ಸರ್ಕಾರಿ ಶಾಲೆಯಲ್ಲಿ ದಲಿತ ಸಿಬ್ಬಂದಿ ಮೇಜಿನ ಮೇಲೆ ಮಲ ವಿಸರ್ಜನೆ ಆರೋಪ; ಭುಗಿಲೆದ್ದ ಆಕ್ರೋಶ

Date:

ವೈಜ್ಞಾನಿಕ ಚಿಂತನೆ, ಸಾಮಾಜಿಕ ಅರಿವು, ಸಮಾನತೆ-ಸಹಬಾಳ್ವೆಯ ಪಾಠ ಕಲಿಸುವ ಶಿಕ್ಷಣ ಸಂಸ್ಥೆಗಳಲ್ಲೇ ಜಾತಿ ತಾರತಮ್ಯ ಮತ್ತು ಅಮಾನವೀಯ ವರ್ತನೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ತಮಿಳುನಾಡಿನ ಅರಿಯಲೂರು ಜಿಲ್ಲೆಯಿಂದ ಕೇಳಿಬಂದಿದೆ. ಜಯಂಕೊಂಡಂ ಸಮೀಪದ ಕೀಳವೇಲಿ ಸರ್ಕಾರಿ ಪ್ರೌಢಶಾಲೆಯ ಪ್ರಯೋಗಾಲಯ ಸಹಾಯಕರೊಬ್ಬರ ಮೇಜಿನ ಮೇಲೆ ಸಹೋದ್ಯೋಗಿಗಳೇ ಮಾನವ ಮಲವನ್ನು ಸುರಿದಿದ್ದಾರೆ ಎಂಬ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ನವೆಂಬರ್ 10ರಂದೇ ಈ ಅಮಾನವೀಯ ಕೃತ್ಯ ನಡೆದಿದೆ ಎನ್ನಲಾಗಿದ್ದು, ಶನಿವಾರದಂದು ಸಂತ್ರಸ್ತ ಪ್ರಯೋಗಾಲಯ ಸಹಾಯಕ ಪಿ. ಕಣ್ಣದಾಸನ್ ಅವರು ಜಯಂಕೊಂಡಂ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಎ. ವೇಲ್ಮುರುಗನ್ ಅವರಿಗೆ ಅಧಿಕೃತ ದೂರು ನೀಡಿದ ಬಳಿಕ ಪ್ರಕರಣ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

“ನಾನು ಬಿಜೆಪಿಯ ಗುಲಾಮನಲ್ಲ, ಅಂಬೇಡ್ಕರ್‌ವಾದಿ”- ರಾಮದಾಸ್‌ ಅಠಾವಳೆ ಹೇಳಿಕೆಯ...

ತಾವು ಬಿಜೆಪಿಯ ಸದಸ್ಯರಲ್ಲ, ಕೇವಲ ಅಂಬೇಡ್ಕರ್‌ವಾದಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಸ್ಪಂದಿಸದ ಕಾರಣಕ್ಕೆ ಎನ್‌ಡಿಎ ಸೇರಿದೆ ಎನ್ನುತ್ತಾರೆ...

ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ...

ಹಳೇ ಮೈಸೂರು ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ, ಇಂದು ಆ ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರಿಗೂ ಕಾಡಿನೊಳಗಿನ ವನ್ಯಜೀವಿಗಳಿಗೂ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,...

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಶಾಲೆಯ ಪ್ರಯೋಗಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ. ಕಣ್ಣದಾಸನ್ ಅವರು ತಮ್ಮ ದೂರಿನಲ್ಲಿ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ವ್ಯವಸ್ಥಿತ ಜಾತಿ ತಾರತಮ್ಯದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನವೆಂಬರ್ 10ರಂದು ಶಾಲೆಗೆ ಬಂದಾಗ ತಮ್ಮ ಮೇಜಿನ ಮೇಲೆ ಮಾನವ ಮಲವನ್ನು ಸುರಿದಿರುವುದು ಕಂಡುಬಂದಿದೆ. ತಮ್ಮನ್ನು ಅವಮಾನಿಸುವ ಮತ್ತು ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಕೆಲವು ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಕಣ್ಣದಾಸನ್ ಆರೋಪಿಸಿದ್ದಾರೆ.

ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಶಿಕ್ಷಕರಿಗೆ ಒಂದು ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಇತರ ಸಮುದಾಯದ ಶಿಕ್ಷಕರು ಪ್ರತ್ಯೇಕ ಕೊಠಡಿಯಲ್ಲಿ ಕೂರುತ್ತಾರೆ. ಕಳೆದ ಎರಡು ವರ್ಷಗಳ ಹಿಂದೆ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಶಾಲೆಗೆ ನೇಮಕಗೊಂಡ ಬಳಿಕ ಈ ರೀತಿಯ ತಾರತಮ್ಯ ಮತ್ತು ಗುಂಪುಗಾರಿಕೆ ಆರಂಭವಾಯಿತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಜಯಂಕೊಂಡಂ ಡಿಎಸ್‌ಪಿ ಎ. ವೇಲ್ಮುರುಗನ್ ಅವರು ಪ್ರತಿಕ್ರಿಯಿಸಿ, “ಘಟನಾ ಸ್ಥಳದಿಂದ ಶಂಕಿತ ಮಲದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿ (CEO) ರೇಣುಗೋಪಾಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, “ನವೆಂಬರ್ 10ರಂದು ನಡೆದ ಘಟನೆಯ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ನನಗೆ ದೂರು ನೀಡಿದ್ದರು. ಆದರೆ ನಾನು ಶಾಲೆಗೆ ಭೇಟಿ ನೀಡುವಷ್ಟರಲ್ಲಿ ಆ ಸ್ಥಳವನ್ನು ಸ್ವಚ್ಛಗೊಳಿಸಲಾಗಿತ್ತು. ಆದಾಗ್ಯೂ, ಕೆಲವು ಶಿಕ್ಷಕರು ಘಟನೆಯ ಫೋಟೋಗಳನ್ನು ತೆಗೆದುಕೊಂಡಿದ್ದರು. ಅದರ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿತ್ತು,” ಎಂದಿದ್ದಾರೆ.

ಶಾಲಾ ಸಿಬ್ಬಂದಿ ನಡುವಿನ ಜಾತಿ ತಾರತಮ್ಯದ ದೂರುಗಳ ಕುರಿತು ಇಲಾಖಾ ಮಟ್ಟದ ಪ್ರಾಥಮಿಕ ವಿಚಾರಣೆ ನಡೆಸಿದ ಸಿಇಒ, ನವೆಂಬರ್ 18ರಂದು ಮುಖ್ಯೋಪಾಧ್ಯಾಯ ಮುರುಗನ್ ಸೇರಿದಂತೆ ಮೂವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮುರುಗನ್ ಅವರನ್ನು ಶ್ರೀಪುರಂದನ್ ಶಾಲೆಗೆ ವರ್ಗಾಯಿಸಲಾಗಿದೆ.

ಸರ್ಕಾರಿ ಶಾಲೆಯೊಂದರಲ್ಲಿ ನಡೆದಿರುವ ಈ ಅಸ್ಪೃಶ್ಯತೆ ಮತ್ತು ಅಮಾನವೀಯ ಕೃತ್ಯವನ್ನು ಖಂಡಿಸಿ ವಿದುತಲೈ ಚಿರುತೈಗಲ್ ಕಚ್ಚಿ (VCK) ಪಕ್ಷವು ಹೋರಾಟಕ್ಕೆ ಮುಂದಾಗಿದೆ. ಪೊಲೀಸ್ ತನಿಖೆಯನ್ನು ಚುರುಕುಗೊಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ವಿಸಿಕೆ ಘೋಷಿಸಿದೆ.

ಶಿಕ್ಷಣದ ಮೂಲಕ ಸಮಾನತೆಯ ಪಾಠ ಹೇಳಬೇಕಾದ ಶಾಲೆಯಲ್ಲೇ ಇಂತಹ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ತನಿಖೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಷೇರುಪೇಟೆಯಲ್ಲಿ ಭಾರಿ ಕುಸಿತ: ಕರಗಿದ ಹೂಡಿಕೆದಾರರ ₹4.65 ಲಕ್ಷ ಕೋಟಿ ಸಂಪತ್ತು

ಸತತ ಏರಿಕೆಯ ಹಾದಿಯಲ್ಲಿದ್ದ ದೇಶದ ಷೇರುಪೇಟೆಯು ಸೋಮವಾರ ಭಾರಿ ಕುಸಿತ ಕಂಡಿದ್ದು,...

ಶಿವಮೊಗ್ಗ | ಸೇತುವೆ ಮರುನಿರ್ಮಾಣ : ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಸಿದ ಜಿಲ್ಲಾ ಎಸ್‌ಪಿ

ಶಿವಮೊಗ್ಗ ನಗರದ ತುಂಗಾ ಹಳೆ ಸೇತುವೆ ತೆರವುಗೊಳಿಸಿ, ಮರುನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ,...

ಉತ್ತರ ಪ್ರದೇಶ ಚುನಾವಣೆ: ಸೀಟು ಹಂಚಿಕೆಗೆ ಎಸ್‌ಪಿ–ಕಾಂಗ್ರೆಸ್ ಕಸರತ್ತು, ದೆಹಲಿಯಲ್ಲಿ ಎರಡು ದಿನಗಳ ಸಭೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಮಾತುಕತೆಗಾಗಿ ಸಮಾಜವಾದಿ...

ಭದ್ರಾವತಿ | ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ : ಮುಖ್ಯ ಶಿಕ್ಷಕಿ ಜ್ಯೋತಿ ಎನ್

ಭದ್ರಾವತಿ, ಹಳೆ ನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭದ್ರಾವತಿ ತಾಲ್ಲೂಕು...