ಹಕ್ಕಿ ಜ್ವರಕ್ಕೆ ಭಾರತದ ಮೊದಲ ಲಸಿಕೆ ಬಿಡುಗಡೆ; 1 ರೂ. ಅಥವಾ 2 ರೂ.ಗೆ ಲಭ್ಯ!

Date:

ಕೋಳಿಗಳಿಗೆ ಮಾರಕವಾಗಿರುವ ಹಕ್ಕಿ ಜ್ವರವನ್ನು ತಡೆಗಟ್ಟುವ ದೇಶದ ಮೊಟ್ಟಮೊದಲ ಸ್ವದೇಶಿ ‘H5N1’ ಲಸಿಕೆಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧೀನದಲ್ಲಿರುವ ಭೋಪಾಲ್‌ನ ‘ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ’ಯ (ICAR-NIHSAD) ವಿಜ್ಞಾನಿಗಳು ಈ ‘H5N1’ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಕೋಳಿ ಸಾಕಾಣಿಕೆದಾರರಿಗೆ ಹೊರೆಯಾಗದಂತೆ ಈ ಲಸಿಕೆಯ ಪ್ರತಿ ಡೋಸ್ ಬೆಲೆಯನ್ನು 1 ರಿಂದ 2 ರೂಪಾಯಿಗಳಿಗೆ ನಿಗದಿಪಡಿಸಿದಲಾಗಿದೆ ಎಂದು ಸಂಸ್ಥೆ ಹೇಳಿದೆ.

- Advertisement -

ತೀವ್ರ ರೋಗಕಾರಕವಾದ ಹಕ್ಕಿ ಜ್ವರಕ್ಕೆ ಕಾರಣವಾಗುವ H5N1 ವೈರಸ್‌ನ ‘ಕ್ಲೇಡ್ 2.3.2.1ಎ’ ಎಂಬ ನಿರ್ದಿಷ್ಟ ತಳಿಯ ವಿರುದ್ಧ ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಲಸಿಕೆ ಇದಾಗಿದೆ. ಭಾರತದಲ್ಲಿ ಕಂಡುಬರುವ ಬಹುತೇಕ ಹಕ್ಕಿ ಜ್ವರ ಪ್ರಕರಣಗಳಿಗೆ ಇದೇ ವೈರಸ್ ಕಾರಣವಾಗಿದ್ದು, ಇದುವರೆಗೆ ಈ ನಿರ್ದಿಷ್ಟ ತಳಿಯ ವಿರುದ್ಧ ಯಾವುದೇ ವಾಣಿಜ್ಯ ಲಸಿಕೆ ಲಭ್ಯವಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

ಲಸಿಕೆ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಈ ಸಂಶೋಧನೆಯು ಭಾರತದ ವೈಜ್ಞಾನಿಕ ಸಾಮರ್ಥ್ಯ ಮತ್ತು ಆತ್ಮನಿರ್ಭರತೆಗೆ ಉತ್ತಮ ನಿದರ್ಶನವಾಗಿದೆ” ಎಂದು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?

2006ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಹಕ್ಕಿ ಜ್ವರ ಪತ್ತೆಯಾದಾಗಿನಿಂದ ಇಲ್ಲಿಯವರೆಗೆ H5N1 ಮತ್ತು H5N8 ವೈರಸ್‌ಗಳಿಂದ 500ಕ್ಕೂ ಹೆಚ್ಚು ಬಾರಿ ಸೋಂಕು ಉಲ್ಬಣಿಸಿದ ಪ್ರಕರಣಗಳು ವರದಿಯಾಗಿವೆ. ಈ ರೋಗ ಕಾಣಿಸಿಕೊಂಡಾಗ ಸೋಂಕಿತ ಕೋಳಿಗಳು 100%ರಷ್ಟು ಸಾವನ್ನಪ್ಪುವ ಅಪಾಯವಿತ್ತು. ಆದ್ದರಿಂದ, ಸೋಂಕು ಹರಡದಂತೆ ತಡೆಯಲು ಲಕ್ಷಾಂತರ ಕೋಳಿಗಳನ್ನು ಸಾಮೂಹಿಕವಾಗಿ ನಾಶಪಡಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು.

ಹಕ್ಕಿ ಜ್ವರವು ಕೇವಲ ಕೋಳಿ ಸಾಕಾಣಿಕೆದಾರರಿಗೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದೀಗ, ಲಸಿಕೆ ಸಿದ್ಧವಾಗಿದೆ. ಇದರಿಂದ ಕೋಳಿಗಳಿಂದ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಸೋಂಕು ಹರಡುವುದನ್ನು ತಡೆಯಲು ಸಹಕಾರಿಯಾಗಲಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2019ರ ಬಳಿಕ ಲಡಾಖ್‌ನಲ್ಲಿ ಮೊದಲ ಪಂಚಾಯತ್, ನಗರಸಭೆ ಚುನಾವಣೆ: ‘ಗ್ಯಾನು ಮಾದರಿ’ ಇಲ್ಲೂ ಅನ್ವಯ ಎಂದ ನಾಯಕರು!

ಸಂವಿಧಾನದ 370ನೇ ವಿಧಿ ರದ್ದತಿ ಮತ್ತು 2019ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ...

Vibe ಸಮೀಕ್ಷೆ: ಯೂಪಿಯಲ್ಲಿ ಮತ್ತಷ್ಟು ಕುಸಿಯುವುದೇ ಬಿಎಸ್‌ಪಿ; ಮಾಯಾವತಿ ಪಕ್ಷ ಕುಸಿದಷ್ಟೂ ಬಿಜೆಪಿಗೆ ನಷ್ಟ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ರಾಜ್ಯದಲ್ಲಿ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ ಮತ್ತು ಬೆಂಬಲಿಗರ ಮನೋಭಾವದ ವಿಶ್ಲೇಷಣೆ!

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು...

ಚಿಕಿತ್ಸಾ ನಿರ್ಲಕ್ಷ್ಯದಿಂದ ಮಹಿಳೆಗೆ ತೀವ್ರ ರಕ್ತಸ್ರಾವ: ಬೆಂಗಳೂರಿನ ವೈದ್ಯೆಗೆ ₹2 ಲಕ್ಷ ದಂಡ ವಿಧಿಸಿದ ಗ್ರಾಹಕರ ಆಯೋಗ

ವಿಫಲವಾದ ಗರ್ಭಧಾರಣೆಯ ಬಳಿಕ ಗರ್ಭಕೋಶವನ್ನು ಶುಚಿಗೊಳಿಸುವ ಶಸ್ತ್ರಚಿಕಿತ್ಸೆಯನ್ನು (ಡಿ ಆ್ಯಂಡ್ ಸಿ)...