ತುಮಕೂರು | ಎಸ್ ಐಆರ್ ಖಂಡಿಸಿ ಪ್ರತಿರೋಧ : ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

Date:

ತುಮಕೂರಿನಲ್ಲಿ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಜನಪರ ಸಂಘಟನೆಗಳ ಒಕ್ಕೂಟದಿಂದ ಇತ್ತೀಚೆಗೆ ಮುಖ್ಯ ಚುನಾವಣಾ ಆಯೋಗ ಎಸ್ ಐಆರ್ ಎಂಬ ಅಸಂವಿಧಾನಿಕ ಪ್ರಜಾತಂತ್ರ ಜನವಿರೋಧಿಯಾದ ಮತದಾನ ಪರಿಷ್ಕರಣ ವಿಧಾನವನ್ನು ಜಾರಿಮಾಡ ಹೊರಟಿದೆ. ಇದು ಜನರ ಮತದಾನದ ಹಕ್ಕು ಕಿತ್ತುಕೊಳ್ಳುವ ಪ್ರಕ್ರಿಯೆಯಾಗಿರುವುದಿಂದ ಕರ್ನಾಟಕ ಪ್ರತಿರೋಧವನ್ನು ಹಮ್ಮಿಕೊಳ್ಳಲಾಗಿತ್ತು. 

- Advertisement -

ಹಿರಿಯ ಪರಿಸರವಾದಿಗಳಾದ ಸಿ.ಯತಿರಾಜು ಮಾತನಾಡಿ 13 ರಾಜ್ಯಗಳಲ್ಲಿ ನಡೆದಿರುವ ಎಸ್ ಐಆರ್ ನಿಂದ 6 ಕೋಟಿ ಜನರನ್ನು ಮತದಾನದಿಂದ ಹೊರಗಿಡಲಾಗಿದೆ. ಎಸ್ಐಆರ್ ಹಿಮ್ಮೆಟಿಸದೆ ಹೋದರೆ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಜನ ಹೋರಾಟದಿಂದ ಇದನ್ನು ಆಗದಂತೆ ನೋಡಿಕೊಳ್ಳಬೇಕು. ಜನಬೆಂಬಲವಿಲ್ಲದೆ ಸರ್ಕಾರ ಅಡ್ಡ ದಾರಿಯಿಂದ ಅಧಿಕಾರ ಹಿಡಿಯ ಹೊರಟಿರುವುದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಪಿಯುಸಿಎಲ್ ಜಿಲ್ಲಾ ಅಧ್ಯಕ್ಷ ಕೆ. ದೊರೈರಾಜ್ ಮಾತನಾಡಿ ಮತದಾನ ಎಲ್ಲಾ ಜನಗಳ ಸಂವಿಧಾನಿಕ ಹಕ್ಕು ಇದನ್ನು ಕಿತ್ತುಕೊಳ್ಳಲು ಹಿಡಿದಿರುವ ಹಾದಿ ಎಸ್ ಐಆರ್ – ಎಸ್ಐಆರ್ ಎಂಬ ಪದ ಸಂವಿಧಾನದಲ್ಲಿಯೇ ಇಲ್ಲ . ಸಾರಾಂಶ ಪರಿಷ್ಕರಣೆಗೆ  ನಮ್ಮ ವಿರೋಧವಿಲ್ಲ ಎಂದರು

ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ. ಹ ರಮಾಕುಮಾರಿ ಮಾತನಾಡಿ ಎಸ್ ಐ ಆರ್ ಮಾಡಿರುವವರು ಪರೀಕ್ಷಣೆ ವಿಶೇಷವಾದದ್ದು ಕೋಟ್ಯಂತರ ಜನ ನುಸುಳುಕೋರರು ಇದ್ದಾರೆ ಅವರನ್ನು ತೆಗೆಯಲು ಈ ಪ್ರಕ್ರಿಯೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಾ. ಕೆಲವರನ್ನು ಗುರುತಿಸಲು ಉಳಿದ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ಅದಕ್ಕೆ ನಾವು ಎಸ್ಐಆರ್ ನ್ನು ವಿರೋಧಿಸುತ್ತಿದ್ದೇವೆ ಎಂದರು. 

ರಾಜ್ಯ ರೈತ ಸಂಘದ ಶಂಕ್ರಪ್ಪ ಮಾತನಾಡಿ ಬಿಜೆಪಿ ಮತ್ತು ಚುನಾವಣಾ ಆಯೋಗ ಸಂವಿಧಾನ ಆಶಯವನ್ನು ಬುಡಮೇಲು ಮಾಡಲು ಹೊರಟಿದೇ. ಎಸ್ ಐಆರ್ ಒಂದು ಮಾರಕ ಹಸ್ತ್ರ ಮತದಾನದ ಹಕ್ಕಿಗೆ ದಕ್ಕೆ ತರಲು ಬಡಪಾಯಿ ಜನರನ್ನು ದಾಖಲೆ ಕೊಡಲು ಹಿಂಸೆ ಮಾಡಿ ಅವರಿಗೆ ಇದರ ಸಹವಾಸ ಬೇಡವೆಂದು ದೂರ ಸರಿದು ಮತದಾನ ಪಟ್ಟಿಯಿಂದ ಹೊರಗಿಡುವುದು ಜನವಿರೋಧಿ ಹುನ್ನಾರವಾಗಿದೆ ಎಂದರು. 

1003383333

ಸಿಐಟಿಯು ಜಿಲ್ಲಾಧ್ಯಕ್ಷ ಸಯ್ಯದ್ ಮುಜೀಬ್ ಮಾತನಾಡಿ ಎಸ್ಐಆರ್ ಅನ್ನು ತರಲು ಹೊರಟಿರುವವರು ಮನುವಾದಿ ಸಂವಿಧಾನದ ಪ್ರತಿಪಾದನೆಗೆ ಹೊರಟಿದ್ದಾರೆ .

ಸುಪ್ರೀಂ ಕೋರ್ಟ್ ತೀರ್ಪುಗಳು ಆಳುವ ಸರ್ಕಾರಗಳ ಡಿಕ್ಟೇಷನ್ ಇದ್ದಂತೆ ಇದೆ ಇದರಿಂದ ಕೇವಲ ಒಂದು ಸಂವಿದಾಯ ಅಲ್ಲ . ಎಲ್ಲಾ ಸಮುದಾಯಗಳು ಮತಾಧಿಕಾರ ಕಳೆದುಕೊಳ್ಳುತ್ತಾರೆ, ಅದಕ್ಕೆ ನಾವೆಲ್ಲರೂ ಸೇರಿ ಇದನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ ಎಂದರು. 

ಜಾಗೃತ ಕರ್ನಾಟಕದ ಆದಂ ಖಾನ್ ಮಾತನಾಡಿ ಪರಿಷ್ಕರಣೆ ಹಿಂದೆ ನಡೆಯುತ್ತಿದ್ದಂತೆ ನಡೆಯುತ್ತಿಲ್ಲ ಆದರೆ ಎಸ್ಐಆರ್ ನಲ್ಲಿ ಪ್ರತಿಯೊಬ್ಬರು ಹೊಸದಾಗಿ ಸೇರುವುದಕ್ಕೆ ಎನುಮರೇಷನ್ 

ಫಾರಂ ಕೊಡಲು ಒತ್ತಾಯಿಸುತ್ತಿದ್ದಾರೆ. ಇದು ಎಲ್ಲಾ ಜನಸಾಮಾನ್ಯರಿಗೂ ಸಾಧ್ಯವಾಗುವಂತಹದಲ್ಲ ಇದಕ್ಕೆ ನಮ್ಮ ವಿರೋಧವಿದೆ. ಅದಕ್ಕೆ ಈ ಕರ್ನಾಟಕ ಪ್ರತಿರೋಧ ವೆಂದರು. 

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹೊರಹೋಗದಂತೆ ಮಾಡಲು ಸಹಾಯವಾಗುವ ದಾಖಲೆಗಳನ್ನು ಜನ ನೀಡಲು ಅವರಿಗೆ ಸೂಕ್ತ ಅವಧಿ ನೀಡಿ ಅವರನ್ನು ಮತ ಪಟ್ಟಿಯಲ್ಲೇ ಇರುವಂತೆ ಖಾತ್ರಿಪಡಿಸಬೇಕೆಂದರು .

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ತಾಜುದ್ದೀನ್ ಮಾತನಾಡಿ ಎಸ್ ಐಆರ್ ವಿರೋಧ ಪುಣ್ಯದ ಕೆಲಸ ಜನಸಾಮಾನ್ಯರು ಮತಾಧಿಕಾರ ಕಳೆದುಕೊಳ್ಳದಂತಾಗಲೂ ನಾವೆಲ್ಲ ಸೇರಿ ಹೋರಾಡ ಎಂದರು. 

ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿಕ್ ಹಿಂದ್, ಎಸ್ಡಿಪಿಐ,. ವಿಜ್ಞಾನ ಕೇಂದ್ರ, ಜನಶಕ್ತಿ, ಎದ್ದೇಳು ಕರ್ನಾಟಕ, ಜಾಗೃತ ಕರ್ನಾಟಕ, ಎಸ್ ಪಿಐಎಂ, ಎಸ್ ಯುಎಸ್ ಐ, ನಿವೃತ್ತ ನೌಕರರ ಸಂಘ, ಸ್ಲಂ ಜನಾಂದೋಲನ, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ, ಸಂವಿಧಾನ ಸಂರಕ್ಷಣಾ ಪಡೆ, ಮುಂತಾದ ಸಂಘಟನೆಗಳಿಂದ ಅರುಣ್,  ರಾಮಕೃಷ್ಣಪ್ಪ, ಅಕ್ಕಮ್ಮ, ಇಂದಿರಮ್ಮ, ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಕಲ್ಯಾಣಿ. ಮರಿಯಾಂಬಿ. ಪುಷ್ಪಲತಾ. ಶಿವಲಿಂಗಯ್ಯ. ಮುಂತಾದವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ವೈಭವಕ್ಕೆ ತುಮಕೂರಿನ ಸಾಂಸ್ಕೃತಿಕ ಸ್ಪರ್ಶ

ನಾಡಿನ ಸುಭಿಕ್ಷ, ಜನರ ಶಾಂತಿ, ನೆಮ್ಮದಿ ಹಾಗೂ ಮಳೆ-ಬೆಳೆ ಸಮೃದ್ಧಿಗಾಗಿ ತಾಯಿ...

ತುಮಕೂರು ದಸರಾ: ಹತ್ತು ದಿನಗಳ ಸಾಂಸ್ಕೃತಿಕ ಸಂಭ್ರಮ ನಾಳೆಯಿಂದ : ಡಾ. ಜಿ. ಪರಮೇಶ್ವರ್

ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ...

ತುಮಕೂರು | 10 ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ : 196 ಕ್ಷೇತ್ರಗಳಿಗೆ ಮೀಸಲಾತಿ

ತುಮಕೂರು ಗ್ರಾಮೀಣ ರಾಜಕಾರಣದ ಮುಂದಿನ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬರುವ ತಾಲ್ಲೂಕು...

ತುಮಕೂರು | ಜಿಪಂ ಚುನಾವಣೆಯ 57 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ: ಸೆ.19ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ತುಮಕೂರು ಜಿಲ್ಲಾ ಪಂಚಾಯಿತಿ ಚುನಾವಣೆಯ ರಾಜಕೀಯ ಲೆಕ್ಕಾಚಾರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜಿಲ್ಲೆಯ...