ಕೋಲಾರ | ಎಷ್ಟೇ ಖರ್ಚಾದರೂ ಪರವಾಗಿಲ್ಲ; ನಾನೇ ನಗರ ಸ್ವಚ್ಛಗೊಳಿಸುತ್ತೇನೆ : ಶಾಸಕ ಕೊತ್ತೂರು ಮಂಜುನಾಥ್ ಗರಂ

Date:

ನಗರದಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿದ್ದು, ನಗರಸಭೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಎಷ್ಟೇ ಖರ್ಚಾದರೂ ಪರವಾಗಿಲ್ಲ; ನಾನೇ ಕೊಡುತ್ತೇನೆ ಮಾಜಿ ನಗರಸಭೆ ಸದಸ್ಯರು, ಮುಖಂಡರ ಜೊತೆಗೂಡಿ ನಗರ ಸ್ವಚ್ಛಗೊಳಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ತಿಳಿಸಿದರು.

- Advertisement -

ನಗರದ ವಿವಿಧ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿ, ತ್ಯಾಜ್ಯ ವಿಲೇವಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಂತ ಹಣದಿಂದ ನಾನು ಕೊಳವೆಬಾವಿ ಹಾಕಿಸಿದರೂ ನಿರ್ವಹಣೆ ಮಾಡಲು ನಗರಸಭೆಗೆ ಯೋಗ್ಯತೆ ಇಲ್ಲ ಎಂದರೆ ಏನು? ಅಧಿಕಾರಿಗಳಿಂದ ನಾವು ಏನೂ ನಿರೀಕ್ಷೆ ಮಾಡುವುದಿಲ್ಲ, ಕಾಫಿ ಕೂಡ ತರಿಸಿಕೊಂಡು ಕುಡಿದಿಲ್ಲ. ಆದರೂ ಸರಿಯಾಗಿ ಕೆಲಸ ಮಾಡುವುದಿಲ್ಲ, ಮಾತು ಕೇಳುವುದಿಲ್ಲ. ಅಧಿಕಾರಿಗಳನ್ನು ದಂಡಿಸಲು, ಅಮಾನತುಗೊಳಿಸಲು ಅಧಿಕಾರ ಇಲ್ಲ, ಬೈಯ್ದರೆ, ಜೋರಾಗಿ ಮಾತನಾಡಿದರೆ ಬೇರೆ ಅರ್ಥ ಕಲ್ಪಿಸುತ್ತಾರೆ ಎಂದು ಹರಿಹಾಯ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಕಸ ವಿಲೇವಾರಿಗೆ ನಗರಸಭೆ ಬಳಿ ವಾಹನಗಳೇ ಇಲ್ಲ ಎಂಬುದಾಗಿ ಪೌರಕಾರ್ಮಿಕರು ಹೇಳುತ್ತಿದ್ದಾರೆ. ವಿಮೆ ಇಲ್ಲ, ಫಿಟ್‌ನೆಸ್‌ ಸರ್ಟಿಫಿಕೇಟ್‌ (ಎಫ್‌ಸಿ) ಇಲ್ಲವೆಂದು ನಗರಸಭೆಯ ಕೆಲ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ‌ಯಾವ ಮಟ್ಟಕ್ಕೆ ನಗರಸಭೆ ಆಯುಕ್ತರು ಬೇಜವಾಬ್ದಾರಿಯಿಂದ ಇದ್ದಾರೆ ಎಂಬುದನ್ನು ನೋಡಿ. ಈ ವಿಚಾರವನ್ನು ನಮಗೂ ತಿಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ನಗರಸಭೆ ಆಯುಕ್ತ ಸರಿಯಾಗಿ ಸ್ಪಂದಿಸುತ್ತಿಲ್ಲ. ತಿಂಗಳ ಹಿಂದೆ 32ನೇ ವಾರ್ಡ್‌ನ ಏಜಾಜ್‌ ಮನೆಗೆ ಹೋಗಿದ್ದೆ. ಬ್ಲಾಕ್‌ ಸ್ಟಾಟ್‌ ನೋಡಿ ಕಸ ತೆಗೆಯಲು ಸೂಚಿಸಿದ್ದೆ, ಎಂಎಲ್‌ಸಿ ಅನಿಲ್‌ ಕುಮಾರ್‌ ಕೂಡ ಗಮನಕ್ಕೆ ತಂದಿದ್ದರು. ಆದರೂ ನಗರಸಭೆಯಿಂದ ಕಸ ವಿಲೇವಾರಿ ಮಾಡುವ ಕೆಲಸ ನಡೆದಿಲ್ಲ. ಕೌನ್ಸಿಲ್‌ ಆಗಿದ್ದ ಫೈರೋಜ್‌ ತಾವೇ ಜೆಸಿಬಿ, ಟ್ರಾಕ್ಟರ್‌ ಮೂಲಕ ತೆರವುಗೊಳಿಸಿದ್ದರು. ಜನ ಮತ್ತೆ ಕಸ ಎಸೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಮುಖ್ಯ ರಸ್ತೆಯಲ್ಲೂ ತ್ಯಾಜ್ಯ ಎಸೆಯಲಾಗಿದ್ದು, ತೆರವುಗೊಳಿಸಲು ಹೇಳಿದ್ದೆ. ಆದರೂ ಕೆಲಸ ಮಾಡಿಲ್ಲ. ಕಾಲುವೆಗಳಲ್ಲೂ ಹೂಳು ತುಂಬಿಕೊಂಡಿದ್ದು, ಸ್ವಚ್ಛಗೊಳಿಸಿ 30 ವರ್ಷ ಆಗಿದೆ. ಆ ನಿಟ್ಟಿನಲ್ಲಿ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದರು

ಕಸ ಎಸೆಯುವವರಿಗೆ ಎಚ್ಚರಿಕೆ: ನಗರದಲ್ಲಿ ಬ್ಲಾಕ್‌ ಸ್ಟಾಟ್‌ ಇರುವಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಕಸ ಹಾಕಿದರೆ ₹ 5ರಿಂದ ₹ 20 ಸಾವಿರದವರೆಗೆ ಕಠಿಣ ದಂಡ ವಿಧಿಸಲಾಗುವುದು. ಅಲ್ಲದೇ, ವಾರ್ಡ್‌ವಾರು ನಾನೇ ವೇತನ ನೀಡಿ 10 ಮಂದಿ ಯುವಕರ ಪಡೆ ಕಟ್ಟುತ್ತಿದ್ದು, ಅವರು ನಿಗಾ ಇಡಲಿದ್ದಾರೆ. ಹೀಗಾಗಿ, ಜನರು ರಸ್ತೆಯಲ್ಲಿ ಕಸ ಎಸೆಯದೆ ನಗರಸಭೆ ವಾಹನಗಳಿಗೆ ಹಾಕಬೇಕು. ಕಸದ ಗಾಡಿಗಳು ತಮ್ಮ ವಾರ್ಡ್‌ಗೆ ಬಾರದಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.

ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ವಿಚಾರವನ್ನು ದೂರವಾಣಿ ಕರೆ ಮೂಲಕ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್‌ ಅವರ ಗಮನಕ್ಕೆ ತಂದರು.

ರಹಮತ್‌ ನಗರ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಅಭಿಯಾನ ನಡೆಯಿತು. ಜೆಸಿಬಿಗಳು, ಟಿಪ್ಪರ್‌ಗಳು, ಟ್ರಾಕ್ಟರ್‌ಗಳು ಸೇರಿದಂತೆ ಹತ್ತಾರು ವಾಹನಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ

ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ವೈ.ಶಿವಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮಾಜಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ನಗರಸಭೆ ಮಾಜಿ ಸದಸ್ಯರು ಕಾಂಗ್ರೆಸ್ ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ರಸ್ತೆ ದಾಟಲು ನಿಂತಾಗ ಬೈಕ್ ಡಿಕ್ಕಿ; ವೃದ್ಧ ಕೊನೆಯುಸಿರು

ರಸ್ತೆ ದಾಟಲು ನಿಂತಿದ್ದ ವೃದ್ಧರೊಬ್ಬರಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ...

ಗಿನ್ನಿಸ್‌ ಸೇರಿದ ʻಮಾಂಡ್ ಸೊಭಾಣ್‌ʼ ಕೊಂಕಣಿ ಸಂಸ್ಕೃತಿಯ ವಿಜಯ: ಡಾ. ರೊನಾಲ್ಡ್ ಕೊಲಾಸೊ

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ 'ಬಹು ಗಾಯಕರ...

ಮಳವಳ್ಳಿ | ವಿಷಮುಕ್ತ ಭೂಮಿಗೆ ಸಾವಯವ ಕೃಷಿ ಅನುಸರಿಸಿ: ಕೃಷಿಕರ ಸಂಘ ಮನವಿ

ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಮಳವಳ್ಳಿಯ, ಸಾತೇನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ...

ಹಾಸನ | ಕಾಡಾನೆ ದಾಳಿ: ಕಾರ್ಮಿಕ ಸಾವು; ಗ್ರಾಮಸ್ಥರ ಆಕ್ರೋಶ 

ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಸಾವನಪ್ಪಿರುವ ಘಟನೆ ನಡೆದಿದೆ....