ಬಾಗೇಪಲ್ಲಿ | ಸಡ್ಲವಾರಿಪಲ್ಲಿ ಕಿ ಪ್ರಾ ಶಾಲೆ ವಿದ್ಯಾರ್ಥಿಗಳಿಗೆ ದಾನಿಗಳಿಂದ ಶೈಕ್ಷಣಿಕ ಪರಿಕರಗಳ ವಿತರಣೆ

Date:

ನಾವು ಜನಿಸಿದ ಊರು ಮತ್ತು ಅಕ್ಷರ ಕಲಿಸಿದ ಶಾಲೆಯನ್ನು ಹಾಗೂ ಜನ್ಮ ಕೊಟ್ಟು ತಂದೆ ತಾಯಿಯನ್ನು ಎಂದಿಗೂ ಮರೆಯಬಾರದು. ನಾವು ಎಷ್ಟೇ ಸಾಧನೆ ಮಾಡಿ ಉನ್ನತ ಸ್ಥಾನಮಾನಕ್ಕೆ ಏರಿದರೂ, ನಮ್ಮ ಬದುಕಿಗೆ ಅಡಿಪಾಯ ಹಾಕಿದ ಊರು ಹಾಗೂ ಶಾಲೆಯ ಹಾಗೂ ತಂದೆ ತಾಯಿ ತೀರಿಸುವ ಋಣ ಕೆಲಸ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ ಕರೆ ನೀಡಿದರು.

- Advertisement -

ಬಾಗೇಪಲ್ಲಿ ತಾಲ್ಲೂಕು ಸಡ್ಲವಾರಿಪಲ್ಲಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಾದ ಕೃಷ್ಣಮೂರ್ತಿ ಹಾಗು ವಿಜಿ ಎಂಬುವವರು ನೀಡಿದ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ದಾನಿಗಳು ನೀಡುವ ಇಂತಹ ನೆರವು ವಿದ್ಯಾರ್ಥಿಗಳ ಕಲಿಕೆಗೆ ಪ್ರೇರಣೆಯಾಗುವುದರ ಜೊತೆಗೆ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯುಪಿ ಚುನಾವಣೆ | BJPಗೆ ಕ್ಷೇತ್ರ ಹಂಚಿಕೆ ಸವಾಲು;...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ಆರಂಭಿಸಿದೆ. ಮತ್ತೊಂದೆಡೆ ಸಮಾಜವಾದಿ...

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಾವು ಬೆಳೆದ ನಂತರ ತಮಗೆ ವಿದ್ಯೆ ಕಲಿಸಿದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು. ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ಪೂರೈಕೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹದಿಂದ ಹೊರಬರಬೇಕು ಎಂದರು.

ಶಿಕ್ಷಣ ಸಂಯೋಜಕ ರವಿಕುಮಾರ್ ಮಾತನಾಡಿ, ಅತಿ ಕಡಿಮೆ ದಾಖಲಾತಿಯನ್ನು ಹೊಂದಿದ್ದ ಈ ಶಾಲೆಯಲ್ಲಿ ಶಿಕ್ಷಕರಾದ ಮುನಿರಾಜು ರವರ ಶ್ರಮದಿಂದ ಇಂದು ಹೆಚ್ಚಿನ ದಾಖಲಾತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಸುಂದರ ಪರಿಸರವನ್ನು ಕಾಪಾಡಿಕೊಂಡು ಬರಲಾಗಿದ್ದು ಒಂದು ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಗ್ರಾಮಸ್ಥರ ಸಹಾಯ ಮತ್ತು ಸಹಕಾರದಿಂದ ಶಾಲೆಯ ಅಭಿವೃದ್ಧಿಯಾಗುತ್ತಿದೆ. ವಿದ್ಯೆ ಸಾಧಕನ ಸ್ವತ್ತು, ನಮ್ಮ ತಾಲ್ಲೂಕಿನ ಅನೇಕರು ಉನ್ನತವಾದ ಸ್ಥಾನಗಳನ್ನು ಪಡೆದಿದ್ದಾರೆ. ಸೌಲಭ್ಯಗಳ ಕೊರತೆ ಇದ್ದರೂ ಪರಿಶ್ರಮದಿಂದ ಉನ್ನತವಾದ ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಣ ಇರುವವರಿಗೆಲ್ಲಾ ದಾನ ಮಾಡುವ ಗುಣ ಇರುವುದಿಲ್ಲ. ಸಡ್ಲವಾರಿಪಲ್ಲಿ ಗ್ರಾಮದ ಕೃಷ್ಣಮೂರ್ತಿ ಮತ್ತು ಅವರ ಪುತ್ರ ವಿಜಿ ರವರ ನೆರವು ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್,ವಾಟರ್ ಬಾಟಲ್, ನೋಟ್‌ಬುಕ್, ಪೆನ್ನು, ಪೆನ್ಸಿಲ್, ಶಟಲ್ ಬ್ಯಾಟ್ ಸೇರಿದಂತೆ ವಿವಿಧ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.


ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಡಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಆರ್.ರಮೇಶ್, ಬಿಆರ್‌ಸಿ ವಿಜಯಕುಮಾರ್, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಂಗಾರೆಡ್ಡಿ, ವೆಂಕಟರಾಮರೆಡ್ಡಿ, ಕೃಷ್ಣಮೂರ್ತಿ, ವಿಜಿ. ಪುಲ್ಲಾರೆಡ್ಡಿ, ಮಂಜುನಾಥ್, ಶಿಕ್ಷಕರಾದ ಮುನಿರಾಜು, ಸುಮ, ಎಸ್.ಡಿ.ಎಂ.ಸಿ ಅಧ್ಯಕ್ ವೆಂಕಟರವಣಪ್ಪ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಸರ್ಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯರ ವರ್ಗಾವಣೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಮನವಿ

ಮರತೂರಿನ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಪ್ರಾಚಾರ್ಯ ಶಿವಾನಂದ ಎಚ್. ಲೇಗಂಟಿ...

ಯಾದಗಿರಿ | ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಜಾಗೃತಿ ಅಗತ್ಯ: ಭೀಮಾಶಂಕರ ಎಂ. ಯರಗೋಳ

'ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಕಂಡುಬರುತ್ತಿರುವುದು ವಿಷಾದನೀಯ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ...

ಕಲಬುರಗಿ | 20 ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ; 4 ದಿನಗಳ ಗಡುವು; ಇಲ್ಲದಿದ್ದರೆ ಹೆದ್ದಾರಿ ಬಂದ್ ಎಚ್ಚರಿಕೆ

ಶಹಾಬಾದ್ ತಾಲೂಕಿನ ಎಸ್.ಎಸ್. ಮರಗೋಳ ಕಾಲೇಜಿನಿಂದ ತೋನಸನಹಳ್ಳಿ (ಎಸ್) ಗ್ರಾಮದವರೆಗಿನ ರಾಜ್ಯ...