ಮಧುಗಿರಿ | ವ್ಯಾಕರಣ ಎಂದರೆ ಕೇವಲ ನಿಯಮಗಳಲ್ಲ: ಪ್ರೊ ಡಿ ಎಸ್ ಮುನೀಂದ್ರಕುಮಾರ್

Date:

  ಕೇಶಿರಾಜ ಬರೆದ ‘ಶಬ್ದಮಣಿದರ್ಪಣ’ವು ಕನ್ನಡ ಭಾಷೆಗೆ ಹಿಡಿದ ಸ್ವಚ್ಛವಾದ ಕನ್ನಡಿ. ಇದು ಕೇವಲ ಒಣ ನಿಯಮಗಳ ಸಂಕಲನವಲ್ಲ, ಭಾಷೆಯ ರಚನೆ ಮತ್ತು ಸೌಂದರ್ಯವನ್ನು ತಿಳಿಸುವ ಅತ್ಯುನ್ನತ ಲಕ್ಷಣ ಗ್ರಂಥ ಎಂದು ವಿಶ್ರಾಂತ ಪ್ರಾಂಶುಪಾಲರಾದ ಪ್ರೊ ಡಿ ಎಸ್ ಮುನೀಂದ್ರಕುಮಾರ್ ಅಭಿಪ್ರಾಯಪಟ್ಟರು.

- Advertisement -

ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ “ಶಬ್ದಮಣಿದರ್ಪಣಂ: ಓದು- ವ್ಯಾಖ್ಯಾನ” ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ ಕೇಶಿರಾಜ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

 ಸಂಸ್ಕೃತ ವ್ಯಾಕರಣ ಮಾದರಿಯನ್ನು ಬಳಸಿದರೂ, ಕನ್ನಡದ ದೇಶೀಯ ಅಕ್ಷರಗಳ ಬಳಕೆ, ಸಮಾಸಗಳ ವಿಶಿಷ್ಟತೆ, ಮತ್ತು ಧಾತುರೂಪಗಳ ನಿಜವಾದ ಕನ್ನಡತನವನ್ನು ಕೇಶಿರಾಜ ಅತ್ಯಂತ ದೃಢವಾಗಿ ಎತ್ತಿಹಿಡಿದಿದ್ದಾನೆ.   

 ಹಳಗನ್ನಡದಿಂದ ನಡುಗನ್ನಡಕ್ಕೆ ಭಾಷೆ ರೂಪಾಂತರಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಭಾಷೆಯ ಸ್ಥಿತಿಗತಿ ಹೇಗಿತ್ತು ಎಂಬುದಕ್ಕೆ ಈ ಗ್ರಂಥವೇ ಪ್ರಮುಖ ಪ್ರಮಾಣವಾಗಿದೆ.

 ಪಂಪ, ರನ್ನ, ಜನ್ನ, ಹರಿಹರ ಮುಂತಾದ ಮಹಾಕವಿಗಳ ಕಾವ್ಯಗಳನ್ನು ನೇರವಾಗಿ ಓದಿ ಅರ್ಥೈಸಿಕೊಳ್ಳಲು ಹಳಗನ್ನಡ ವ್ಯಾಕರಣದ ಜ್ಞಾನ ಅತ್ಯಗತ್ಯ. ವಿಭಕ್ತಿ ಪ್ರತ್ಯಯಗಳು, ಸಮಾಸ ಹಾಗೂ ಆಖ್ಯಾತ ಪ್ರತ್ಯಯಗಳ ಅರಿವಿದ್ದರೆ ಕಾವ್ಯಾರ್ಥವನ್ನು ಯಾರ ಸಹಾಯವಿಲ್ಲದೆಯೂ ಗ್ರಹಿಸಬಹುದು.ಆದ್ದರಿಂದ ಈ ಕೃತಿ ಸಾಹಿತ್ಯ ಪ್ರವೇಶಕ್ಕೆ ಕೀಲಿಕೈಯಾಗಿದೆ ಎಂದರು.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ ಗೋವಿಂದರಾಯ ಎಂ ಅವರು ಹಳಗನ್ನಡ ಶಬ್ದಗಳ ಅರ್ಥ ಹಾಗೂ ಪದನಿಷ್ಪತ್ತಿ ತಿಳಿದಾಗ ವಿದ್ಯಾರ್ಥಿಯ ಶಬ್ದಕೋಶ ಅಪಾರವಾಗಿ ಬೆಳೆಯುತ್ತದೆ. ಇಂದಿನ ಭಾಷಾವಿಜ್ಞಾನದ ಅನೇಕ ವಿಚಾರಗಳನ್ನು ಕೇಶಿರಾಜ ಅಂದೇ ಸಪ್ರಮಾಣವಾಗಿ ಚರ್ಚಿಸಿದ್ದಾನೆ. ವ್ಯಾಕರಣದ ಸ್ಪಷ್ಟ ಜ್ಞಾನವಿರುವ ವ್ಯಕ್ತಿ ಮಾತನಾಡುವಾಗ ಮತ್ತು ಬರೆಯುವಾಗ ವಾಕ್ಯದೋಷಗಳನ್ನು ಮಾಡುವುದಿಲ್ಲ. ವಾಕ್ಯ ರಚನೆ ಪ್ರೌಢವಾಗುತ್ತದೆ.  

 ವ್ಯಾಕರಣ ಓದುವುದರಿಂದ ಮಿದುಳಿಗೆ ತಾರ್ಕಿಕ ಆಲೋಚನೆ ಲಭಿಸುತ್ತದೆ. ಇದು ಸಾಹಿತ್ಯ ವಿಮರ್ಶೆಗೆ ಮತ್ತು ಸಂಶೋಧನೆಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಭಾಷೆಯ ಆಳವನ್ನು ಅರಿಯದವನು ಸಾಹಿತ್ಯದ ನಿಜವಾದ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಿಲ್ಲ. ಶಬ್ದಮಣಿದರ್ಪಣವು ಕನ್ನಡದ ಬೇರುಗಳನ್ನು ತಲುಪಲು ಇರುವ ಏಕೈಕ ದಾರಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ರಾಂತ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ ಜೆ ರಾಮು ಮಾತನಾಡಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯದ ಪ್ರಶ್ನೆಗಳಿಗೆ ನಿಖರ ಉತ್ತರ ನೀಡಲು ಹಳಗನ್ನಡ ವ್ಯಾಕರಣದ ಹಿಡಿತವೇ ನಿರ್ಣಾಯಕ ಎಂದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ ಹೆಚ್ ಮಂಜುನಾಥ್ ಮಾತನಾಡಿ ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ, ಪ್ರಾಚೀನ ಸಾಹಿತ್ಯ ಸಂಶೋಧನೆಯ ಕ್ಷೇತ್ರಗಳಲ್ಲಿ ವ್ಯಾಕರಣ ಜ್ಞಾನವಿದ್ದವರಿಗೆ ಆದ್ಯತೆ ಹೆಚ್ಚು ಎಂದರು‌.

ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪ್ರೊ ಬಿ ಮಂಜುನಾಥ್ ಮಾತನಾಡಿ

ಶ್ರೀಮಂತ ಭಾಷಾ ಶೈಲಿ ಇರುವವರು ಉತ್ತಮ ಅಂಕಣಕಾರರಾಗಿ, ಸಾಹಿತ್ಯ ವಿಮರ್ಶಕರಾಗಿ, ಮಾಧ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದರು.

ಕನ್ನಡ ಸಹಾಯಕ ಪ್ರಾಧ್ಯಾಪಕ ಎಸ್ ವಿ ಮಂಜುನಾಥ್ ಮಾತನಾಡಿ ಹಳಗನ್ನಡ ವ್ಯಾಕರಣ ಕಠಿಣ ಎಂಬ ಪೂರ್ವಗ್ರಹ ಬಿಟ್ಟು, ಅದನ್ನೊಂದು ಗಣಿತ ಅಥವಾ ತಾರ್ಕಿಕ ವಿಷಯದಂತೆ ಕುತೂಹಲದಿಂದ ನೋಡಿ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ ಜಿ ವೇದಲಕ್ಷ್ಮಿ, ಪತ್ರಾಂಕಿತ ವ್ಯವಸ್ಥಾಪಕರಾದ ಚಂದ್ರಕಲಾ, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಪೂಜೇರಿ, ವಿನುತಶ್ರಿ, ನಾಗಭೂಷಣ್ ಹಾಗೂ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿಯಲ್ಲಿ ಲೋಕಾಯುಕ್ತ ಬೇಟೆ : ₹30 ಸಾವಿರ ಲಂಚ ಪಡೆಯುವಾಗ ಆರ್‌ಐ ಬಂಧನ

 ಪೌತಿ ಖಾತೆ ಮಾಡಿಕೊಡಲು ರೈತನಿಂದ ₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ...

ತುಮಕೂರು | ಪಿಟಿಸಿಎಲ್ ಕಾಯ್ದೆ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಶೆಟ್ಟಿಹಳ್ಳಿ ಮಹೇಶ್ ಅವಿರೋಧ ಆಯ್ಕೆ

ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ...

ತುಮಕೂರು | ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ

ಮಧುಗಿರಿ ತಾಲ್ಲೂಕಿನ ಕಸಾಪುರ ಗ್ರಾಮದ ದಲಿತ ಯುವಕ ಸಿಂಹಾದ್ರಿ ಹತ್ಯೆಯನ್ನು ಖಂಡಿಸಿರುವ...

ತುಮಕೂರು | ಹೊಸ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ಕಾರ್ಮಿಕರ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರದ ಹೊಸ ಭವಿಷ್ಯ ನಿಧಿ (ಪಿಎಫ್) ನೀತಿಯಲ್ಲಿನ ಕಾರ್ಮಿಕ ವಿರೋಧಿ...