ್.ಎಸ್. ಗುಂಡೂರ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಎಸ್.ಎನ್. ಕಿರಣ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಶ್ರೀ ಶಿವಕುಮಾರ ಸ್ವಾಮಿ ವೃತ್ತದ ಎಲ್‌ಇಡಿ ಲೈಟಿಂಗ್ ಕಾಮಗಾರಿ ಪರಿಶೀಲಿಸಿದ ಡಿಸಿಎಂ ಪರಮೇಶ್ವರ್

ತುಮಕೂರು ನಗರದ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ನಡೆಯುತ್ತಿರುವ ಎಲ್‌ಇಡಿ ಲೈಟಿಂಗ್...

ತುಮಕೂರು | ದಾಖಲೆ ರಹಿತ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ: ದಾಖಲಾತಿ ಸಂಗ್ರಹಣೆಗೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿರುವ...

ಮಧುಗಿರಿ | ಸಂವಿಧಾನ ದೇಶದ ಚರಿತ್ರೆ, ವರ್ತಮಾನ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ: ಎ. ನಾರಾಯಣ

 ಪ್ರಪಂಚದಲ್ಲೇ ಬೃಹತ್ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಂವಿಧಾನವು ಏಕಕಾಲಕ್ಕೆ...

ಗುಬ್ಬಿ | ಸಿ.ಎಸ್.ಪುರದಲ್ಲಿ ನ.13 ರಂದು ದೇವೇಗೌಡರ ಪುತ್ಥಳಿ ಅನಾವರಣ : ಶಾಸಕ ಎಂ.ಟಿ.ಕೃಷ್ಣಪ್ಪ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ರಾಜಕೀಯ ಹಾದಿ ಹಾಗೂ ಸಮಾಜದ ಅಭಿವೃದ್ದಿ...