ವಿಜಯನಗರ | ಬಸವಣ್ಣನ ವಚನ, ಸಂವಿಧಾನ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

Date:

ಮದುವೆಯೆಂದರೆ ಈಗಿನ ಜಮಾನದಲ್ಲಿ ಕೇಳಬೇಕಾ? ಅಬ್ಬರ, ಆಡಂಬರ, ಡಿಜೆ ಹೀಗೆ ಧಾಂ ಧೂಂ ಅಂತ ಮದುವೆ ಮಾಡಿಕೊಳ್ಳುವುದು ಪ್ರಸ್ತುತ ಜನರೇಷನ್‌ನಲ್ಲಿ ಸಾಮಾನ್ಯವಾಗಿದೆ. ಇಂತಹ ಸಂದರ್ಭದ ಮಧ್ಯೆ ಇಲ್ಲೊಂದು ಜೋಡಿ ಎಲ್ಲರನ್ನೂ ಬೆರಗುಗೊಳಿಸುವಂತೆ ಸಪ್ತಪದಿ ತುಳಿದು ಎಲ್ಲರಿಗೂ ಮಾದರಿಯಾಗಿದೆ. ಬಸವ ಜಯಂತಿಯಂದು ಜಗಜ್ಯೋತಿ ಬಸವೇಶ್ವರರು, ಅಹಿಂಸಾ ತತ್ವ ಸಾರಿದ ಬುದ್ಧ ಹಾಗೂ ವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಆಶಯದಂತೆ ಸಂವಿಧಾನ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ.

- Advertisement -

ಬಸವ ಜಯಂತಿಯಂದು ವಚನ ಪಠಿಸಿ ಮದುವೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ನಿವಾಸಿಗಳಾದ ಮಹಾಲಕ್ಷ್ಮೀ ಹಾಗೂ ತಿಮ್ಮರಾಜು ಪರಸ್ಪರ ಪ್ರೀತಿಸುತ್ತಿದ್ದರು. ಈಗ ಅವರ ಪ್ರೀತಿ ಮದುವೆಯ ಬಂಧಕ್ಕೆ ಕಾಲಿಟ್ಟಿದೆ. ಯುವ ಪೀಳಿಗೆಗೆ ಆದರ್ಶವಾಗಿರಬೇಕೆಂದು ಈ ಜೋಡಿ ಮಹಾನ್ ನಾಯಕರ ಭಾವಚಿತ್ರಗಳ ಮುಂದೆ ಪ್ರತಿಜ್ಞೆ ಮಾಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಂಬೂಲ ಬದಲಾಗಿ ಪುಸ್ತಕಗಳ ವಿನಿಮಯ

ಹೊಸಪೇಟೆ ಬಳಿಯ ಚನ್ನಬಸಪ್ಪನ ಗುಡ್ಡದ ಬಳಿ ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಮದುವೆ ಜರುಗಿದೆ. ಸಮಾಜ ಸೇವಕರೂ ಆಗಿರುವ ಡಾ. ಅಜಯ್ ಕುಮಾರ್ ಹಾಗೂ ತಂಡದ ಮಾರ್ಗದರ್ಶನದಲ್ಲಿ ನವಜೋಡಿ ಹೊಸಬಾಳಿಗೆ ಕಾಲಿಟ್ಟರು. ಎಲ್ಲ ಕಡೆಯೂ ತಾಂಬೂಲ ಕೊಡುವ ಸಂಪ್ರದಾಯವಿದೆ. ಆದರೆ ಈ ಮದುವೆಯಲ್ಲಿ ನವದಂಪತಿಯ ಸಂಬಂಧಿಕರಿಗೆ ಸಮಾಜ ಸುಧಾರಣೆಯ ಪುಸ್ತಕಗಳನ್ನು ಬುಟ್ಟಿಯಲ್ಲಿಟ್ಟು ವಿನಿಮಯ ಮಾಡಿಸಲಾಯಿತು. ಬುದ್ಧ, ಬಸವ, ಅಂಬೇಡ್ಕರ್ ಅವರ ಪುಸ್ತಕಗಳು ಆ ತಾಂಬೂಲದಲ್ಲಿದ್ದವು. ಇನ್ನೂ ವಿಶೇಷವೆಂದರೆ ಉಡಿ ತುಂಬುವ ಶಾಸ್ತ್ರದಲ್ಲಿ ಹೂ, ಹಣ್ಣು ಇಡುವ ಬದಲಿಗೆ ಮೌಲ್ಯಯುತ ಪುಸ್ತಕಗಳನ್ನು ಇಟ್ಟಿದ್ದು ಎಲ್ಲರ ಗಮನ ಸೆಳೆಯಿತು.

ಮಂತ್ರಗಳ ಬದಲು ಸಂವಿಧಾನ ಪೀಠಿಕೆ, ವಚನ ಪಠಣ

ಸಾಮಾನ್ಯವಾಗಿ ಎಲ್ಲ ಮದುವೆಗಳಲ್ಲಿ ಮಂತ್ರಗಳ ಸದ್ದು ಜೋರಾಗಿರುತ್ತದೆ. ಆದರೆ ಇಲ್ಲಿ ಸಂವಿಧಾನದ ಪೀಠಿಕೆ ಓದಿಸಲಾಯಿತು. ಡಾ. ಅಜಯ್ ಕುಮಾರ್ ಅವರು ಬಸವಣ್ಣನವರ ವಚನಗಳನ್ನು ಓದಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

ಇದನ್ನೂ ಓದಿದ್ದೀರಾ? ವಿಜಯಪುರ | ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿಪುರುಷ ಬಸವಣ್ಣ: ಬಸವಲಿಂಗ ಸ್ವಾಮೀಜಿ

ಪರಸ್ಪರ ತಾಳಿ ಕಟ್ಟಿಸಿಕೊಂಡ ಜೋಡಿ

ಈ ಮದುವೆಯಲ್ಲಿ ಅಕ್ಷತೆ ಬದಲು ಸಂಗಾತಿಗಳ ಮೇಲೆ ಹೂ ಹಾಕಲಾಯಿತು. ಮದುವೆಯಲ್ಲಿ ನೆರೆದಿದ್ದ ಜನರೆಲ್ಲರೂ ನವದಂಪತಿಗೆ ಪುಷ್ಪಾರ್ಚನೆ ಮಾಡಿ ಆಶೀರ್ವದಿಸಿದರು. ವಧು ಮಹಾಲಕ್ಷ್ಮೀಯವರು ವರ ತಿಮ್ಮರಾಜುಗೆ ರುದ್ರಾಕ್ಷಿ ಸರ ಹಾಕಿದರು. ಬಳಿಕ ವರ, ವಧುವಿಗೆ ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ನಂತರ ಒಬ್ಬರಿಗೊಬ್ಬರು ʼನೀನು ಹೇಳಿದಂತೆ ನಾನು ಕೇಳಬೇಕು. ನಾನು ಹೇಳಿದಂತೆ ನೀನು ಕೇಳಬೇಕುʼ ಎಂದು ತಮಗೆ ತಾವೇ ಪ್ರತಿಜ್ಞೆ ವಿಧಿಸಿಕೊಂಡರು. ಈ ಅಪರೂಪದ ಮದುವೆಯಲ್ಲಿ ನರೆದಿದ್ದ ವಧು-ವರನ ಸಂಬಂಧಿಕರು, ಆಪ್ತರು ಆದರ್ಶ ಮದುವೆ ಕಂಡು ಪುಳಕಿತಗೊಂಡರು.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...