ಗುಬ್ಬಿ | ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖ : ಕೇಂದ್ರ ಸಚಿವ ವಿ.ಸೋಮಣ್ಣ

Date:

 ಅಭಿವೃದ್ದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಬೇಕು. ಸಾಮರಸ್ಯತೆ ಇಲ್ಲವಾದಲ್ಲಿ ಜನಪರ ಕೆಲಸಗಳು ನಡೆಯುವುದಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.

- Advertisement -

ಗುಬ್ಬಿ  ತಾಲ್ಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಗೇಟ್ ಬಳಿಯ ರೈಲ್ವೇ ಕೆಳಸೇತುವೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮಹತ್ವದ ಲಸಿಕೆ ಅಭಿಯಾನ ಇಂದು ಆರಂಭಿಸಿದೆ. ಆದರೆ ಈ ವ್ಯಾಕ್ಸಿನ್ ಬಗ್ಗೆ ಯಾರಿಗೂ ಮಾಹಿತಿಯಾಗಲಿ, ಪ್ರಚರವಾಗಲಿ ಮಾಡಿಲ್ಲ. 16900 ವ್ಯಾಕ್ಸಿನ್ ಜಿಲ್ಲೆಗೆ ಬಂದಿದ್ದರೂ ಹೆಣ್ಣು ಮಕ್ಕಳ ಆರೋಗ್ಯ ಬಗ್ಗೆ ಇಲಾಖೆಯು ನಿರಾಸಕ್ತಿ ತೋರಿರುವುದು ಬೇಸರ ತಂದಿದೆ. ಈ ನಡವಳಿಕೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಾಮ್ಯತೆ ಬಗ್ಗೆ ತಿಳಿಸುತ್ತದೆ. ಎರಡೂ ಸರ್ಕಾರ ಒಗ್ಗೂಡಿ ಮಾಡಬೇಕಾದ ಅಭಿಯಾನ ಜನರಿಗೆ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

14 ವರ್ಷದಿಂದ ಮೇಲ್ಪಟ್ಟ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾರಕ ಕ್ಯಾನ್ಸರ್ ತಡೆಯಲು ಕೇಂದ್ರ ಸರ್ಕಾರ ಈ ಲಸಿಕೆಯನ್ನು ನೀಡಲು ಮಕ್ಕಳನ್ನು ಗುರುತಿಸಿ ರಾಜ್ಯದ 6 ಲಕ್ಷ ಜಿಲ್ಲೆಯ 25 ಸಾವಿರ ಮಕ್ಕಳಿಗೆ ನೀಡಬೇಕಾದ ಲಸಿಕೆಗೆ ಜಿಲ್ಲೆಯಲ್ಲಿ 15900 ವ್ಯಾಕ್ಸಿನ್ ನಲ್ಲಿ ಕೇವಲ ಆರು ಸಾವಿರ ಮಾತ್ರ ನೀಡಿದ್ದಾರೆ. ಅದೂ ಕೂಡ ಸರಿಯಾದ ಮಾಹಿತಿ ಇಲ್ಲ. ಆರೋಗ್ಯ ಇಲಾಖೆ ಬಗ್ಗೆ ಏನೂ ಹೇಳುವುದು ಎಂದು ಬೇಸರ ವ್ಯಕ್ತಪಡಿಸಿದ ಅವರು ರೈಲ್ವೆ ಇಲಾಖೆಯ ಕೆಲಸಗಳು ತ್ವರಿತವಾಗಿ ನಡೆಸಲಾಗಿದೆ. ಈಗಾಗಲೇ 2 ಸಾವಿರ ಕೋಟಿ ಕೆಲಸ ಪ್ರಗತಿಯಲ್ಲಿದೆ. ಈ ಪೈಕಿ ಗುಬ್ಬಿ ತಾಲ್ಲೂಕಿನಲ್ಲಿ 10 ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಬೆಂಗಳೂರು ನಗರದಲ್ಲಿ ರೈಲ್ವೆ ಪ್ರಯಾಣ ಬಳಕೆದಾರರ ಸಂಖ್ಯೆ 30 ಲಕ್ಷಕ್ಕೂ ಅಧಿಕವಿದೆ. ದೇಶದಲ್ಲಿ 3 ಕೋಟಿಗೂ ಅಧಿಕವಿದೆ. ಈ ನಿಟ್ಟಿನಲ್ಲಿ ಲಾಭದಾಯಕ ರೈಲ್ವೆ ಇಲಾಖೆಯನ್ನು ಬೆಳೆಸಲು ಪ್ರಧಾನಿಗಳು ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ರಾಯದುರ್ಗದಿಂದ ಪಾವಗಡ ಎರಡು ತಿಂಗಳಲ್ಲಿ ಕೆಲಸ ಪೂರ್ಣ ಆಗಲಿದೆ. ಪಾವಗಡದಿಂದ ಮಡಕಶಿರಾ ಇನ್ನೆರೆಡು ತಿಂಗಳು, ನಂತರದಲ್ಲಿ ಕೊರಟಗೆರೆ ಹೀಗೆ ಕೆಲಸ ಪೂರ್ಣ ಗೊಳ್ಳಲಿದೆ. ತುಮಕೂರು ದಾವಣಗೆರೆ ಮಾರ್ಗ ಬಹುತೇಕ ಸಂಪೂರ್ಣವಾಗಿದೆ ಎಂದ ಅವರು ತುಮಕೂರು ಬಳಿ ರೈಲ್ವೆ ಟರ್ಮಿನಲ್ ಕಾಮಗಾರಿ 4 ಸಾವಿರ ಕೋಟಿ ಹಣದಲ್ಲಿ ನಡೆದಿದೆ. 5 ಸಾವಿರ ಉದ್ಯೋಗ ಸೃಷ್ಟಿಸಿ ಲಕ್ಷಾಂತರ ಜನರ ಬದುಕಿಗೆ ಅಧರವಾಗಲಿದೆ. ಈ ಜೊತೆಗೆ ವಸಂತನರಸಾಪುರ ಕೈಗಾರಿಕಾ ವಲಯದಲ್ಲಿ 200 ಹಾಸಿಗೆಯ ಆಸ್ಪತ್ರೆ ಹಾಗೂ 20 ಕೋಟಿ ವೆಚ್ಚದ ಮಹಿಳಾ ಹಾಸ್ಟೆಲ್ ನಿರ್ಮಾಣ ಆಗಲಿದೆ ಎಂದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಕ್ರಿಯಾಶೀಲ ಸಂಸದರಾಗಿ ಸೋಮಣ್ಣ ಅವರು ಕೋಟಿಗಟ್ಟಲೆ ಅನುದಾನ ತಂದು ಜಿಲ್ಲೆಯ ಅಭಿವೃದ್ದಿ ಮಾಡುತ್ತಿದ್ದಾರೆ. ಲೋಕಸಭಾ ಸದಸ್ಯರು ಈ ಮಟ್ಟದ ಕೆಲಸ ಮಾಡಲು ಸಾಧ್ಯ ಎಂಬುದು ಈ ವರ್ಷದಲ್ಲಿ ನೋಡಿದ್ದೇವೆ. ರೈಲ್ವೆ ಗೇಟ್ ಗಳ ತೆರವು ಮಾಡಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಮಾಡಿದ್ದಾರೆ. ಜೊತೆಗೆ 90 ಕೋಟಿ ರೂಗಳ ರಸ್ತೆ ಕೆಲಸಗಳನ್ನು ಸಹ ಮಾಡಿಸುತ್ತಿದ್ದಾರೆ. ಈ ಜತೆಗೆ ಅಂತರ್ಜಲ ವೃದ್ಧಿಗೆ ವ್ಯಾಲಿಗಳಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿ, ಅತಿ ಹೆಚ್ಚು ಕರೆಂಟ್ ಬಳಕೆಯ ನಮ್ಮ ತಾಲ್ಲೂಕು ಹೆಚ್ಚು ಕೊಳವೆಬಾವಿ ಹೊಂದಿದೆ. ಈ ನಿಟ್ಟಿನಲ್ಲಿ ಅಂತರ್ಜಲ ವೃದ್ಧಿ ಅತ್ಯವಶ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ದಿಶಾ ಸಮಿತಿ ಸದಸ್ಯ ಹುಚ್ಚಯ್ಯ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಪಿ.ಬಿ.ಚಂದ್ರಶೇಖರಬಾಬು, ಎನ್.ಸಿ.ಪ್ರಕಾಶ್, ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಸಿದ್ದಗಂಗಮ್ಮ, ಬೆಣಚಿಗೆರೆ ರುದ್ರೇಶ್, ಭೈರಪ್ಪ, ಜಿ.ಆರ್.ಶಿವಕುಮಾರ್, ಪಂಚಾಕ್ಷರಿ, ಬಲರಾಮಯ್ಯ, ಚಿಕ್ಕವೀರಯ್ಯ, ರೈಲ್ವೇ ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ ಕಾತರಕಿ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ದೇಶದ ವಿವಿಧೆಡೆ ಪೊಲೀಸ್ ದಬ್ಬಾಳಿಕೆ, ನಾಯಕರ ಬಂಧನ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ

 ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ನಡೆಯುತ್ತಿದೆ ಎನ್ನಲಾದ ಪೊಲೀಸ್ ದಬ್ಬಾಳಿಕೆ...

ಮೈಸೂರು ದಸರಾ ವೈಭವಕ್ಕೆ ತುಮಕೂರಿನ ಸಾಂಸ್ಕೃತಿಕ ಸ್ಪರ್ಶ

ನಾಡಿನ ಸುಭಿಕ್ಷ, ಜನರ ಶಾಂತಿ, ನೆಮ್ಮದಿ ಹಾಗೂ ಮಳೆ-ಬೆಳೆ ಸಮೃದ್ಧಿಗಾಗಿ ತಾಯಿ...

ಗುಬ್ಬಿ | ಕೆರೆಗೆ ಬಿದ್ದು 14 ವರ್ಷದ ಬಾಲಕ ಸಾವು: ದನಗಳಿಗೆ ನೀರು ಕುಡಿಸಲು ಹೋದಾಗ ದುರ್ಘಟನೆ

ದನಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ 14 ವರ್ಷದ ಬಾಲಕನೊಬ್ಬ ಕಾಲು...

ತುಮಕೂರು ದಸರಾ: ಹತ್ತು ದಿನಗಳ ಸಾಂಸ್ಕೃತಿಕ ಸಂಭ್ರಮ ನಾಳೆಯಿಂದ : ಡಾ. ಜಿ. ಪರಮೇಶ್ವರ್

ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ...