ಮೈಸೂರು | ವನ್ಯಜೀವಿಗಳಿಗೆ ತೊಂದರೆ; ಅಂತಿಮ ಸಫಾರಿ ಕೈಬಿಡುವಂತೆ ಆದೇಶ

Date:

ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರು ಚಾಮರಾಜನಗರ ಜಿಲ್ಲೆಯ ಬಂಡೀಪುರ, ಮೈಸೂರು ಜಿಲ್ಲೆ, ಕೊಡಗು ಸೇರಿದಂತೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ನವೆಂಬರ್. 28, 2025 ರಿಂದಲೇ ಅಂತಿಮ ಸಫಾರಿ ಕಡಿತಗೊಳಿಸುವಂತೆ ಸೂಚಿಸಿ, ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

- Advertisement -

ಸಂಜೆ 6 ರ ನಂತರವೂ ಕಾಡಿನಲ್ಲಿ ಸಫಾರಿ ನಡೆಸುವುದರಿಂದ ಪ್ರಾಣಿಗಳು ಬೆಳಕು ಹಾಗೂ ಶಬ್ದದಿಂದ ಹೆದರಿ ಊರಿನ ಕಡೆಗೆ ಮುಖ ಮಾಡಿದ್ದು. ಗ್ರಾಮಗಳಲ್ಲಿ ಪ್ರಾಣಿಗಳ ಉಪಟಳ ಹೆಚ್ಚಿದೆ ಎಂದು ರೈತ ಸಂಘಟನೆ, ಇನ್ನಿತರೇ ಸಂಘಟನೆಗಳು ದೂರು ನೀಡಿವೆ. ಸಫಾರಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಸಫಾರಿ ಪ್ರವಾಸಿಗರಿಗೆ ಮನರಂಜನೆ, ಕಾಡಿನ ಬಗ್ಗೆ, ಪರಿಸರದ ಬಗ್ಗೆ, ವನ್ಯಜೀವಿಗಳ ಆಸಕ್ತರಿಗೆ ಶಿಕ್ಷಣವೂ ಹೌದು. ಹಲವರಿಗೆ ಜೀವನೋಪಾಯ ಕೂಡ ಆಗಿದೆ. ಆದರೇ, ಇದರಿಂದಾಗುವ ಅನಾನುಕೂಲ, ಸಂಘಟನೆಗಳ ಮನವಿ ಆಲಿಸಿ ಅಂತಿಮ ಸಫಾರಿ ಕೈಬಿಡಲು ಅರಣ್ಯ ಇಲಾಖೆ ಸಚಿವರು ಆದೇಶ ಮಾಡಿರುತ್ತಾರೆ.

ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿದ್ದು ಗ್ರಾಮದತ್ತ ವಲಸೆ ಬರುತ್ತಿವೆ. ಇದರಿಂದ, ಪ್ರಾಣಹಾನಿ, ಬೆಳೆ ನಾಶ ಹೆಚ್ಚಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ದಿನದ ಒಂದು ಅವಧಿಯ ಸಫಾರಿ ನಿಲ್ಲಿಸುವುದರಿಂದ ಪ್ರಾಣಿ ಹಾವಳಿ ತಪ್ಪಿಸಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಸಫಾರಿ ನಿಲ್ಲಿಸಬೇಕು.

ಈ ಸುದ್ದಿ ಓದಿದ್ದೀರಾ? ಮೈಸೂರು | ‘ಹಜಾಮ’ ಪದ ಬಳಕೆ; ಸಿ ಟಿ ರವಿ ವಿರುದ್ಧ ಸವಿತಾ ಸಮಾಜದಿಂದ ಪ್ರತಿಭಟನೆ

ಇದರಿಂದ ಪ್ರಾಣಿಗಳು ಕಾಡಿನಲ್ಲಿ ಸಂಚರಿಸಲು ಮುಕ್ತವಾಗುತ್ತದೆ. ಸಫಾರಿ ನಡೆಸುವುದರಿಂದ ಪ್ರಾಣಿಗಳು ವಾಹನಗಳ ಕಿರಿಕಿರಿ, ಶಬ್ದ, ಬೆಳಕಿನಿಂದಾಗಿ ಹೆದರಿ ಗ್ರಾಮಗಳತ್ತ ಬರುವುದು ತಪ್ಪುತ್ತದೆ. ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆಯವರು ಸಫಾರಿ ನಿಷೇಧಿಸಲು ಮುಂದಾಗಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...