ನೂತನ ಸಂಸತ್‌ ಭವನ ಉದ್ಘಾಟನೆ | ಆಹ್ವಾನ ಸ್ವೀಕರಿಸಿದ ಬಿಜೆಡಿ, ವೈಎಸ್‌ಆರ್‌ಸಿಪಿ

Date:

  • ನೂತನ ಸಂಸತ್‌ ಭವನ ಉದ್ಘಾಟನೆಗೆ ಕಾಂಗ್ರೆಸ್‌ ಸೇರಿ 20 ಪ್ರತಿಪಕ್ಷಗಳ ಬಹಿಷ್ಕಾರ
  • ಮೇ 28ಕ್ಕೆ ನಿಗದಿಯಾಗಿರುವ ಹೊಸ ಸಂಸತ್ತು ಕಟ್ಟಡದ ಉದ್ಘಾಟನಾ ಸಮಾರಂಭ

ನೂತನ ಸಂಸತ್ ಭವನ ಉದ್ಘಾಟನೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಜಟಾಪಟಿ ನಡುವೆ 2 ಪಕ್ಷಗಳು ಸಮಾರಂಭದ ಆಹ್ವಾನ ಸ್ವೀಕರಿಸಿವೆ.

ಹೊಸದಾಗಿ ನಿರ್ಮಾಣವಾಗಿರುವ ಸಂಸತ್‌ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಕಾಂಗ್ರೆಸ್‌ ಸೇರಿ 20 ಪ್ರತಿಪಕ್ಷಗಳು ಬಹಿಷ್ಕರಿಸಿವೆ.

ಈ ನಡುವೆ ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಮತ್ತು ಒಡಿಶಾದ ಆಡಳಿತ ಪಕ್ಷ ಬಿಜು ಜನತಾದಳ (ಬಿಜೆಡಿ) ನೂತನ ಸಂಸತ್‌ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಪತ್ರ ಮುಖೇನ ಎರಡೂ ಪಕ್ಷಗಳು ಬುಧವಾರ (ಮೇ 24) ತಿಳಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹೊಸ ಸಂಸತ್‌ ಭವನವು ಪ್ರಜಾತಂತ್ರದ ಸಂಕೇತವಾಗಿದೆ. ಎಲ್ಲ ರಾಜಕೀಯಕ್ಕಿಂತ ಇದು ಹೆಚ್ಚಿನದಾಗಿದೆ. ಸಂಸತ್ತಿನ ಅಧಿಕಾರ ಮತ್ತು ಸ್ಥಾನವನ್ನು ಎಂದಿಗೂ ರಕ್ಷಿಸಬೇಕು” ಎಂದು ಬಿಜೆಡಿ ವಕ್ತಾರ ಲೆನಿನ್ ಮೋಹಂತಿ ಪತ್ರದಲ್ಲಿ ಹೇಳಿದ್ದಾರೆ.

“ರಾಷ್ಟ್ರಪತಿಗಳು ರಾಜ್ಯಗಳ ಮುಖ್ಯಸ್ಥರಾಗಿದ್ದಾರೆ. ಸಂಸತ್ತು ಭಾರತದ 1.4 ಶತಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಎರಡೂ ಭಾರತೀಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆ. ಭಾರತದ ಸಂವಿಧಾನ ರಾಷ್ಟ್ರಪತಿ ಹಾಗೂ ಸಂಸತ್ತಿಗೆ ಅಧಿಕಾರ ನೀಡುತ್ತದೆ” ಎಂದು ಪತ್ರದಲ್ಲಿ ಬಿಜೆಡಿ ತಿಳಿಸಿದೆ.

ನೂತನ ಸಂಸತ್‌ ಭವನ ಉದ್ಘಾಟನೆಯಲ್ಲಿ ಪಾಲಗೊಳ್ಳುವುದಾಗಿ ವೈಎಸ್‌ಆರ್‌ಸಿಪಿ ಖಚಿತಪಡಿಸಿದೆ.

ಆಂಧ್ರಪ್ರದೇಶ ವಿಭಜನೆಯಾದ ನಂತರ 2014ರ ನಂತರ ಇತ್ತೀಚೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಪ್ರಮಾಣದ ಯೋಜನೆಯೊಂದನ್ನು ಅನುಮೋದಿಸಿದೆ.

ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಜೆಡಿಯು, ಎಎಪಿ, ಸಿಪಿಎಂ, ಸಿಪಿಐ, ಎಸ್‌ಪಿ, ಎನ್‌ಸಿಪಿ, ಶಿವಸೇನಾ (ಯುಬಿಟಿ), ಆರ್‌ಜೆಡಿ, ಐಯುಎಂಎಲ್‌, ಜೆಎಂಎಂ, ಎನ್‌ಸಿ, ಕೆಸಿ(ಎಂ), ಆರ್‌ಎಸ್‌ಪಿ, ವಿಸಿಕೆ, ಎಂಡಿಎಂಕೆ, ಆರ್‌ಎಲ್‌ಡಿ ಪಕ್ಷಗಳು ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿವೆ.

ಸಂಸತ್‌ ಭವನವನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಬೇಕು ಎಂದು ಪ್ರತಿಪಕ್ಷಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿವೆ.

ಈ ಸುದ್ದಿ ಓದಿದ್ದೀರಾ? ತಾಳಿ ಕಟ್ಟದೆ ಪರಾರಿಯಾಗಲು ಯತ್ನಿಸಿದ ವರ; 20 ಕಿಮೀ ಬೆನ್ನಟ್ಟಿ ಮಂಟಪಕ್ಕೆ ಕರೆತಂದ ವಧು

“ಹೊಸ ಸಂಸತ್ ಭವನದ ಉದ್ಘಾಟನೆ ಒಂದು ಮಹತ್ವದ ಸಂದರ್ಭ. ಆದರೆ ಸರ್ಕಾರವು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ. ನಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟಿದೆ. ರಾಷ್ಟ್ರಪತಿ ಮುರ್ಮು ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ಹೊಸ ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ಪ್ರಧಾನಿ ಮೋದಿಯವರ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ” ಎಂದು ಪ್ರತಿಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದವು.

ನೂತನ ಸಂಸತ್‌ ಭವನ ಕಟ್ಟಡದ ಉದ್ಘಾಟನೆಯನ್ನು ಭಾನುವಾರ (ಮೇ 28) ನಿಗದಿಪಡಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರದಲ್ಲಿ ಕಾಂಗ್ರೆಸ್ ಬಂದ್ರೆ ಮನೆಯ ಯಜಮಾನಿಗೆ ರೂ. 1 ಲಕ್ಷ ಜಮೆ, ರೈತರ ಸಾಲ ಮನ್ನಾ: ಸಿಎಂ ಸಿದ್ದರಾಮಯ್ಯ

"ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲಾ ಮೋದಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ....

ಮೋದಿ ಸುಳ್ಳುಗಳು: ಭಾಗ 2 | ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಮೋದಿ ಮಹಿಳೆಯರ ರಕ್ಷಣೆಗೆ ನಿಂತಿದ್ದಾರೆಯೇ?

ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ...

ಪ್ರಚಾರದ ಸಾಲು ಬದಲಿಸಲು ಹೇಳಿದ ಚುನಾವಣಾ ಆಯೋಗ; ಎಎಪಿ ಆಕ್ರೋಶ

ಲೋಕಸಭಾ ಚುನಾವಣೆಯ ಪ್ರಚಾರದ ಹಾಡಿನ ಸಾಲುಗಳನ್ನು ಮಾರ್ಪಡಿಸುವಂತೆ ಎಎಪಿ ಪಕ್ಷಕ್ಕೆ ಚುನಾವಣಾ...

ಹಾಸನ ಪೆನ್‌ಡ್ರೈವ್ ಪ್ರಕರಣ | ಎಸ್‌ಐಟಿ ತಂಡದ ಮುಖ್ಯಸ್ಥರಾಗಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇಮಕ

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ವಿಶೇಷ ತನಿಖಾ...