ಅಯೋಧ್ಯೆ – ಬೆಂಗಳೂರು ವಿಮಾನಯಾನಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ

Date:

ಉತ್ತರ ಪ್ರದೇಶದ ಅಯೋಧ್ಯೆ – ಬೆಂಗಳೂರು ವಿಮಾನಯಾನಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ಇಂದು(ಜ.17) ಚಾಲನೆ ನೀಡಿದರು.

ಅಯೋಧ್ಯೆ ಮತ್ತು ಬೆಂಗಳೂರು, ಅಯೋಧ್ಯೆಯಿಂದ ಕೋಲ್ಕತ ಸಂಪರ್ಕಿಸುವ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ. ಅಯೋಧ್ಯೆಯಿಂದ ಬೆಂಗಳೂರಿಗೆ ಹಾರಾಡುವ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕ್ಕೆ  ಸಚಿವರು ಹಸಿರು ನಿಶಾನೆ ತೋರಿದರು.

ಆಯಾ ವಿಮಾನಗಳು ಸದ್ಯ ವಾರಕ್ಕೆ 3 ಬಾರಿ ಹಾರಾಟ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಂಧಿ ಪ್ರಣೀತ ರಾಮನೇ ಬೇರೆ; ಮೋದಿ ರಾಮನೇ ಬೇರೆ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಖನೌ ಮತ್ತು ವಾರಣಾಸಿಯಿಂದ ದೇಶೀಯ ಮತ್ತು ವಿದೇಶಿ ವಿಮಾನ ಸೇವೆಯನ್ನು ಒದಗಿಸಲಾಗುವುದು. ಇದೇ ಮಾರ್ಚ್​ 1 ರಿಂದ ಹೈದರಾಬಾದ್‌ನಿಂದ ವಾರಣಾಸಿಗೆ ವಿಮಾನ ಸಂಪರ್ಕ ಕಲ್ಪಿಸುತ್ತೇವೆ ಎಂದು ಸಿಂಧಿಯಾ ಹೇಳಿದರು.

ಟಿಕೆಟ್ ದರ

ಇಂದು ಚಾಲನೆ ಸಿಕ್ಕಿರುವ ವಿಮಾನ ವಾರದಲ್ಲಿ ಮೂರು ಬಾರಿ ಅಯೋಧ್ಯೆಯಿಂದ ಬೆಂಗಳೂರು ನಡುವೆ ಹಾರಾಡಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನಿಂದ  ಅಯೋಧ್ಯೆವರೆಗೆ ವಿಮಾನ ಟಿಕೆಟ್ ದರ 10 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿ ತನಕ ಇದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್​ ದರಲ್ಲಿ ಭಾರೀ ಏರಿಕೆಯಾಗಿದೆ. ಜನವರಿ 20ಕ್ಕೂ ಮುನ್ನವೇ ಎಲ್ಲ ವಿಮಾನಗಳ ಟಿಕೆಟ್ ಈಗಾಗಲೇ ಬುಕ್ ಆಗಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣ ಐಎನ್‌ಎಲ್‌ಡಿ ಅಧ್ಯಕ್ಷನ ಗುಂಡಿಕ್ಕಿ ಕೊಲೆ

ಅಪರಿಚಿತ ದುಷ್ಕರ್ಮಿಗಳು ಭಾರತ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಹರಿಯಾಣ ಘಟಕದ ಅಧ್ಯಕ್ಷ...

ರಷ್ಯಾ | ಉಕ್ರೇನ್ ಸೇನೆ ದಾಳಿಯಿಂದ ಭಾರತೀಯ ಸಾವು; ದುರಂತ ಪ್ರತ್ಯಕ್ಷ ಕಂಡ ಕರ್ನಾಟಕದ ನಿವಾಸಿ

ರಷ್ಯಾ – ಉಕ್ರೇನ್ ಗಡಿಯಲ್ಲಿನ ದೊನೆಸ್ಟಕ್‌ನಲ್ಲಿ ಉಕ್ರೇನ್ ಕೈಗೊಂಡ ಡ್ರೋನ್ ದಾಳಿಯಲ್ಲಿ...

ನ್ಯಾಯ ಯಾತ್ರೆ | ಸೀಟು ಹಂಚಿಕೆಯಾದ ಬೆನ್ನಲ್ಲೇ ರಾಹುಲ್ ಜೊತೆ ಹೆಜ್ಜೆ ಹಾಕಿದ ಅಖಿಲೇಶ್

ಉತ್ತರ ಪ್ರದೇಶದ ಆಗ್ರಾ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್...

ಜೆ-ಕೆಯಲ್ಲಿ ಚುನಾವಣೆಗಳನ್ನು ಸುಪ್ರೀಂ ಕೋರ್ಟ್‌ ಘೋಷಿಸಬೇಕಿರೋದು ನಾಚಿಕೆಗೇಡಿನ ಸಂಗತಿ: ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಕುರಿತು ಚುನಾವಣಾ ಆಯೋಗಕ್ಕಿಂತ ಹೆಚ್ಚಾಗಿ ಸುಪ್ರೀಂ...