ಪೌರತ್ವ ಕಾಯ್ದೆ ಜಾರಿ: ಕೇಂದ್ರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

Date:

ದೇಶದಾದ್ಯಂತ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ಇಂದು ಘೋಷಿಸಿದ ನಂತರ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಏಪ್ರಿಲ್-ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮವು ಜಾರಿಗೆ ಬಂದಿದ್ದು, ಇದೇ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

‘ಡಿಸೆಂಬರ್ 2019ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ತಿಳಿಸಲು ಮೋದಿ ಸರ್ಕಾರವು ನಾಲ್ಕು ವರ್ಷ ಮತ್ತು ಮೂರು ತಿಂಗಳುಗಳನ್ನು ತೆಗೆದುಕೊಂಡಿದೆ. ತಮ್ಮ ಸರ್ಕಾರವು ವ್ಯವಹಾರ ರೀತಿಯ ಮತ್ತು ಸಮಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿಕೊಳ್ಳುತ್ತಾರೆ. ಆದರೆ, ಸಿಎಎಗೆ ಸಂಬಂಧಿಸಿದ ನಿಯಮಗಳನ್ನು ತಿಳಿಸಲು ತೆಗೆದುಕೊಂಡ ಸಮಯವು ಪ್ರಧಾನಿಯವರ ಸುಳ್ಳುಗಳ ಮತ್ತೊಂದು ಪ್ರದರ್ಶನವಾಗಿದೆ’ ಎಂದು ಕಾಂಗ್ರೆಸ್‌ನ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಅವರು ತಮ್ಮ ಎಕ್ಸ್ ಕಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಚುನಾವಣಾ ಬಾಂಡ್ ವರದಿ ಸಲ್ಲಿಸಲು ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಮಾರ್ಚ್ 6ರ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದ ನಂತರ ಕೇಂದ್ರವು ಜನರ ಗಮನವನ್ನು ‘ಸೆಳೆಯಲು’ ಪ್ರಯತ್ನಿಸುತ್ತಿದೆ ಎಂದು ರಮೇಶ್ ಆರೋಪಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಎಲ್ಲ ಬೆಳವಣಿಗೆಗಳ ನಡುವೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ‘ಜನರು ಶಾಂತರಾಗಿರಿ ಮತ್ತು ವದಂತಿಗಳಿಂದ ದೂರವಿರಿ’ ಎಂದು ಮನವಿ ಮಾಡಿದರು.

‘ನೀವು ಆರು ತಿಂಗಳ ಹಿಂದೆ ನಿಯಮಗಳನ್ನು ತಿಳಿಸಬೇಕಿತ್ತು; ಯಾವುದೇ ಒಳ್ಳೆಯ ವಿಷಯಗಳಿದ್ದರೆ, ನಾವು ಯಾವಾಗಲೂ ಬೆಂಬಲಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ಆದರೆ ದೇಶಕ್ಕೆ ಒಳ್ಳೆಯದನ್ನು ಮಾಡದಿದ್ದರೆ, ಟಿಎಂಸಿ ಯಾವಾಗಲೂ ಧ್ವನಿ ಎತ್ತುತ್ತದೆ ಮತ್ತು ವಿರೋಧಿಸುತ್ತದೆ. ಇಂದಿನ ದಿನಾಂಕವನ್ನು ರಂಜಾನ್‌ಗೆ ಮುಂಚಿತವಾಗಿ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ನನಗೆ ತಿಳಿದಿದೆ’ ಎಂದು ಅವರು ಹೇಳಿದರು.

ಸೂಕ್ತ ಅರ್ಜಿ ಸಲ್ಲಿಕೆ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಹೆಗ್ಡೆ 

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಹೆಗ್ಡೆ ಮಾತನಾಡಿ, ಸಿಎಎ ನಿಯಮಗಳನ್ನು ತಿಳಿಸಲು ಸರ್ಕಾರಕ್ಕೆ ಸಮಯ ಸಿಗದಿರುವುದು ಆಶ್ಚರ್ಯಕರವಾಗಿದೆ. ಈ ಕಾಯಿದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಯಾವುದೇ ನಿರ್ದಿಷ್ಟ ತಡೆ ಇಲ್ಲ, ಕೆಲವು ಸಮಯದಿಂದ ಪ್ರಕರಣದ ವಿಚಾರಣೆ ನಡೆದಿಲ್ಲ. ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೂಕ್ತ ಅರ್ಜಿಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಸಿಎಎ ಅಸಂವಿಧಾನಕವಾಗಿದ್ದು, ಕೋರ್ಟ್‌ನ ಮುಂದೆ ಕಾಯ್ದೆ ಸಂಬಂಧ 400 ಅರ್ಜಿಗಳು ಬಾಕಿಯಿವೆ. ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪುಕೊಡುವ ಭರವಸೆಯಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ಅನಸ್ ತನ್ವೀರ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸರ್ಕಾರಿ ಪಾಲಿನ ಕಡಿತವನ್ನು ಸಹಿಸುವುದಿಲ್ಲ: ಕಾಂಗ್ರೆಸ್

12 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲನ್ನು ಶೇ.51ಕ್ಕಿಂತ ಕಡಿಮೆ ಮಾಡಲು...

ತಮಿಳುನಾಡು ರಾಜಕಾರಣ | ಕರುಣಾನಿಧಿ, ಸ್ಟಾಲಿನ್ ನಂತರ ಸಿಎಂ ಕುರ್ಚಿಯತ್ತ ಉದಯನಿಧಿ?

ತಮಿಳುನಾಡು ರಾಜಕಾರಣದಲ್ಲಿ ಎಂ ಕರುಣಾನಿಧಿ ಕುಟುಂಬದಿಂದ ಮೂರನೇ ತಲೆಮಾರು ರಾಜ್ಯದ ಚುಕ್ಕಾಣಿ...

ಆತ್ಮವಿಶ್ವಾಸ v/s ಸಂಘಟನೆ | ಯುಪಿ ಬಿಜೆಪಿ ಆಂತರಿಕ ಬೇಗುದಿಗೆ ಯೋಗಿ ತಲೆದಂಡವಾಗಲಿದೆಯೇ?

ಉತ್ತರ ಪ್ರದೇಶದ ಬಿಜೆಪಿಯಲ್ಲಿ ಆಂತರಿಕ ಕಲಹ ಮುನ್ನೆಲೆಗೆ ಬಂದಿದೆ. ಸಾಲದೆಂಬಂತೆ, ಯೋಗಿ...

ಉತ್ತರ ಪ್ರದೇಶ ರೈಲು ದುರಂತಕ್ಕೆ ಪ್ರಧಾನಿ, ರೈಲ್ವೆ ಸಚಿವರ ವಿರುದ್ಧ ಖರ್ಗೆ ಆಕ್ರೋಶ

ಚಂಡೀಗಢ - ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿದ ಘಟನೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ...