ಮಧುಗಿರಿ | ಸಾಹಿತ್ಯ ಪರಿಷತ್ ನಲ್ಲಿ ಸರ್ವಾಧಿಕಾರಿ ಧೋರಣೆ ಬೇಡ : ಬರಗೂರು ರಾಮಚಂದ್ರಪ್ಪ

Date:

ಸಾಹಿತ್ಯ ಪರಿಷತ್ ಒಳಗೊಂಡಂತೆ ಯಾವುದೇ ಸಾಂಸ್ಕೃತಿಕ ಸ್ವಾಯತ್ತತೆಯ ಸಂಸ್ಥೆಗಳಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸದೆ ಕನ್ನಡ ಪರ ಚಿಂತನೆಗಳನ್ನು ನಡೆಸಬೇಕು ಎಂದು ಹಿರಿಯ ಸಾಹಿತಿ  ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.  

- Advertisement -

ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ  ಕನ್ನಡ ಭವನದಲ್ಲಿ   ಕೆ. ಎನ್.ರಾಜಣ್ಣ ರವರ ಸಭಾಂಗಣದಲ್ಲಿ ಆಯೋಜಿಸಿದ್ದ ಮಧುಗಿರಿ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಸಾಹಿತ್ಯ ಸಮ್ಮೇಳನದಲ್ಲಿ ಸಕಾರಾತ್ಮಕ ಚರ್ಚೆಗಳು ನಡೆಯುತ್ತವೆ.ಆದರೆ ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಸಾಹಿತ್ಯಕ್ಕಿಂತ ಹೆಚ್ಚಾಗಿ ಸಮ್ಮೇಳನದಲ್ಲಿ ಭಾಗವಹಿಸಿದವರು ಬ್ಯಾಗ್ ದೊರೆತಿಲ್ಲಾ ಊಟ ಸಿಕ್ಕಿಲ್ಲಾ,ಹಾಜರಾತಿ ಪತ್ರ ದೊರೆತಿಲ್ಲಾ ಎಂದು ಸುದ್ದಿಗಳು ಭಿತ್ತರವಾಗುತ್ತವೆ. ಈ ರೀತಿ ಆಗಬಾರದು.ವಿಚಾರಗೋಷ್ಠಿಗಳಿಗೆ ಹೆಚ್ಚು ಸಮಯ ನೀಡಿದಾಗ ಮಾತ್ರ ಸಮ್ಮೇಳನಗಳು ಸಾರ್ಥಕವಾಗುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಬದ್ಧತೆ ಯೊಂದು ಪ್ರಕಟವಾಗುತ್ತದೆ.ಕನ್ನಡ ಪರವಾದ ಕೂಗು -ಪಿಸು ದನಿಗಳು ಕೇಳಿಸುತ್ತದೆ.ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಒಂದೆಡೆ ಸೇರುತ್ತಾರೆ ಅದೇ ವಿಶೇಷವಾದುದು.ಸಮ್ಮೇಳನಗಳಲ್ಲಿ ಸಾಹಿತ್ಯಾಸಕ್ತರು ಸಾಹಿತಿಗಳನ್ನು ನೋಡಿ ಕೈಕುಲುಕುತ್ತಾರೆ.ಉತ್ತಮ ಪುಸ್ತಕಗಳನ್ನು ಖರೀದಿಸುತ್ತಾರೆ ಆದುದರಿಂದ ಸಮ್ಮೇಳನಗಳು ಎಲ್ಲರನ್ನೂ ಒಗ್ಗೂಡಿಸುವ ಸಾಂಸ್ಕೃತಿಕ ನೆಲೆಯುಳ್ಳ ಜಾತ್ರೆ.ನಾಲ್ವಡಿ ಕೃಷ್ಣ ರಾಜರಂತ ರಾಜ ಕರ್ನಾಟಕದಲ್ಲಿ ಮತ್ತೊಬ್ಬ ಇಲ್ಲ. ಒಂದು ಸ್ವಾಯತ್ತತೆ ಸಂಸ್ಥೆಯನ್ನು ನಿರ್ಮಿಸಲು ಅಂದೂ 5 ಸಾವಿರ ರೂಗಳನ್ನು ನೀಡಿದರೆಂದು ಮತ್ತೊಂದು ಉಲ್ಲೇಖದಲ್ಲಿ15 ಸಾವಿರ ರೂಪಾಯಿ ನೀಡಿದರೆಂಬ ಉಲ್ಲೇಖಗಳಿವೆ.ನಮಗೆ ಕನ್ನಡದ ಪ್ರಜ್ಞೆ ಬೇಕಾಗಿದೆ‌.ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಇರದೆ ಹೋದರೆ ಪತ್ರಿಕೆ ಓದುಗರರು,ಕನ್ನಡ ಸಿನಿಮಾ ನೋಡುಗರು,ನಾಟಕ ಆಡುವವರು ಇರುವುದಿಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯುವ ಚರ್ಚೆ-ವಿಚಾರ ಸಂಕಿರಣಗಳಲ್ಲಿ ಎರಡು ಅಂಶಗಳು ಸಕಾರಾತ್ಮಕವಾಗಿ ಬಂದು ಅದು ಜನರನ್ನ ತಲುಪಿದರೆ ಸಮ್ಮೇಳನಗಳು ಸಾರ್ಥಕವಾಗುತ್ತದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
1002557877

ಶಾಸಕ ಕೆ.ಎನ್.ರಾಜಣ್ಣ  ಮಾತನಾಡಿ ನಾವು ಮಕ್ಕಳಿಗೆ ನಮ್ಮ ಇತಿಹಾಸ ಮನದಟ್ಟು ಮಾಡಿದಾಗ ಮಾತ್ರ ಅವರು ಇತಿಹಾಸ ತಿಳಿದುಕೊಂಡು ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯ. ನಮ್ಮ ಪೂರ್ವಜರು ಹಾಕಿಕೊಟ್ಟ ತಳಹದಿಯನ್ನು ಮಾರ್ಗದರ್ಶನವನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು.  ಕನ್ನಡದ ಮಹತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯ ಸಾಹಿತಿಗಳಿಂದ ಆಗಬೇಕು. ಈ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚೆಚ್ಚು ನಡೆಯಬೇಕು. ಸಾಹಿತ್ಯದ ಬಗ್ಗೆ ನಮ್ಮ ಯುವ ಜನತೆಗೆ ತಿಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ಅವರು ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೊಸಹೊಸ ಪುಸ್ತಕಗಳನ್ನು ಬರೆಯುವಂತಾಗಲಿ ಎಂದರು.

ಸಮ್ಮೇಳನ ಅಧ್ಯಕ್ಷ ಡಾ.ಕೆ.ಪಿ.ನಟರಾಜ ಮಾತನಾಡಿ ಕನ್ನಡ ಹಿತಚಿಂತಕರು,ಮಹನೀಯರು,ಸಂಶೋಧಕರು, ಪ್ರಾಧ್ಯಾಪಕರು ಗಂಭೀರವಾಗಿ ಚಿಂತಿಸಿ ಕನ್ನಡದ ಉಳಿವು ಮತ್ತು ಏಳಿಗೆಗಾಗಿ ಕನ್ನಡದ ಉಳಿವು ಮತ್ತು ಏಳಿಗೆಗಾಗಿ ಕ್ರಿಯಾಶೀಲರಾಗಿ ಹೋರಾಡಲು ಮುಂದಾಗ ಬೇಕಾಗಿದೆ.ಆರ್ ಟಿ ಇ ಕಾಯ್ದೆ ಸರ್ಕಾರಿ ಶಾಲೆಗಳ ಪ್ರವೇಶಾತಿ ಕುಶಿಯಲು ಕಾರಣವಾಗಿದ್ದು, ಸರ್ಕಾರಿ ಸಾಲ ವ್ಯವಸ್ಥೆಯನ್ನು ಮುಗಿಸಲು ಕೇಂದ್ರ ತಂದಿರೋದು ಮಾರಕ ಕಾಯ್ದೆಯಾಗಿದೆ ಎಂದು ತಿಳಿಸಿದರು. 

ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ ಮಧುಗಿರಿ ತಾಲೂಕು ತನ್ನದೆ ಆದಂತಹ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.ಕನ್ನಡ ಭವನವನ್ನು ನಿರ್ಮಾಣ ಮಾಡುವುದರ ಮೂಲಕ ಕೆ.ಎನ್ ರಾಜಣ್ಣ ಇತಿಹಾಸವನ್ನು ಸೃಷ್ಟಿಸಿದ್ದಾರೆ.ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿನ ಒಂದು ಪುಸ್ತಕವನ್ನು ಬರೆದಿರುವವರನ್ನು ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವುದು ತಾಲೂಕಿನ ಸಾಹಿತ್ಯ ಸಂದ ಗೌರವವಾಗಿದೆ ಎಂದರು.

1002557876

ಕಸಾಪ ಕಾರ್ಯಕ್ರಮದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಲಾತಂಡಗಳ ನೃತ್ಯ ಪ್ರದರ್ಶನ,ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ನಂತರ 6ಜನರು ವಿಷಯ ಮಂಡಿಸಿದರೆ,ಕವಿಗೋಷ್ಠಿಯಲ್ಲಿ 25ಜನ ಭಾಗವಹಿಸಿದ್ದರು ಹಾಗೂ ಸುಮಾರು 900ಕ್ಕೂ ಹೆಚ್ಚು ಸಾಹಿತ್ಯಸಕ್ತರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ನೆನಪಿನ ಸಂಚಿಕೆಯಾಗಿ ಕೃಷ್ಣಮೃಗ,ಪ್ರೀತಿಯ ಕಡಲು,ಕುವೆಂಪು ಕಲಿಸಿದ ಕನ್ನಡದ ಜಗತ್ತು ಪುಸ್ತಕ ಗಳನ್ನು ಬಿಡುಗಡೆಗೊಳಿಸಲಾಯಿತು.

ಉಪ ವಿಭಾಗ ಅಧಿಕಾರಿ ಗೋಟೂರು ಶಿವಪ್ಪ, ಪ. ಪೂ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಬಾಲ ಗುರುಮೂರ್ತಿ,ಬಿ.ಎಂ.ಟಿ.ಸಿ.ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ,ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ರವಿ ಆರ್ ಗರಣಿ, ಪಿ. ಡಬ್ಲ್ಯೂ.ಡಿ.ಇ.ಇ.ಹನುಮಂತ ರಾವ್, ಬಿಇಓ.ಕೆ.ಎನ್. ಹನುಮಂತ ರಾಯಪ್ಪ, ತಾ.ಕ.ಸಾ.ಪ.ಅಧ್ಯಕ್ಷೆ ಸಹನ ನಾಗೇಶ್, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಡಿ.ಜಿ. ಶಂಕರನಾರಾಯಣ ಶೆಟ್ಟಿ,ಎಂ.ಕೆ.ನಂಜುಂಡಯ್ಯ,ಕೆ. ಪ್ರಕಾಶ್,ಅಯೂಬ್,ಜಿ.ಎ.ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಎಂ.ಎಸ್.ಶಂಕರ್ ನಾರಾಯಣ್, ಮಂಜುಳ ನಾಗಭೂಷಣ್,ಜಿ.ಎಸ್.ಜಗದೀಶ್ ಕುಮಾರ್, ಎಂ.ವಿ.ರುದ್ರಾರಾಧ್ಯ, ಕೆಎಸ್.ವಿ.ಪ್ರಸಾದ್,ಹಿರಿಯ ಸಾಹಿತಿ ಪ್ರೊ.ಮ.ಲ.ನ ಮೂರ್ತಿ, ನಾ.ಮಹಾಲಿಂಗೇಶ್ ತಾಪಂ ಇಓ ಲಕ್ಷಣ್,

ತಾರಕೇಶ್ವರಿ,ಚೌಡಪ್ಪ,ಸಣ್ಣಹೊನ್ನಯ್ಯ,ಗೋಪಾಲಯ್ಯ,ಸಿದ್ದಾಪುರ ರಂಗಶ್ಯಾಮಣ್ಣ,ನೌಕರ ಸಂಘದ ಜಿಲ್ಲಾಧ್ತಕ್ಷ ರಂಗಪ್ಪ,ಕಾರ್ಯದರ್ಶಿಮಂಜುನಾಥ್,ವೆಂಕಟರವಣಪ್ಪ,ಸಿಪಿಐ ಹನುಮಂತರಾಯಪ್ಪ,ಲಕ್ಷ್ಮೀ ನರಸಯ್ಯ, ರಾಮಚಂದ್ರಪ್ಪ,ನರಸಿಂಹರಾಜು,ನಾರಾಯಣ್,ಹಾಗೂ ಕನ್ನಡ ಅಭಿಮಾನಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ಸರಣಿ ಬೋರ್‌ವೆಲ್ ಸ್ಟಾರ್ಟರ್ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು : ಇಬ್ಬರು ಆರೋಪಿಗಳ ಬಂಧನ

 ರೈತರ ಜಮೀನುಗಳನ್ನು ಗುರಿಯಾಗಿಸಿಕೊಂಡು ಬೋರ್‌ವೆಲ್ ಸ್ಟಾರ್ಟರ್‌ಗಳನ್ನು ಸರಣಿ ಕಳ್ಳತನ ಮಾಡುತ್ತಿದ್ದ ಇಬ್ಬರು...

ಮಧುಗಿರಿಯಲ್ಲಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ: ಅಭಿವೃದ್ಧಿಗೆ ಹೊಸ ದಿಕ್ಕು

 ಮಧುಗಿರಿ ತಾಲೂಕಿನ ಜನತೆಯ ಬಹುಕಾಲದ ಕನಸಾಗಿದ್ದ ತುಮಕೂರು–ರಾಯದುರ್ಗ ಹೊಸ ರೈಲ್ವೆ ಮಾರ್ಗ...

ಮಧುಗಿರಿ | ಬೀದಿ ನಾಯಿಗಳ ದಾಳಿಗೆ 30 ಕುರಿಗಳು ಬಲಿ ; ರೈತ ಶನಿವಾರಪ್ಪಗೆ ಭಾರಿ ನಷ್ಟ

ಮಧುಗಿರಿ ತಾಲೂಕಿನ ಕೊಡಗೆನಹಳ್ಳಿ ಸಮೀಪದ ಸಿಂಗನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು...

ಮಧುಗಿರಿ | ಸಂಜೀವ ಮೂರ್ತಿಗೆ ಪಿಎಚ್.ಡಿ ಪ್ರದಾನ

ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ...