ಕರ್ತವ್ಯದ ವೇಳೆ ಟೋಪಿ ಧರಿಸಿದ್ದನ್ನು ಪ್ರಶ್ನಿಸಿದ ಮಹಿಳೆ; ಬಿಎಂಟಿಸಿ ಕಂಡಕ್ಟರ್ ಸಹನೆಯ ನಡೆಗೆ ವ್ಯಾಪಕ ಪ್ರಶಂಸೆ

Date:

 • ವಿಡಿಯೋ ವೈರಲ್ ಮಾಡಿದ ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹ
 • ಹನುಮಂತನ ಸ್ಟಿಕರ್ ಇರುವ ಫೋಟೋ ವಾಟ್ಸ್‌ಅಪ್‌ನಲ್ಲಿ ವೈರಲ್

ಬಿಎಂಟಿಸಿ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನಿರ್ವಾಹಕರೊಬ್ಬರು ತಲೆಗೆ ಧರಿಸಿದ್ದ ಹಸಿರು ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿ ಬಲವಂತವಾಗಿ ತೆಗೆಸಿರುವ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಟೋಪಿ ತೆಗೆದು ಸಹನೆಯಿಂದ ಉತ್ತರಿಸಿದ ಕಂಡಕ್ಟರ್ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಇದೇ ವೇಳೆ ವಿಡಿಯೋ ವೈರಲ್ ಮಾಡಿದ ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ನೆಟ್ಟಿಗರು, ಇದು ಕೂಡ ಒಂದು ರೀತಿಯಲ್ಲಿ ಅನೈತಿಕ ಪೊಲೀಸ್ ಗಿರಿ. ಹಾಗಾಗಿ ಆಕೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಏನಿದೆ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕರೊಬ್ಬರು ಕರ್ತವ್ಯದ ವೇಳೆ ಹಸಿರು ಬಣ್ಣದ ಟೋಪಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನು ಗಮನಿಸಿ ವಿಡಿಯೋ ಮಾಡಲು ಆರಂಭಿಸಿದ ಅಪರಿಚಿತ ಮಹಿಳಾ ಪ್ರಯಾಣಿಕರೋರ್ವರು, ಇದನ್ನು ಪ್ರಶ್ನಿಸಿದ್ದಾರೆ.

ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ. ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್‌ ನಯವಾಗಿಯೇ ಉತ್ತರಿಸಿ, ನಾನು ತುಂಬಾ ಸಮಯದಿಂದ ಹೀಗೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಇದಕ್ಕೆ ಏರುಧ್ವನಿಯಲ್ಲಿ ಮತ್ತೆ ಪ್ರಶ್ನೆ ಮಾಡಿರುವ ಆ ಮಹಿಳೆ, “ಸುಮಾರು ವರ್ಷದಿಂದ ಹಾಕೋದು ಬೇರೆ. ನಿಮ್ಮ ಧರ್ಮವನ್ನು ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ. ಸಮವಸ್ತ್ರದಲ್ಲಿ ಹಾಕೋದಕ್ಕೆ ಅವಕಾಶ ಇಲ್ಲ ಅಂದ ಮೇಲೆ ಹಾಕಬಾರದು” ಎಂದು ಹೇಳಿರುವುದು ಆ ಮಹಿಳೆಯೇ ಮಾಡಿರುವ ವಿಡಿಯೋದಲ್ಲಿ ದಾಖಲಾಗಿದೆ.

01:37 ನಿಮಿಷದ ಈ ವಿಡಿಯೋದಲ್ಲಿ, ಬಿಎಂಟಿಸಿ ಕಂಡಕ್ಟರ್, ಕೊನೆಗೆ ಟೋಪಿ ತೆಗೆದು, ‘ನನಗೆ ಏನೂ ಸಮಸ್ಯೆ ಇಲ್ಲ ಬಿಡಿ..’ ಎಂದು ಸೌಮ್ಯವಾಗಿಯೇ ನಡೆದುಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

‘ಇದು ನೈತಿಕ ಪೊಲೀಸ್ ಗಿರಿ’ ಎಂದ ನೆಟ್ಟಿಗರು

ಬಲವಂತವಾಗಿ ಟೋಪಿ ತೆಗೆಸಿದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ನೆಟ್ಟಿಗರಿಂದ ಹಲವು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಂಡಕ್ಟರ್‍‌ ಅವರ ಸೌಮ್ಯ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಬುದ್ಧಿವಾದ ಹೇಳಲೇ ಬೇಕೆಂದಿದ್ದರೆ ಮುಖ ತೋರಿಸಲು ಭಯವಿರುವ ಮಹಿಳೆಗೆ ವಿಡಿಯೋ ಮಾಡಿ, ಅದನ್ನು ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‍‌ನಲ್ಲಿ ಹನೀಫ್‌ ಎಂಬವರು ಈ ವಿಡಿಯೋ ಹಂಚಿಕೊಂಡು, “ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ದರೆ ಅದರ ಮುಳ್ಳುಗಳೇ ಒಡೆದು ಹೋಗುತ್ತಿದ್ದವೇನೋ? ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆ ಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ” ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಘಟನೆ ಯಾವಾಗ, ಎಲ್ಲಿ ನಡೆದಿದ್ದು ಎಂಬ ಮಾಹಿತಿ ಇದ್ದರೆ ಹಂಚಿಕೊಳ್ಳಿ ಎಂದು ಕೋರಿದ್ದಾರೆ.

ಟ್ವಿಟರ್‍‌ನಲ್ಲಿ ಈ ವಿಡಿಯೋವನ್ನು ಬಿಎಂಟಿಸಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಟ್ಯಾಗ್ ಮಾಡಿರುವ ‘ದಿ ನ್ಯೂಸ್ ಮಿನಿಟ್‌’ನ ಪತ್ರಕರ್ತ ಪ್ರಜ್ವಲ್, “ಈ ಕಂಡಕ್ಟರ್ ನ ಸಂಯಮಕ್ಕೆ ಬೆರಗಾದೆ. ಈ ಮಹಿಳೆ ಯಾವ ನಿಯಮದ ಬಗ್ಗೆ ಮಾತನಾಡುತ್ತಿದ್ದಾಳೆ? ಇದು ನೈತಿಕ ಪೊಲೀಸ್‌ಗಿರಿ” ಎಂದು ಹೇಳಿದ್ದಾರೆ.

ವಿಡಿಯೋ ವೈರಲಾಗುತ್ತಿರುವ ಬಗ್ಗೆ ಈ ದಿನ.ಕಾಮ್ ಬಿಎಂಟಿಸಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರನ್ನು ಸಂಪರ್ಕಿಸಿದಾಗ, ‘ಇದು ತುಂಬಾ ಹಳೆಯ ವಿಡಿಯೋ ಇರಬಹುದು’ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ಘಟನೆ ಯಾವಾಗ ನಡೆದದ್ದು, ವಿಡಿಯೋ ವೈರಲ್ ಮಾಡಿದ ಮಹಿಳೆ ಯಾರು ಎಂಬ ಬಗ್ಗೆ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

ಈ ವಿಡಿಯೋ ಬೆಳಕಿಗೆ ಬಂದ ಬಳಿಕ ಕೆಎಸ್‌ಆರ್‍‌ಟಿಸಿ ಬಸ್‌ನ ಹಿಂಬದಿಯಲ್ಲಿ ಹನುಮಂತನ ಸ್ಟಿಕರ್‍‌ ಇರುವ ಫೋಟೋ ಕೂಡ ವಾಟ್ಸ್‌ಅಪ್‌ನಲ್ಲಿ ವೈರಲಾಗುತ್ತಿದೆ.

“ಒಂದು ವೇಳೆ ಟೋಪಿ ಹಾಕುವುದು ತಪ್ಪು ಎಂದಾದರೆ, ಪ್ರತಿಯೊಂದು ಬಸ್ಸಿನಲ್ಲಿ ದೇವರ ಫೋಟೋ, ಕುಂಕುಮ, ಹೂ -ಹಾರ ಹಾಕಬಾರದು. ಇಬ್ಬಗೆಯ ನೀತಿ ಆಗಬಾರದು” ಎಂಬ ಸಂದೇಶದೊಂದಿಗೆ ಫೋಟೋ ಹರಿದಾಡುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

12 COMMENTS

 1. ಪೊಲೀಸರು, ಡ್ರೈವರ್ಸ್, ಕಂಡೆಕ್ಟರ್ ಹಾಗೂ ಇತರೆ ಯಾವುದೇ ಇಲಾಖೆಯ ಯೂನಿಫಾರ್ಮ್ ಧರಿಸಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಅಯ್ಯಪ್ಪ ಮಾಲೆ ಧರಿಸಿ ಕರ್ತವ್ಯ ನಿರ್ವಹಿಸಬಹುದೇ? ಒಬ್ಬ ಶಾಂತ ಸ್ವಭಾವದ ಮುಸ್ಲಿಂ ವ್ಯಕ್ತಿಯನ್ನು ಏರುಧ್ವನಿಯಲ್ಲಿ ಪ್ರಶ್ನಿಸಿ ಬಲವಂತವಾಗಿ ಆತ ಹಾಕಿದ್ದ ಟೋಪಿಯನ್ನು ತೆಗೆಸಿದ ಆ ಕೊಳಕು ಮನಸ್ಥಿತಿಯ ಮಹಿಳೆ ಇತರೆ ಧರ್ಮದವರು ಕರ್ತವ್ಯದ ವೇಳೆ ಅವರು ಧರಿಸುವ ಬಟ್ಟೆ, ಹಾಗೂ ಕರ್ತವ್ಯದ ಸ್ಥಳಗಳಲ್ಲಿನ ಧಾರ್ಮಿಕ ಆಚರಣೆಗಳನ್ನು ಪ್ರಶ್ನೆ ಮಾಡುವರೇ…?

  • ಅವಳು ದೊಡ್ಡ ಸಾಧನೆ ಮಾಡಿದ್ದಾಳೆ ಇಂತಹ ಇತಿಹಾಸ ಯಾರಿಂದಲೂ ಸಾಧ್ಯವಿಲ್ಲ ಎಕಂದರೆ ಉಳಿದ ಜನ ಸಂವಿಧಾನ ಪಾಲನೆ ಮಾಡುವವರು ಇವಳು ಮಾತ್ರ ಹಿಟ್ಲರ್ ಸಂಸ್ಕೃತಿ ಹೊಂದಿದ್ದಾಳೆ ಹಾಗಾದರೆ ಬಸ್ ಸರಕಾರಿದ್ದು ಅಲ್ವಾ ಬಸ್ಸಿನ ಗ್ಲಾಸ್ ಮೇಲೆ ಹನುಮಾನ ಚಿತ್ರ ತೆಗೆಯುವ ತಾಕತ್ತು ತೊರಿಸು ಹಿಟ್ಲರ್ ಸಂಸ್ಕೃತಿ

  • ಟೋಪಿ ಹಾಕುವುದು ತಪ್ಪಾದರೆ ಚಾಲಕ ಮತ್ತು ನಿರ್ವಾಹಕ ಖಾಕಿ ಅಥವಾ ಸರ್ಕಾರ ನಿಗದಿಪಡಿಸಿದ ಟೋಪಿಗಳನ್ನು ಧರಿಸಬೀಕಲ್ಲವೆ.
   ಹಾಗೆ ಮಾಡಿದರೆ ಕೋಮವಾದಕ್ಕೆ ಆಸ್ಪದವಿರುವುದಿಲ್ಲ..ಮೈಮೇಲೆ ಧರಿಸುವ ಉಡುಪುಗಳನ್ನು ಒಂದು ಕೋಮಿಗೆ ಸಂಭಂಡಿದಂತಾಗ ಬಾರದು.ಈ ಗೊಂದಲ ಮತ್ತು ಗಲಭೆ ನಿವಾರಿಸಲು ಸಮವಸ್ತ್ರವೇ ಸುಮಾರ್ಗ.

  • We have fight to ask….recently ur Hime minister G minister told to not put VOBHUTI and NAMA during duty time. ..so this means no should practise this kind of things

 2. ಆ ಮಹಿಳೆಗೆ ನನ್ನದೊಂದು ಪ್ರಶ್ನೆ. ಬಸ್ನಲ್ಲಿ ದೇವರ ಪೋಟೋಗಳನ್ನು ಇಡುವುದು ಕಾನೂನಿನಲ್ಲಿದೆ ಯೇ? ಹಾಗಿದ್ದರೆ ಬಸ್ ನಲ್ಲಿರುವ ದೇವರ ಫೋಟೋಗಳನ್ನೆಲ್ಲ ತೆಗೆಸಿ ಬಿಡಲಿ.
  ಶಾಲೆಯಲ್ಲಿ ಸರಸ್ವತಿ ಪೂಜೆ ಗಣೇಶ ಚತುರ್ಥಿ ಆಚರಿಸುವುದು ಕಾನೂನ್ನಲ್ಲಿದೆಯೇ? ಹಾಗಾದ್ರೆ ಆ ಮಹಿಳೆ ಇವಗಳನ್ನೆಲ್ಲ ನಿಲ್ಲಿಸಲಿ.

 3. ಪೂರ್ವಾಗ್ರಹಪೀಡಿತ ಕೋಮುವ್ಯಾಧಿ ಪುರೋಹಿತಶಾಹಿ ಮಹಿಳೆ ಇರಬಹುದು,,,ಇಂದಿನ ವಾತಾವರಣದಲ್ಲಿ ಇಂಥಾ ಕಲುಷಿತ ಮನಸ್ಸಿನ ಜನರೇ ದರ್ಬಾರು ನಡೆದಿದೆ,,ಇಷ್ಟೆಲ್ಲಕ್ಕೂ ಒಂದು ಪಕ್ಷದ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುವ ಕೆಲವು ಕೋಮುವ್ಯಾಧಿ ಪುರೋಹಿತಶಾಹಿ ಸಂಘಟನೆಗಳು ಸಮಾಜದಲ್ಲಿ ಹರಡಿರುವ ಅನ್ಯಕೋಮಿನ ವಿರುದ್ಧ ಹರಡಿರುವ ಧರ್ಮ ದ್ವೇಷದ ಪರಿಣಾಮ,,,ನಿಜ ಭಾರತೀಯರು ಇಂಥಾ ಸಮಾಜ ವಿರೋಧಿ ಮನಸ್ಥಿತಿಗಳನ್ನು ಬಹಿಷ್ಕಾರ ಹಾಕುವ ಅನಿವಾರ್ಯತೆ ಇದೆ

 4. Sabarul iman enu antha avr video dalli torsidare bekidre tirgi bilbahudittu but avr madiddu respect kottidare a henhsige mashaallah 🥹🥰

 5. Police should take a action against that stupid lady, she don’t have any rights to speak about any religious. If she is so much interested on her religious she shouldn’t have claim the bus, conductor would have kick her back & throw from the bus. Useless lady simply creating religious problem in the society. She don’t have guts to question the central govt & showing show off with poor peopl.

 6. YES .. No govt employee should practice. Thise kind of things …our Home minister G parmeshwar told to do not put VIBHUTI and Nama during duty Time for Police

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಇಂಧನ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ವಿಜಯಪುರದಲ್ಲಿ ಎಸ್‌ಯುಸಿಐ ಕಾರ್ಯಕರ್ತರು ಪ್ರತಿಭಟನೆ...

ಹಾವೇರಿ | ಬಸ್ ನಿಲುಗಡೆಗೆ ಒತ್ತಾಯಿಸಿ ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ

ಶ್ರೀಕಂಠಪ್ಪ ಬಡಾವಣೆಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ ಆಗ್ರಹಿಸಿ ಹಾವೇರಿ ನಗರದ ಹೊರವಲಯದ...

ಧಾರವಾಡ | ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

ಮೊಬೈಲ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ತುಂಬಿದ್ದ ಕಲ್ಲು ಕ್ವಾರಿಗೆ...