ಬೀದರ ದಕ್ಷಿಣ ಮಡಿವಾಳ ಸಮಾಜ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ನವೆಂಬರ್ 22ರಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಲಬುರಗಿ ವಿಭಾಗೀಯ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಕಾರ್ಯಾಧ್ಯಕ್ಷ ದಿಗಂಬರ್ ಮಡಿವಾಳ ಹಾಗೂ ಪ್ರಮುಖರಾದ ಭೀಮಣ್ಣ ಬಾಲೂರ್, ಮಲ್ಲಿಕಾರ್ಜುನ ಕಾಪಲಾಪುರೆ ಮತ್ತು ನೀಲೇಶ್ ಯದ್ಲಾಪುರ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಮುಖಂಡರು ಮಾತನಾಡಿ, ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಮಾಜದ ಸಂಘಟನೆ, ಏಕತೆ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ನಿರೀಕ್ಷೆ ವ್ಯಕ್ತವಾಗಿದೆ. ಸರ್ಕಾರಿ ಸೌಲಭ್ಯಗಳು ಸೇರಿದಂತೆ ಸಮಾಜವು ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸಂಘಟಿಸುವಂತೆ ತಿಳಿಸಿದರು.
ಸಂಘದ ಗೌರವಾಧ್ಯಕ್ಷರಾಗಿ ಶಿವರಾಜ ಗುಂಡಪ್ಪಾ (ಹೊಕ್ರಾಣ), ಅಧ್ಯಕ್ಷರಾಗಿ ರಾಜಕುಮಾರ ಮಡಿವಾಳಪ್ಪಾ (ಬಾವಗಿ), ಕಾರ್ಯಾಧ್ಯಕ್ಷರಾಗಿ ಸಂತೋಷ ಶಿವರಾಯ (ಮೊಗದಾಳ), ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಪುಂಡಲಿಕಪ್ಪಾ (ಶೇಖಾಪೂರ), ಕಾರ್ಯದರ್ಶಿಯಾಗಿ ನಾಗಪ್ಪ ಬಾಬುರಾವ (ಖಾಶೆಂಪೂರ), ಖಜಾಂಚಿಯಾಗಿ ಭೀಮಾಶಂಕರ ಅಶೋಕ (ಸಂಗೋಳಗಿ) ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಮೇಶ ಮಡೆಪ್ಪಾ (ನಿರ್ಣಾ), ರಮೇಶ ಬಾಳಪ್ಪ (ಆಣದೂರವಾಡಿ ಮಾದರನಗರ), ಲೋಕೇಶ ರಾಮಣ್ಣಾ (ರೇಕುಳಗಿ), ಶಿವಕುಮಾರ ಮಡೆಪ್ಪಾ (ರಂಜೋಳಖೇಣಿ) ಹಾಗೂ ಘಾಳೆಪ್ಪ ಆಣದೂರ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಗಳಾಗಿ ಆನಂದಕುಮಾರ ಗುಂಡಪ್ಪಾ, ಗಂಗಾಧರ ಶಿವರಾಜ, ಮಲ್ಲಿಕಾರ್ಜುನ ಮಾರುತಿ, ಸಂಜುಕುಮಾರ ರತ್ನಪ್ಪಾ ಮಡಿವಾಳ ಹಾಗೂ ವಿನಾಯಕಕುಮಾರ ನಿಂಗಪ್ಪಾ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಸಂಭ್ರಮದ ತೆರೆ ಕಂಡ ಬೀದರ್ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: 12 ನಿರ್ಣಯ ಅಂಗೀಕಾರ
ಸಂಘಟನಾ ಕಾರ್ಯದರ್ಶಿಗಳಾಗಿ ಆನಂದ ಬಂಡೆಪ್ಪಾ, ಶರಣಬಸಪ್ಪಾ ಪ್ರಭು, ನಾಗೇಶ ಕಲ್ಲಪ್ಪಾ, ನೌನಾಥ ಕಾಶಿನಾಥ, ಪಂಢರಿ ಶರಣಪ್ಪಾ, ಸಾಗರ ಶರಣಪ್ಪಾ ಹಾಗೂ ಆಕಾಶ ಚಟ್ನಳಿ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘದ ನೂತನ ಸದಸ್ಯರಾಗಿ ಮಾರುತಿ, ಆಕಾಶ, ಶಾಂತಕುಮಾರ, ವಿಠಲ, ಸಂತೋಷ, ಲಾಲಪ್ಪ, ಭದ್ರೇಶ, ಲಕ್ಷ್ಮಣ, ಮಾರುತಿ ಹಾಗೂ ನವೀನ ಆಯ್ಕೆಯಾಗಿದ್ದಾರೆ.



