ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಪ್ರಮುಖ ಹಿರಿಯ ನಾಯಕರು ಮತ್ತು ಮೈತ್ರಿಕೂಟದ ಪ್ರಮುಖ ನಾಯಕರಿಗೆ ತಮ್ಮ ಅಧಿಕೃತ ನಿವಾಸದಲ್ಲಿ ‘ಚಾಯ್ ಪೇ ಚರ್ಚಾ’ ವಿಶೇಷ ಆತಿಥ್ಯವನ್ನು ಆಯೋಜಿಸಿದ್ದಾರೆ.
ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ಅಧಿಕೃತ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರಸ್ತುತ ದೇಶದ ರಾಜಕೀಯ ಬೆಳವಣಿಗೆಗಳು, ಮುಂಬರುವ ಸಂಸತ್ ಅಧಿವೇಶನ ಮತ್ತು ಪ್ರಮುಖ ಚುನಾವಣಾ ಕಾರ್ಯತಂತ್ರಗಳ ಕುರಿತು ಹಿರಿಯ ನಾಯಕರೊಂದಿಗೆ ಚರ್ಚಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಜನರಿಗೆ ಜೇಬಿಗೆ 1.45 ಲಕ್ಷ ಕೋಟಿ ರೂ. ವೆಚ್ಚ: ಸಿಎಂ ಡಿ ಕೆ ಶಿವಕುಮಾರ್
ಈ ಹೈ-ಟೀ ಸಭೆಯು ಕೇವಲ ಒಂದು ಶಿಷ್ಟಾಚಾರದ ಸೌಹಾರ್ದಯುತ ಭೇಟಿಯಾಗಿರದೆ, ಪ್ರಮುಖ ರಾಜಕೀಯ ನಿರ್ಧಾರಗಳ ಕುರಿತು ಚರ್ಚಿಸುವ ಮಹತ್ವದ ವೇದಿಕೆಯಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಪ್ರಮುಖ ಸಂಸದರು, ಎಐಸಿಸಿ ಪದಾಧಿಕಾರಿಗಳು ಮತ್ತು ಒಕ್ಕೂಟದ ಹಿರಿಯ ಮುಖಂಡರು ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ವಿಪಕ್ಷಗಳು ಎತ್ತುತ್ತಿರುವ ಪ್ರಮುಖ ರಾಷ್ಟ್ರೀಯ ವಿಷಯಗಳು, ಸರ್ಕಾರದ ವಿರುದ್ಧದ ರಾಜಕೀಯ ಹೋರಾಟಗಳ ಮುಂದಿನ ಹಂತ ಮತ್ತು ಆಡಳಿತ ಪಕ್ಷದ ವಿರುದ್ಧ ಜಂಟಿ ಕಾರ್ಯತಂತ್ರ ರೂಪಿಸುವ ಬಗ್ಗೆ ಈ ಆತಿಥ್ಯ ಕೂಟದಲ್ಲಿ ‘ಚಾಯ್ ಪೇ ಚರ್ಚಾ’ ನಡೆಯಲಿದೆ ಎಂದು ವರದಿಯಾಗಿದೆ.




