ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

Date:

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ ‘ಸ್ಪೈಸ್‌ಜೆಟ್’ ಕಳೆದ ಕೆಲವು ದಿನಗಳಿಂದ ತನ್ನ ಬಹುತೇಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಈ ನಡುವೆ, ಈಗಾಗಲೇ ರದ್ದಾಗಿರುವ ಹಾಗೂ ಹಾರಾಟ ನಡೆಸುವ ಉದ್ದೇಶವಿಲ್ಲದ ವಿಮಾನಗಳಿಗೂ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾರಾಟ ಮುಂದುವರಿಸಿದೆ ಎಂದು ಹಲವು ಪ್ರಯಾಣಿಕರು ದೂರಿದ್ದಾರೆ. ಮತ್ತೊಂದೆಡೆ, ರದ್ದಾದ ಟಿಕೆಟ್‌ಗಳ ಹಣ ಮರುಪಾವತಿಯಾಗದೆ (ರೀಫಂಡ್) ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

- Advertisement -

ಉದಾಹರಣೆಗೆ, ಮುಂಬೈ–ದುಬೈ ನಡುವಿನ ‘ಎಸ್‌ಜಿ–5060’ ವಿಮಾನವು ಕಳೆದ ಒಂದು ವಾರದಿಂದ ಹಾರಾಟ ನಡೆಸಿಲ್ಲ. ಆದರೂ ನವೆಂಬರ್ 21ರಂದು ಅದರ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಿದ್ದವು. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಮಾನಯಾನ ಪತ್ರಕರ್ತ ಅರಿಂದಮ್ ಮಜುಂದಾರ್, ‘ಬಾಕಿ ಹಣ ಪಾವತಿಸದ ಕಾರಣ ದುಬೈ ವಿಮಾನ ನಿಲ್ದಾಣವು ಕಳೆದ 7 ದಿನಗಳಿಂದ ಸ್ಪೈಸ್‌ಜೆಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಟಿಕೆಟ್ ಮಾರಾಟ ಮಾಡುವ ಮೂಲಕ ಪ್ರಯಾಣಿಕರಿಂದ ಅನೈತಿಕವಾಗಿ ಹಣ ಗಳಿಸಲಾಗುತ್ತಿದೆ. ಹಾರಾಟ ನಡೆಸದ ಇಂತಹ ಹಲವು ವಿಮಾನಗಳ ಟಿಕೆಟ್ ಮಾರಾಟಕ್ಕೆ ಮುಕ್ತವಾಗಿವೆ’ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಗ್ರೌಂಡ್-ಹ್ಯಾಂಡ್ಲಿಂಗ್ ಸಂಸ್ಥೆ ‘ಡಿಎನ್‌ಎಟಿಎ’ಗೆ ಪಾವತಿಸಬೇಕಿದ್ದ 1.4 ಕೋಟಿ ದಿರ್ಹಮ್ (ಸುಮಾರು ₹35.85 ಕೋಟಿ) ಬಾಕಿ ಉಳಿಸಿಕೊಂಡಿರುವ ಕಾರಣ, ದುಬೈ ವಿಮಾನ ನಿಲ್ದಾಣವು ನವೆಂಬರ್ 12ರಿಂದ ಸ್ಪೈಸ್‌ಜೆಟ್‌ನ ಚೆಕ್-ಇನ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ಸಂಸ್ಥೆ ಹೇಳಿದೆ. ನಿತ್ಯ ಸುಮಾರು 15 ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದ್ದರೂ, ಪೂರ್ಣ ವೇಳಾಪಟ್ಟಿಯ ಎಲ್ಲ ವಿಮಾನಗಳಿಗೂ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂದು ಉದ್ಯಮಿ ಸಂಜಯ್ ಬಾಫ್ನಾ ದೂರಿದ್ದಾರೆ. ತಮ್ಮ ‘ಎಸ್‌ಜಿ–720’ ವಿಮಾನವನ್ನು ಎರಡು ಬಾರಿ ರದ್ದುಗೊಳಿಸಿದ್ದರಿಂದ ಕುಟುಂಬ ಸಮೇತ ಪರದಾಡುವಂತಾಯಿತು; ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರಯಾಣಿಕ ಶಿವಕುಮಾರ್ ಅಳಲು ತೋಡಿಕೊಂಡಿದ್ದಾರೆ. ಆದಾಗ್ಯೂ, ವಿಮಾನ ರದ್ದಾದ ತಕ್ಷಣ ಬುಕಿಂಗ್ ವ್ಯವಸ್ಥೆಯಲ್ಲಿ ವೇಳಾಪಟ್ಟಿಯನ್ನು ನವೀಕರಿಸದಿದ್ದರೆ ಕೆಲವೊಮ್ಮೆ ಟಿಕೆಟ್ ಲಭ್ಯವಿರುವಂತೆ ತೋರಿಸುವ ಸಾಧ್ಯತೆಯೂ ಇರುತ್ತದೆ.

ರದ್ದಾದ ವಿಮಾನಗಳ ಟಿಕೆಟ್ ಹಣ ಮರಳಿ ಪಡೆಯುವುದು ಪ್ರಯಾಣಿಕರಿಗೆ ದೊಡ್ಡ ಸವಾಲಾಗಿದೆ. ವಿಮಾನ ರದ್ದಾಗಿ 20 ದಿನಗಳು ಕಳೆದರೂ ಹಣ ಬಂದಿಲ್ಲ ಎಂದು ಹಲವರು ದೂರಿದ್ದರೆ, 2027ರ ಜನವರಿಯಲ್ಲಿ ರೀಫಂಡ್ ಜಮೆಯಾಗಲಿದೆ ಎಂಬ ಸಂದೇಶ ಬಂದಿರುವುದಾಗಿ ಒಬ್ಬರು ತಿಳಿಸಿದ್ದಾರೆ. ಆನ್‌ಲೈನ್ ಟ್ರಾವೆಲ್ ಏಜೆನ್ಸಿ (ಒಟಿಎ) ಮೂಲಕ ಬುಕ್ ಮಾಡಿದ ವಿಮಾನ ರದ್ದಾದಾಗ ಸ್ಪೈಸ್‌ಜೆಟ್ ಸಂಸ್ಥೆಯು ಏಜೆನ್ಸಿಯನ್ನು ಸಂಪರ್ಕಿಸಲು ಹೇಳಿದರೆ, ಏಜೆನ್ಸಿಯು ವಿಮಾನಯಾನ ಸಂಸ್ಥೆಯತ್ತ ಬೊಟ್ಟು ಮಾಡುತ್ತಿದೆ ಎಂದು ಪ್ರಯಾಣಿಕರಾದ ಜಸ್ಲೀನ್ ಕೌರ್ ಆರೋಪಿಸಿದ್ದಾರೆ. ಗ್ರಾಹಕ ಸೇವಾ ವಿಭಾಗದಲ್ಲಿ ಕೇವಲ ಸ್ವಯಂಚಾಲಿತ ಎಐ (ಕೃತಕ ಬುದ್ಧಿಮತ್ತೆ) ಉತ್ತರಗಳು ಮಾತ್ರ ಸಿಗುತ್ತಿವೆ ಎಂಬ ದೂರುಗಳೂ ಕೇಳಿಬಂದಿವೆ.

2026ರ ಡಿಸೆಂಬರ್ 2ರಂದು ನಿಗದಿಯಾಗಿದ್ದ ತಮ್ಮ ಪತ್ನಿಯ ಮುಂಬೈ–ದೆಹಲಿ ವಿಮಾನವನ್ನು ಸ್ಪೈಸ್‌ಜೆಟ್ ರದ್ದುಗೊಳಿಸಿದೆ. ರೀಫಂಡ್‌ಗಾಗಿ ನೀಡಲಾದ ಲಿಂಕ್ ಒತ್ತಿದಾಗ, ‘ಕ್ಷಮಿಸಿ, ವಿಮಾನ ಈಗಾಗಲೇ ಹಾರಾಟ ನಡೆಸಿರುವುದರಿಂದ ಮಾರ್ಪಾಡು ಸಾಧ್ಯವಿಲ್ಲ’ ಎಂಬ ಸಂದೇಶ ಬಂದಿದೆ. ಡಿಸೆಂಬರ್ 2ರ ವಿಮಾನವು ಅವಧಿಗೂ ಮುನ್ನವೇ ಹಾರಾಟ ನಡೆಸಲು ಹೇಗೆ ಸಾಧ್ಯ ಎಂದು ಚಿತ್ರನಿರ್ಮಾಪಕ ಹಾಗೂ ಇತಿಹಾಸಕಾರ ಡಾ. ರಾಮಚಂದ್ರನ್ ಶ್ರೀನಿವಾಸನ್ ಪ್ರಶ್ನಿಸಿದ್ದಾರೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಹೊಸ ನಿಯಮಗಳ ಪ್ರಕಾರ, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ ಟಿಕೆಟ್‌ಗಳ ಹಣವನ್ನು 7 ದಿನಗಳೊಳಗೆ ಮತ್ತು ಟ್ರಾವೆಲ್ ಏಜೆಂಟ್ ಅಥವಾ ಪೋರ್ಟಲ್ ಮೂಲಕ ಖರೀದಿಸಿದ ಟಿಕೆಟ್‌ಗಳ ಹಣವನ್ನು 14 ಕೆಲಸದ ದಿನಗಳೊಳಗೆ ಮರುಪಾವತಿಸಬೇಕು.

ತೀವ್ರ ನಿಧಿಯ ಕೊರತೆಯಿಂದಾಗಿ ನವೆಂಬರ್ ಮಧ್ಯಭಾಗದಿಂದ ಸ್ಪೈಸ್‌ಜೆಟ್ ತನ್ನ ದೈನಂದಿನ ವಿಮಾನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ರದ್ದುಗೊಳಿಸುತ್ತಿದೆ. ಚಳಿಗಾಲದ ವೇಳಾಪಟ್ಟಿಯಡಿ ನಿತ್ಯ 66 ವಿಮಾನಗಳ ಹಾರಾಟಕ್ಕೆ ಅನುಮತಿ ಪಡೆದಿದ್ದರೂ, ಕೇವಲ 10ರಿಂದ 15 ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದೆ. ಹಾರಾಟ ನಡೆಸುವ ವಿಮಾನಗಳೂ ಭಾರಿ ವಿಳಂಬವಾಗುತ್ತಿದ್ದು, ಚಳಿಗಾಲದ ಪ್ರವಾಸಿ ಋತುವಿನ ಹೊಸ್ತಿಲಲ್ಲೇ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ‘ಏರ್‌ಸೇವಾ’ ದೂರು ಪರಿಹಾರ ಪೋರ್ಟಲ್‌ನಲ್ಲಿ ಸಂಸ್ಥೆಯ ವಿರುದ್ಧ 7,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಪಿಟಿಐ ವರದಿ ಮಾಡಿದೆ.

ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ, ನಿಯಮಗಳ ನಿರಂತರ ಉಲ್ಲಂಘನೆ, ವಿಮಾನ ಹಾರಾಟದ ವ್ಯತ್ಯಯ ಹಾಗೂ ಬಾಕಿ ಪಾವತಿ ವಿಚಾರವಾಗಿ ಡಿಜಿಸಿಎ ಶುಕ್ರವಾರ ಸ್ಪೈಸ್‌ಜೆಟ್‌ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದು, ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ. ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ ಶೇ 15ರಷ್ಟು ದೇಶೀಯ ಮಾರುಕಟ್ಟೆ ಪಾಲಿನೊಂದಿಗೆ ದೇಶದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದ ಸ್ಪೈಸ್‌ಜೆಟ್‌ನ ಪಾಲು, ಕಳೆದ ಅಕ್ಟೋಬರ್ ವೇಳೆಗೆ ಕೇವಲ ಶೇ 0.6ಕ್ಕೆ ಕುಸಿದಿದೆ. ನಗದು ಕೊರತೆ, ಹೆಚ್ಚುತ್ತಿರುವ ಬಾಕಿ ಮೊತ್ತ, ಹಾರಾಟ ಸ್ಥಗಿತಗೊಳಿಸಿರುವ ವಿಮಾನಗಳು ಹಾಗೂ ನೌಕರರ ವೇತನ ವಿಳಂಬವೇ ಈ ದುಸ್ಥಿತಿಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗಾವಿ ಪಿ.ಎಮ್.ಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಅರಿವು ಕಾಯಕ್ರಮ

ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅರಿವು ಕಾಯಕ್ರಮವನ್ನು ಜಿಲ್ಲಾ ಪಂಚಾಯತ್, ಮಕ್ಕಳ...

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ ಮೀನುಗಾರರ ಸಂಕಷ್ಟ

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ...

2019ರ ಬಳಿಕ ಲಡಾಖ್‌ನಲ್ಲಿ ಮೊದಲ ಪಂಚಾಯತ್, ನಗರಸಭೆ ಚುನಾವಣೆ: ‘ಗ್ಯಾನು ಮಾದರಿ’ ಇಲ್ಲೂ ಅನ್ವಯ ಎಂದ ನಾಯಕರು!

ಸಂವಿಧಾನದ 370ನೇ ವಿಧಿ ರದ್ದತಿ ಮತ್ತು 2019ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ...

Vibe ಸಮೀಕ್ಷೆ: ಯೂಪಿಯಲ್ಲಿ ಮತ್ತಷ್ಟು ಕುಸಿಯುವುದೇ ಬಿಎಸ್‌ಪಿ; ಮಾಯಾವತಿ ಪಕ್ಷ ಕುಸಿದಷ್ಟೂ ಬಿಜೆಪಿಗೆ ನಷ್ಟ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ರಾಜ್ಯದಲ್ಲಿ...