ಯಲ್ಲಾಪುರ | ಅಡಿಕೆ ವ್ಯಾಪಾರಿಗೆ 17.85 ಲಕ್ಷ ವಂಚನೆ: ಹುಬ್ಬಳ್ಳಿ ದಂಪತಿ ವಿರುದ್ಧ ಎಫ್‌ಐಆರ್

Date:

ಅಡಿಕೆ ಖರೀದಿಸಿ ಹಣ ನೀಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ದಂಪತಿಯ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಹುಬ್ಬಳ್ಳಿಯ ಹಿರೇಪೇಟೆ ನಿವಾಸಿಗಳಾದ ಬೀಬಿ ಫಾತೀಮಾ ನರಗುಂದ (35) ಮತ್ತು ಆಕೆಯ ಪತಿ ಫಾರುಕ ನರಗುಂದ (42) ಪ್ರಕರಣದ ಆರೋಪಿಗಳಾಗಿದ್ದಾರೆ. ಯಲ್ಲಾಪುರದ ‘ಅನಂತ ಹೋಮ್ ಇಂಡಸ್ಟ್ರೀಸ್’ ಅಡಿಕೆ ಮಳಿಗೆಯ ಮಾಲೀಕರಾದ ಸತೀಶ ಅನಂತ ಹೆಗಡೆ (51) ಎಂಬುವವರು ಈ ಕುರಿತು ದೂರು ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ಕಳೆದ ಏಪ್ರಿಲ್ 6, 2026 ರಂದು ಆರೋಪಿಗಳು ಸತೀಶ ಹೆಗಡೆ ಅವರ ಮಳಿಗೆಯಿಂದ ಪ್ರತಿ ಕ್ವಿಂಟಲ್‌ಗೆ 59,524 ರೂ. ದರದಂತೆ 24 ಕ್ವಿಂಟಲ್ 50 ಕೆ.ಜಿ ಅಡಿಕೆಯನ್ನು ಖರೀದಿಸಿದ್ದರು. ತೆರಿಗೆ ಹಾಗೂ ಇತರೆ ವೆಚ್ಚ ಸೇರಿ ಒಟ್ಟು 15,31,254 ರೂಪಾಯಿ ಮೌಲ್ಯದ ಅಡಿಕೆಯನ್ನು ಶೀಘ್ರವಾಗಿ ಹಣ ಪಾವತಿಸುವ ಭರವಸೆ ನೀಡಿ ತಮ್ಮ ವಾಹನದ ಮೂಲಕ ಜಿಎಸ್‌ಟಿ ಬಿಲ್‌ನೊಂದಿಗೆ ಹುಬ್ಬಳ್ಳಿಯ ತಮ್ಮ ಗೋದಾಮಿಗೆ ಸಾಗಿಸಿದ್ದರು.

ನಂತರ ಜುಲೈ 7, 2026 ರಂದು ಮಳಿಗೆಗೆ ಮರಳಿ ಬಂದ ಆರೋಪಿಗಳು, ಹಿಂದಿನ ಅಡಿಕೆ ಮಾರಾಟದ ಹಣ ಇನ್ನೂ ಕೈಸೇರಿಲ್ಲವೆಂದು ಸಬೂಬು ಹೇಳಿ, ಹೊಸ ಆರ್ಡರ್ ಬಂದಿರುವುದಾಗಿ ನಂಬಿಸಿದ್ದರು. ಅಂದೇ ಪ್ರತಿ ಕ್ವಿಂಟಲ್‌ಗೆ 57,334 ರೂ. ದರದಂತೆ 4 ಕ್ವಿಂಟಲ್ 20 ಕೆ.ಜಿ ಅಡಿಕೆಯನ್ನು ಖರೀದಿಸಿದ್ದು, ತೆರಿಗೆ ಸೇರಿ ಇದರ ಒಟ್ಟು ಮೌಲ್ಯ 2,53,976 ರೂಪಾಯಿಗಳಾಗಿತ್ತು.

ಅಲ್ಲದೆ, ಯಲ್ಲಾಪುರದ ಕೆನರಾ ಟ್ರೇಡರ್ಸ್ ಮಾಲೀಕ ರಾಘವೇಂದ್ರ ಗಾಂವಕರ ಅವರಿಂದಲೂ ಜೂನ್ 1 ರಂದು ಖರೀದಿಸಿದ್ದ 17 ಕ್ವಿಂಟಲ್ 57 ಕೆ.ಜಿ ಅಡಿಕೆಯ ಬಾಕಿ ಮೊತ್ತ 10,89,384 ರೂಪಾಯಿಯನ್ನು ಪಾವತಿಸಬೇಕಿತ್ತು.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಗಾಂವಕರ ಅವರನ್ನು ಅನಂತ ಹೋಮ್ ಇಂಡಸ್ಟ್ರೀಸ್ ಮಳಿಗೆಗೆ ಕರೆಸಿಕೊಂಡ ಆರೋಪಿಗಳು, ಇಬ್ಬರಿಗೂ ನೀಡಬೇಕಿದ್ದ ಬಾಕಿ ಮೊತ್ತವನ್ನು ಸೇರಿಸಿ ಒಟ್ಟು 29,00,000 ರೂಪಾಯಿಗಳ ಚೆಕ್ ಅನ್ನು ಸತೀಶ ಹೆಗಡೆ ಅವರ ಮಳಿಗೆಯ ಹೆಸರಿನಲ್ಲಿ ನೀಡಿದ್ದರು.

ಎರಡನೇ ಆರೋಪಿ ಫಾರುಕ ನರಗುಂದ ಹುಬ್ಬಳ್ಳಿಯ ಸಿಬಿಟಿ ಶಾಖೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆಯ ಚೆಕ್‌ಗೆ ಸಹಿ ಹಾಕಿ, ಜುಲೈ 5, 2026 ರ ದಿನಾಂಕ ನಮೂದಿಸಿ ನಗದೀಕರಿಸಿಕೊಳ್ಳುವಂತೆ ತಿಳಿಸಿದ್ದರು.
ಅವರ ಮಾತಿನಂತೆ ಸತೀಶ ಹೆಗಡೆ ಅವರು ಯಲ್ಲಾಪುರದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಜುಲೈ 10 ಹಾಗೂ ಆಗಸ್ಟ್ 19 ರಂದು ಚೆಕ್ ಅನ್ನು ನಗದೀಕರಣಕ್ಕೆ ಹಾಜರುಪಡಿಸಿದಾಗ ಬ್ಯಾಂಕ್‌ನಿಂದ ಚೆಕ್ ಅಮಾನ್ಯಗೊಂಡು (ರಿಟರ್ನ್ ಮೆಮೊ) ವಾಪಸಾಗಿದೆ.

ಈ ಕುರಿತು ಹಣ ಪಾವತಿಸುವಂತೆ ಕೇಳಿದಾಗ ಆರೋಪಿಗಳು ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮತ್ತೆ ಹಣದ ವಿಚಾರ ಪ್ರಸ್ತಾಪಿಸಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಒಟ್ಟಾರೆ ಎರಡು ವ್ಯವಹಾರಗಳಿಂದ ಸತೀಶ ಹೆಗಡೆ ಅವರಿಗೆ 17,85,230 ರೂಪಾಯಿ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಲ್ಲಾಪುರದ ಮಾನ್ಯ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ದೂರು ಸ್ವೀಕರಿಸಿರುವ ಯಲ್ಲಾಪುರ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 316(2), 318(2), 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಜ಼ಂ ಖಾನ್ ವಿರುದ್ಧ 20 ವರ್ಷ ಹಳೆಯ ಕೇಸು ತೆರೆದ ಯೂಪಿ ಪೊಲೀಸರು

ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆಜಂ...

ಕಿರುಕುಳ ಆರೋಪ: ಟಿವಿಕೆ ಶಾಸಕ ಅರುಳ್ ವಿಘ್ನೇಶ್ ವಿರುದ್ಧ ಜಿಲ್ಲಾಧಿಕಾರಿ ದೂರು!

ಕಲ್ಲಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ ಟಿವಿಕೆ ಶಾಸಕ ಸಿ. ಅರುಳ್ ವಿಘ್ನೇಶ್...