ಹಿಂಬಾಗಿಲ ಅಧಿಕಾರಕ್ಕೆ ಸುಗ್ರೀವಾಜ್ಞೆ ದಾಳ ಬಳಸಿದ ಬಿಜೆಪಿ; ‘ಗೋಕುಲ್’ನಲ್ಲಿ ಬಿಜೆಪಿ ನಡೆಗೆ ರೈತರ ಆಕ್ರೋಶ!

Date:

ಮಹಾರಾಷ್ಟ್ರದ ಅತಿ ದೊಡ್ಡ ಹಾಲು ಉತ್ಪಾದಕರ ಸಹಕಾರ ಸಂಘವಾದ ‘ಕೊಲ್ಹಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ’ (‘ಗೋಕುಲ್ ಡೈರಿ’) ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯ ಫಲಿತಾಂಶವನ್ನು ಬದಲಾಯಿಸಿ, ಅಧಿಕಾರವನ್ನು ಹಿಂಬಾಗಿಲ ಮೂಲಕ ಕಬಳಿಸಲು ಆಡಳಿತಾರೂಢ ಬಿಜೆಪಿ-ಶಿವಸೇನಾ ‘ಮಹಾಯುತಿ’ ಮೈತ್ರಿಕೂಟ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್, ರಾಜ್ಯ ಸರ್ಕಾರ ಹೊರಡಿಸಿರುವ ವಿವಾದಾತ್ಮಕ ಸುಗ್ರೀವಾಜ್ಞೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ.

- Advertisement -

ಇತ್ತೀಚೆಗೆ ನಡೆದ 25 ನಿರ್ದೇಶಕರ ಸ್ಥಾನಗಳ ಗೋಕುಲ್ ಡೈರಿ ಚುನಾವಣೆಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ಸತೇಜ್ ಪಾಟೀಲ್ ನೇತೃತ್ವದ ‘ರಾಜರ್ಷಿ ಶಾಹು ಶೇತ್ಕರಿ ಸಂವಿಚಾರಿ ಅಘಾಡಿ’ 13 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು. ಆಡಳಿತಾರೂಢ ಮಹಾಯುತಿ ಬೆಂಬಲಿತ ಪ್ಯಾನಲ್ 12 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿ ಸೋಲನುಭವಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

ಆದರೆ, ಈ ಸೋಲನ್ನು ಒಪ್ಪಿಕೊಳ್ಳದ ಮಹಾಯುತಿ ಸರ್ಕಾರ, ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಹಾರಾಷ್ಟ್ರ ಸಹಕಾರ ಸಂಘಗಳ ಕಾಯ್ದೆ-1960 ರ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿತು. ಈ ಕಾಯ್ದೆಯ ಪ್ರಕಾರ,  ₹500 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ಹೊಂದಿರುವ ಬೃಹತ್ ಫೆಡರಲ್ ಸಹಕಾರ ಸಂಸ್ಥೆಗಳಿಗೆ ರಾಜ್ಯ ಸರ್ಕಾರವು 5 ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಬಹುದು. ಈ ಪೈಕಿ 4 ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿದೆ. ಈ ಹೊಸ ಸುಗ್ರೀವಾಜ್ಞೆಯಿಂದಾಗಿ, ಆಡಳಿತ ಪಕ್ಷದ ಬೆಂಬಲಿತ 12 ನಿರ್ದೇಶಕರ ಸಂಖ್ಯೆಗೆ ಸರ್ಕಾರದ 4 ನಾಮನಿರ್ದೇಶಿತ ಸದಸ್ಯರ ಬಲ ಸೇರಿ ಮಹಾಯುತಿ ಬಲ 16ಕ್ಕೆ ಏರಿಕೆಯಾಗಲಿದೆ. ಇದರಿಂದ ಚುನಾವಣೆಯಲ್ಲಿ ಸೋತ ಬಿಜೆಪಿ ಮೈತ್ರಿಕೂಟ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಹಾದಿ ಸುಗಮವಾಗಿದೆ.

ಸರ್ಕಾರದ ಈ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ಸತೇಜ್ ಪಾಟೀಲ್ ಮತ್ತು ಇತರರು ಮುಂಬೈ ಹೈಕೋರ್ಟ್‌ನ ಕೊಲ್ಹಾಪುರ ಪೀಠದ ಮೊರೆ ಹೋಗಿದ್ದರು. ಹಿರಿಯ ನ್ಯಾಯವಾದಿ ಅಭೂಷೇಕ್ ಮನು ಸಿಂಘ್ವಿ ವಾದ ಮಂಡಿಸಿ, “ಇದು ಜನಾದೇಶವನ್ನು ಬುಡಮೇಲು ಮಾಡಲು ಮತ್ತು ಪ್ರಜಾಸತ್ತಾತ್ಮಕ ಶಕ್ತಿಯನ್ನು ಬದಲಾಯಿಸಲು ತಂದಿರುವ ರಾಜಕೀಯ ದುರುದ್ದೇಶದ ಸುಗ್ರೀವಾಜ್ಞೆ” ಎಂದು ವಾದಿಸಿದರು.

ಆದರೆ, ನ್ಯಾಯಮೂರ್ತಿ ನೀರಜ್ ಪಿ. ಧೋತೆ ಅವರಿದ್ದ ಪೀಠವು, ಸುಗ್ರೀವಾಜ್ಞೆಗೆ ತಡೆ ನೀಡಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಹೇಳಿ ಮಧ್ಯಂತರ ತಡೆ ಅರ್ಜಿ ತಿರಸ್ಕರಿಸಿತು.

ಹೈಕೋರ್ಟ್‌ನ ನಿರ್ದೇಶನಗಳ ಪ್ರಕಾರ,  ನವೆಂಬರ್ 10 ರಂದು ನಡೆಯಲಿರುವ ಗೋಕುಲ್ ಡೈರಿ ಅಧ್ಯಕ್ಷರ ಆಯ್ಕೆ ಸಭೆಯು ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಮತದಾನದ ನಂತರ ಆಯ್ಕೆಯಾದ 25 ನಿರ್ದೇಶಕರ ಮತಗಳು ಮತ್ತು 4 ಸರ್ಕಾರಿ ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಬೇಕು. ಮತಪತ್ರಗಳು, ನಡಾವಳಿ ಪುಸ್ತಕ ಮತ್ತು ಸಂಬಂಧಿತ ದಾಖಲೆಗಳನ್ನು ಭದ್ರವಾಗಿ ಕಾಯ್ದಿರಿಸಲು ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ.

ಇನ್ನು ಸರ್ಕಾರದ ಸುಗ್ರೀವಾಜ್ಞೆ ಮತ್ತು ಅಧಿಕಾರ ಕಬಳಿಸುವ ಯತ್ನದ ವಿರುದ್ಧ ಕೊಲ್ಹಾಪುರದಲ್ಲಿ ಸಾವಿರಾರು ಹಾಲು ಉತ್ಪಾದಕ ರೈತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಎಂಎಲ್‌ಸಿ ಸತೇಜ್ ಪಾಟೀಲ್ ನೇತೃತ್ವದಲ್ಲಿ ದಸರಾ ಚೌಕ್‌ನಿಂದ ಕೊಲ್ಹಾಪುರ ಕಲೆಕ್ಟರ್ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಈ ಪ್ರತಿಭಟನೆಯಲ್ಲಿ ರೈತ ನಾಯಕ ರಾಜು ಶೆಟ್ಟಿ, ಕಾಂಗ್ರೆಸ್ ಶಾಸಕ ವಿಶ್ವಜಿತ್ ಕದಮ್, ಲೋಕಸಭಾ ಸಂಸದರಾದ ವಿಶಾಲ್ ಪಾಟೀಲ್, ಧೈರ್ಯಶೀಲ ಮೋಹಿತೆ-ಪಾಟೀಲ್ ಮತ್ತು ಎನ್‌ಸಿಪಿ (ಎಸ್‌ಪಿ) ಶಾಸಕ ಜಯಂತ್ ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಸತೇಜ್ ಪಾಟೀಲ್ ಮಾತನಾಡಿ, “ಸರ್ಕಾರ ನೇಮಿಸಿರುವ 4 ನಾಮನಿರ್ದೇಶಿತ ಸದಸ್ಯರಾದ ಶಿವಾಜಿ ಅಡ್ನಾಯಕ್, ಡಾ. ಪ್ರವೀಣ್‌ಚಂದ್ರ ಹೆಂಗ್ರೆ, ಕೃಷ್ಣಾತ್ ಪಾಟೀಲ್ ಹಾಗೂ ಪ್ರಶಾಂತ್ ಪಟೋಲೆ ಅವರಲ್ಲಿ ಎಷ್ಟು ಜನರಿಗೆ ಎಮ್ಮೆಗಳಿವೆ ಅಥವಾ ಹಾಲಿನ ಡೈರಿ ಜ್ಞಾನವಿದೆ?” ಎಂದು ನೇರವಾಗಿ ಪ್ರಶ್ನಿಸಿದರು.

ಇನ್ನೊಂದೆಡೆ ಕ್ರಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭೀಜಿತ್ ದಿಪ್ಕೆ ವಿಡಿಯೋ ಸಂದೇಶದ ಮೂಲಕ ಆಕ್ರೋಶ ವ್ಯಕ್ತಪಡಿಸಿ, “ಪ್ರಜಾಸತ್ತಾತ್ಮಕ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಗೋಕುಲ್ ಡೈರಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ. ಹಾಲಿನ ಒಕ್ಕೂಟದ ಚುನಾವಣೆಯಲ್ಲೇ ಈ ಮಟ್ಟಕ್ಕೆ ಇಳಿಯುವ ಬಿಜೆಪಿ, ಸಾರ್ವತ್ರಿಕ ಚುನಾವಣೆಗಳಲ್ಲಿ ಜನಾದೇಶವನ್ನು ಹೇಗೆ ಕದಿಯಬಹುದು ಎಂಬುದಕ್ಕೆ ಇದೇ ಸಾಕ್ಷಿ” ಎಂದು ವಾಗ್ದಾಳಿ ನಡೆಸಿದ್ದಾರೆ.

₹4,000 ಕೋಟಿಗೂ ಅಧಿಕ ವಾರ್ಷಿಕ ವಹಿವಾಟು ಹೊಂದಿರುವ ಗೋಕುಲ್ ಡೈರಿಯ ಆಡಳಿತ ಚುಕ್ಕಾಣಿ ಯಾರ ಕೈಸೇರಲಿದೆ ಎಂಬುದು ನವೆಂಬರ್ 10ರ ಅಧ್ಯಕ್ಷರ ಆಯ್ಕೆ ಸಭೆ ಹಾಗೂ ಹೈಕೋರ್ಟ್‌ನ ಅಂತಿಮ ತೀರ್ಪಿನ ಮೇಲೆ ಅವಲಂಬಿತವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ ಬಹುರೂಪ

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ...

ಮೋದಿ, ಶಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಪ್ರಧಾನಿಯ ‘ವೈಚಾರಿಕ ನಕ್ಸಲರು’ ಹೇಳಿಕೆಗೆ ಬಘೇಲ್ ತಿರುಗೇಟು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ...

ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ದೊಡ್ಡ ಮುನಿಸೂ ಇಲ್ಲ,...

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ಭಾರೀ ರಿಯಾಯಿತಿ: ಸಿಎಂ ಡಿ ಕೆ ಶಿವಕುಮಾರ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ 2008ರ ಆಗಸ್ಟ್ 10ರ ಪೂರ್ವದಲ್ಲಿ...