ನಾಳೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ; ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Date:

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ, 2026ರ ಸೆಪ್ಟೆಂಬರ್ 22 ರಂದು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ನಗರದಲ್ಲಿ ನಡೆಯಲಿದೆ. 2024ರ ಸಾಲಿನ ಭಾರತೀಯ ಸಿನಿಮಾಗಳ ಅತ್ಯುತ್ತಮ ಸಾಧನೆಯನ್ನು ಗೌರವಿಸುವ ಈ ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.

ಎಲ್ಲ ಕನ್ನಡಿಗರಿಗೂ ಈ ಬಾರಿಯ ಸಮಾರಂಭ ತೀರಾ ವಿಶೇಷವಾದದ್ದು. ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ರ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ರಾಷ್ಟ್ರಪತಿಗಳು ಸ್ವತಃ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಐದು ದಶಕಗಳಿಗೂ ಹೆಚ್ಚಿನ ತಮ್ಮ ನಟನಾ ಪಯಣದಲ್ಲಿ ಅನಂತ್ ನಾಗ್ ಅವರು ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ ಅತ್ಯಂತ ಸ್ಮರಣೀಯ ಪಾತ್ರಗಳನ್ನು ನೀಡಿದ್ದು, ಈ ಸುದೀರ್ಘ ಪಯಣಕ್ಕೆ ಈ ಪ್ರಶಸ್ತಿ ಸಂದಿದೆ.

ಪ್ರಮುಖ ಪ್ರಶಸ್ತಿಗಳ ಪೈಕಿ, ‘ಆರ್ಟಿಕಲ್ 370’ ಅತ್ಯುತ್ತಮ ಕಥಾಚಿತ್ರ (Best Feature Film) ಪ್ರಶಸ್ತಿಗೆ ಭಾಜನವಾಗಿದೆ. ‘ಭ್ರಮಯುಗಂ’ ಚಿತ್ರಕ್ಕಾಗಿ ಮಮ್ಮುಟ್ಟಿ ಹಾಗೂ ‘ಚಂದು ಚಾಂಪಿಯನ್’ ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ‘ಆರ್ಟಿಕಲ್ 370’ ಚಿತ್ರದ ಅಭಿನಯಕ್ಕಾಗಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರಕ್ಕಾಗಿ ರಣದೀಪ್ ಹೂಡಾ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಭಾಂಗಾರ್’ ಅತ್ಯುತ್ತಮ ರಂಗೇತರ ಚಿತ್ರ (Best Non-Feature Film) ಹಾಗೂ ‘ರಾಮ್-ನಾಮಿ’ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಇನ್ನುಳಿದಂತೆ ‘ಕಲ್ಕಿ 2898 AD’, ‘ಅಮರನ್’, ‘ಪುಷ್ಪ: ದಿ ರೂಲ್ ಪಾರ್ಟ್-02’, ‘ಭೂಲ್ ಭುಲೈಯ್ಯಾ 3’ ಮತ್ತು ‘ಸ್ತ್ರೀ 2’ ನಂತಹ ಜನಪ್ರಿಯ ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆಯಲಿವೆ.

ಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಉತ್ಸವಕ್ಕೆ ಹೊಸದೊಂದು ಅಧ್ಯಾಯವೂ ಶುರುವಾಗಿದೆ. ಮೊದಲ ಬಾರಿಗೆ ಈ ಸಮಾರಂಭವು ದೆಹಲಿಯಿಂದ ಹೊರಗೆ ನಡೆಯುತ್ತಿದೆ. ಭಾರತೀಯ ಚಿತ್ರರಂಗದ ಈ ಸಂಭ್ರಮವು ದೇಶದ ಮೂಲೆ ಮೂಲೆಗೂ ತಲುಪಲಿ ಎಂಬ ಉದ್ದೇಶದಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮುಂಬರುವ ವರ್ಷಗಳಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿದೆ.

1954 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎಲ್ಲಾ ಭಾರತೀಯ ಭಾಷೆಗಳ ಕಥಾಚಿತ್ರಗಳು, ಸಾಕ್ಷ್ಯ ಚಿತ್ರಗಳು ಮತ್ತು ಸಿನಿಮಾ ಕುರಿತಾದ ಬರಹಗಳನ್ನು ಒಳಗೊಂಡಿವೆ.

ವರದಿ: ಡಾವೆಂಕಿ

national film award
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಾರಂ-7 ದುರುಪಯೋಗ, ಮತಗಳ್ಳತನದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ...

ಶ್ವೇತಭವನ ಗೆಲ್ಲಲು 2028ರ ತನಕ ಕಾಯಬೇಕು ಡೆಮಾಕ್ರಟ್ಸ್!

ನವೆಂಬರ್ 3ರ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟರು ಭರ್ಜರಿ ಗೆಲುವು ಸಾಧಿಸಿದ್ದಾರೆ....

3 ತಿಂಗಳ ಬಳಿಕ ಐಟಿ ವಿಭಾಗದ ಮೇಲುಸ್ತುವಾರಿ ಹಿಂಪಡೆದ ಚು. ಆಯೋಗ!

ಕೇಂದ್ರ ಚುನಾವಣಾ ಆಯೋಗದಲ್ಲಿ (ECI) ಕಾರ್ಯ ಹಂಚಿಕೆ ಆದೇಶಕ್ಕೆ ಸಂಬಂಧಿಸಿದಂತೆ ಮುಖ್ಯ...

‘ಚಾಯ್ ಪೇ ಚರ್ಚಾ’ – ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಆಹ್ವಾನ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಪ್ರಮುಖ ಹಿರಿಯ...