ಉಡುಪಿ | ಹಿಂದುತ್ವದ ರಾಜಕಾರಣ ಪ್ರಜಾತಂತ್ರ, ಸಮಾಜವಾದದ ಸಂಬಂಧವನ್ನು ಭ್ರಷ್ಟಗೊಳಿಸುತ್ತಿದೆ: ತೋಳ್ಪಾಡಿ

Date:

ವಸಾಹತುಶಾಹಿ ವಿರುದ್ಧದ ಹೋರಾಟದಿಂದ ರೂಪುಗೊಂಡ ಭಾರತದ ಪ್ರಜಾತಂತ್ರ ಇಂದು ಅತ್ಯಂತ ಸಂಕೀರ್ಣ ಹಾಗೂ ಕ್ಲಿಷ್ಟಕರ ವಿದ್ಯಮಾನವಾಗಿ ಬದಲಾಗುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ನ್ಯಾಯಪೂರ್ಣವಾಗಿದೆ ಎಂದು ಅನಿಸಿದರೂ ನಮ್ಮ ಕಣ್ಣೆದುರೇ ಪ್ರಜಾತಂತ್ರದ ಪರಿಸರದ ಮೇಲೆ ಸಾಲು ಸಾಲು ಹಲ್ಲೆಗಳು ನಡೆಯುತ್ತಿವೆ ಎಂದು ಖ್ಯಾತ ಚಿಂತಕ ಪ್ರೊ. ರಾಜಾರಾಮ್ ತೋಳ್ಪಾಡಿ ಹೇಳಿದರು.

- Advertisement -

ರಥಬೀದಿ ಗೆಳೆಯರು ಉಡುಪಿ ವತಿಯಿಂದ ಆಯೋಜಿಸಿದ್ದ ‘ನಮ್ಮ ಕಾಲದ ಪ್ರಜಾತಂತ್ರದ ಸ್ಥಿತಿ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಪ್ರಜಾತಂತ್ರದಲ್ಲಿ ಏಕೈಕ ರಾಷ್ಟ್ರದ ಕಲ್ಪನೆ ಇರುವುದಿಲ್ಲ. ರಾಷ್ಟ್ರವಾದವು ಹಲವು ಮೌಲ್ಯಗಳೊಂದಿಗೆ ಬೆಸೆದುಕೊಂಡಿದೆ. ಅದನ್ನು ಅರ್ಥೈಸಿಕೊಳ್ಳುವ ರೀತಿಯಲ್ಲಿಯೇ ಅದರ ಅಪಾಯವೂ ಅಡಗಿದೆ. ಗಾಂಧಿ, ನೆಹರೂ, ಪಟೇಲ್ ಹಾಗೂ ಸುಭಾಷ್ ಚಂದ್ರ ಬೋಸ್ ಪ್ರತಿಪಾದಿಸಿದ ರಾಷ್ಟ್ರವಾದಕ್ಕೂ ಹಿಂದುತ್ವದ ರಾಷ್ಟ್ರವಾದಕ್ಕೂ ವ್ಯತ್ಯಾಸವಿದೆ. ವಿವಿಧ ಮೌಲ್ಯಗಳ ಕೂಡುಕಟ್ಟಾಗಿರುವ ಭಾರತದ ಪ್ರಜಾತಂತ್ರವನ್ನು ಪುನರ್‌ನಿರೂಪಿಸುವುದೇ ಇಂದಿನ ಪ್ರಮುಖ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ಪ್ರಜಾಪ್ರಭುತ್ವವು ಪ್ರತಿರೋಧಕ್ಕೆ ಅವಕಾಶ ಮಾಡಿಕೊಡುವ ಹಾಗೂ ಆಡಳಿತಶಾಹಿ ವಿರೋಧವನ್ನು ಮಾನ್ಯಗೊಳಿಸುವ ಸಿದ್ಧಾಂತದ ಮೇಲೆ ನಿಂತಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಯುವಜನರ ಚಳವಳಿ ಇದನ್ನು ಸ್ಪಷ್ಟವಾಗಿ ತೋರಿಸಿದೆ ಎಂದರು.

1972ರ ಜೆ.ಪಿ. ಚಳವಳಿ ಹಾಗೂ 2013ರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದ ಬಳಿಕ ಸ್ವತಂತ್ರ ಭಾರತದಲ್ಲಿ ಆಡಳಿತಶಾಹಿ ಸರ್ಕಾರವನ್ನು ಪ್ರಶ್ನಿಸಿದ ಮತ್ತೊಂದು ಗಟ್ಟಿಧ್ವನಿ ಜಂತರ್ ಮಂತರ್‌ನಲ್ಲಿ ದಾಖಲಾಗಿದೆ ಎಂದು ಹೇಳಿದರು.

ಭಾರತದಲ್ಲಿನ ಆಡಳಿತಶಾಹಿ ವ್ಯವಸ್ಥೆ ಸತ್ಯವನ್ನು ತಿರುಚಿ ಸುಳ್ಳಾಗಿಸುವ ಹಾಗೂ ಸುಳ್ಳನ್ನೇ ಸತ್ಯವಾಗಿಸಲು ಪ್ರಯತ್ನಿಸುವ ಸ್ವರೂಪ ಪಡೆದಿದೆ. ಹೀಗಾಗಿ ಪ್ರಜಾತಂತ್ರಕ್ಕೆ ಪರ್ಯಾಯಗಳಿಲ್ಲ. ಪ್ರಜಾಪ್ರಭುತ್ವವನ್ನು ಕ್ರಾಂತಿಕಾರಕಗೊಳಿಸುವುದು ಹಾಗೂ ಭಾರತದ ವೈವಿಧ್ಯಗಳಿಗೆ ನ್ಯಾಯಸಮ್ಮತ ಅವಕಾಶ ಕಲ್ಪಿಸುವುದರಲ್ಲಿಯೇ ಭಾರತೀಯ ಪ್ರಜಾತಂತ್ರದ ಸೌಂದರ್ಯವಿದೆ. ಪ್ರಜಾತಂತ್ರ ಮತ್ತು ಸಮಾಜವಾದದ ನಡುವೆ ಸಾವಯವ ಸಂಬಂಧವಿದ್ದು, ಹಿಂದುತ್ವದ ರಾಜಕಾರಣ ಈ ಸಂಬಂಧವನ್ನು ಭ್ರಷ್ಟಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಜಾತಂತ್ರ ಯಾವಾಗ ಕುಸಿಯಿತು ಎಂಬುದು ಅರಿವಿಗೆ ಬರುವ ಮೊದಲೇ ಅದು ಕುಸಿದಿರುತ್ತದೆ. ಜನಸಾಮಾನ್ಯರಿಗೆ ನೇರವಾಗಿ ಪ್ರಜಾತಂತ್ರ ಉಳಿಸುವ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಈ ನೆಲೆಯಲ್ಲಿ ಯೋಚಿಸುವುದೂ ಪ್ರಜಾತಂತ್ರದ ಒಂದು ರೂಪವಾಗಿದೆ. ಗಾಂಧಿ ಮತ್ತು ಲೋಹಿಯಾ ಪ್ರತಿಪಾದಿಸಿದ ಸತ್ಯಾಗ್ರಹಿ ಸಮಾಜ ರೂಪುಗೊಳ್ಳಬೇಕಾದರೆ ಮನೆಯಲ್ಲಿರುವವರೂ ಬೀದಿಯಲ್ಲಿ ತಮ್ಮ ನಾಗರಿಕ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ರೀತಿಯಲ್ಲಿ ಕ್ರಿಯಾಶೀಲ ನಾಗರಿಕರಾಗಬೇಕು ಎಂದು ಅವರು ಹೇಳಿದರು.

‘ಪ್ರಜಾತಂತ್ರ ಬಹುಮತದ ನಿರ್ಧಾರವಲ್ಲ’

ಸಂವಾದದಲ್ಲಿ ಮಾತನಾಡಿದ ಪ್ರೊ. ಫಣಿರಾಜ್, ಪ್ರಜಾತಂತ್ರವೆಂದರೆ ಕೇವಲ ಬಹುಮತದ ನಿರ್ಧಾರವಲ್ಲ. ಬಹುಮತದ ಆಡಳಿತವು ಅಲ್ಪಸಂಖ್ಯಾತರ ಹಕ್ಕುಗಳ ವಿರೋಧವಾಗಿ ಪರಿಣಮಿಸಬಾರದು ಎಂಬುದನ್ನು ಆಳುವ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು ಎಂದರು.

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಹೋರಾಟ, ಹನ್ನೊಂದು ತಿಂಗಳ ಕಾಲ ನಡೆದ ರೈತರ ಸತ್ಯಾಗ್ರಹ ಹಾಗೂ ಜಂತರ್ ಮಂತರ್‌ನ ಚಳವಳಿಗಳ ಸಂದರ್ಭದಲ್ಲಿ ಬಹುಮತದ ಸರ್ಕಾರಗಳು ಜನಪ್ರತಿರೋಧಕ್ಕೆ ಮಣಿಯಬೇಕಾಯಿತು. ಸರ್ಕಾರವನ್ನು ಪ್ರಶ್ನಿಸುವವರನ್ನೆಲ್ಲ ‘ಅರ್ಬನ್ ನಕ್ಸಲ್’ ಎಂದು ಆರೋಪಿಸುವ ಪ್ರವೃತ್ತಿಯೂ ಕಂಡುಬರುತ್ತಿದೆ ಎಂದು ಅವರು ಹೇಳಿದರು.

ಸಂವಾದದಲ್ಲಿ ವರದೇಶ್ ಹಿರೇಗಂಗೆ, ಮೋಹನ್ ಕುಮಾರ್, ಶ್ರೀಕುಮಾರ್ ನಕ್ರೆ, ವಿಠಲ್ ದಾಸ್ ಹಾಗೂ ರಾಮಾಂಜಿ ಭಾಗವಹಿಸಿದರು.

ಪಾವೆಂ ಆಚಾರ್ಯ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಛಾಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ವಂದಿಸಿದರು. ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕೋಲಾರ | 108 ಆಂಬ್ಯುಲೆನ್ಸ್ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ: ಕೆ.ನಾರಾಯಣಗೌಡ

ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ...