ತುಮಕೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ.ಕೆ.ಸಿ. ಮಾರ್ಗದರ್ಶನದಲ್ಲಿ “ಸಾಮಾಜಿಕ ನ್ಯಾಯ ಮತ್ತು ಕರ್ನಾಟಕದಲ್ಲಿ ಮೀಸಲಾತಿ ರಾಜಕಾರಣ: ತುಮಕೂರು ಜಿಲ್ಲೆಯ ಒಂದು ಅಧ್ಯಯನ” ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ರಂಗಸ್ವಾಮಯ್ಯ ಎಚ್ ರವರಿಗೆ ತುಮಕೂರು ವಿಶ್ವವಿದ್ಯಾಲಯ ಪಿ ಎಚ್. ಡಿ. ಪದವಿ ಪ್ರದಾನ ಮಾಡಿದೆ.
ರಂಗಸ್ವಾಮಯ್ಯ .ಎಚ್ ಮಧುಗಿರಿ ತಾಲ್ಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ಹನುಮಂತರಾಯಪ್ಪ ನಿಂಗಮ್ಮ ದಂಪತಿಯ ಮಗನಾಗಿದ್ದು ರಾಜ್ಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ರಂಗಸ್ವಾಮಯ್ಯ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರು ಪ್ರಸ್ತುತ ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಿ ಎಚ್ ಡಿ ಪದವಿ ಪ್ರದಾನ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಮುನಿಂದ್ರ ಕುಮಾರ್ ಡಿ.ಎಸ್. ಸಾಹಿತಿಗಳಾದ ಮ.ಲ.ನ ಮೂರ್ತಿ, ಉಪನ್ಯಾಸಕ ರಾಮಚಂದ್ರಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುಮಾರ್ ಕೆ.ಎಸ್. ರಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ ಎಸ್ ನಾಗರಾಜು .ಡಾ. ಡಿ.ಆರ್ ಹೊನ್ನಾಂಜನಯ್ಯ ಡಾ. ರಂಗಸ್ವಾಮಿ ಎಂ ಆರ್. ಡಾ. ಲತಾ ಸಿ.ವಿ .ಡಾ.ಬುಡಸನಹಳ್ಳಿ ಮಂಜುನಾಥ್, ಡಾ.ಗೋವಿಂದರಾಯ ಎಂ. ಡಾ.ಶ್ರೀನಿವಾಸಪ್ಪ ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಬಿ. ಡಾ. ರಂಜಿತ ಬಿ ಆರ್, ಡಾ. ಲೀಲಾವತಿ, ಡಾ. ಸಂಜೀವಮೂರ್ತಿ, ಮುರುಳಿಧರ್, ಡಾ.ವಿಜಯಲಕ್ಷ್ಮೀ,
ಪ್ರೊ.ವೇದಲಕ್ಷ್ಮಿ . ಸ್ನೇಹಿತರಾದ ಸಮಾಜ ಕಲ್ಯಾಣ ಇಲಾಖೆಯ ಚಿಕ್ಕರಂಗಪ್ಪ .ನಾಗರಾಜು ಎಂ.ಎಲ್ .ನರಸಿಂಹರಾಜು ಕೆ .ಮಂಜು ಪ್ರಸಾದ್.ಆನಂದ ಎಂ ಎಸ್. ಹರೀಶ್, ಹನುಮಯ್ಯ, ಪುಟ್ಟಯ್ಯ, ವರದರಾಜು, ನಟರಾಜ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ವರ್ಗದವರು ಅಭಿನಂದಿಸಿದರು.




