ತುಷಾರ್ ಕಪೂರ್ ಬೆನ್ನಲ್ಲೇ ಆಯುಷ್ಮಾನ್ ಖುರಾನಾಗೆ ಬೆದರಿಕೆ: ‘ಬಿಷ್ಣೋಯ್ ಗ್ಯಾಂಗ್’ ಹೆಸರಲ್ಲಿ ಹಫ್ತಾಗೆ ಬೇಡಿಕೆ

Date:

ಬಾಲಿವುಡ್‌ ತಾರೆಯರಿಗೆ ಬೆದರಿಕೆ ಕರೆಗಳ ಸರಮಾಲೆ ಮುಂದುವರಿದಿದ್ದು, ನಟ ತುಷಾರ್ ಕಪೂರ್ ಅವರಿಗೆ ಬೆದರಿಕೆ ಕರೆ ಬಂದ ಕೇವಲ ಒಂದು ದಿನದ ಅಂತರದಲ್ಲಿ ಮತ್ತೊಬ್ಬ ಜನಪ್ರಿಯ ನಟ ಆಯುಷ್ಮಾನ್ ಖುರಾನಾ ಅವರಿಗೂ ಹಫ್ತಾ ಬೇಡಿಕೆಯ ಬೆದರಿಕೆ ಸಂದೇಶ ಬಂದಿದೆ. ಬಂದಿರುವ ಆಡಿಯೋ ಸಂದೇಶದಲ್ಲಿ ಕರೆ ಮಾಡಿದ ವ್ಯಕ್ತಿ ತಾನು ಕುಖ್ಯಾತ ‘ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್’ಗೆ ಸೇರಿದವನೆಂದು ಹೇಳಿಕೊಂಡಿದ್ದು, ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.

- Advertisement -

ಮುಂಬೈ ಪೊಲೀಸರು ಮತ್ತು ಕ್ರೈಮ್ ಬ್ರಾಂಚ್ ತನಿಖಾ ತಂಡಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಡಿಯೋ ಕ್ಲಿಪ್‌ನ ಧ್ವನಿ ಮಾದರಿಯನ್ನು ತಾಂತ್ರಿಕವಾಗಿ ಪರಿಶೀಲಿಸುತ್ತಿವೆ. ಈ ಬೆದರಿಕೆ ಕರೆ ನಿಜವಾಗಿಯೂ ಬಿಷ್ಣೋಯ್ ಗ್ಯಾಂಗ್‌ನಿಂದ ಬಂದಿದೆಯೇ ಅಥವಾ ಗ್ಯಾಂಗ್‌ನ ಹೆಸರು ಬಳಸಿ ಕಿಡಿಗೇಡಿಗಳು ನಡೆಸುತ್ತಿರುವ ಹುಸಿ ಕರೆ ಅಥವಾ ಸುಲಿಗೆ ಯತ್ನವೇ ಎಂಬ ಆಯಾಮದಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ರಾಜಧಾನಿಯಲ್ಲಿ ಖಾಕಿ-ಕರಿ ಕೋಟ್ ಸಮರ; ಒಳಗಿನ ಹುಳುಕನ್ನು ಬೀದಿಗೆ...

ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ ಆರಂಭವಾದ ಈ ಜಗಳ, ಪೊಲೀಸ್ ಠಾಣೆಯೊಳಗೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಮತ್ತು ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಈ ಹೊತ್ತಿನಲ್ಲಿ ಈ...

ಇದನ್ನೂ ಓದಿ: ಭಯೋತ್ಪಾದಕ ಸಂಘಟನೆ ಸಾಲಿಗೆ ಬಿಷ್ಣೋಯ್ ಗ್ಯಾಂಗ್: ಕೆನಡಾ ಸರ್ಕಾರ ಘೋಷಣೆ

ಇದಕ್ಕೂ ಮುನ್ನ ನಟ ತುಷಾರ್ ಕಪೂರ್ ಅವರಿಗೆ ಕರೆ ಮಾಡಿದ್ದ ಹ್ಯಾರಿ ಬಾಕ್ಸರ್ ಎಂಬ ವ್ಯಕ್ತಿ, ತಾನು ಬಿಷ್ಣೋಯ್ ಗ್ಯಾಂಗ್‌ನ ಸಹಚರ ಎಂದು ಹೇಳಿಕೊಂಡು ₹5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ.

ಆದರೆ ಮುಂಬೈ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆ ಕರೆ ಹುಸಿ ಕರೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈಗ ಆಯುಷ್ಮಾನ್ ಖುರಾನಾಗೆ ಬಂದಿರುವ ಆಡಿಯೋಗೂ, ತುಷಾರ್ ಕಪೂರ್ ಅವರಿಗೆ ಬಂದ ಕರೆಗೂ ಏನಾದರೂ ಲಿಂಕ್ ಇದೆಯೇ ಎಂದೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ನಟ ಆಯುಷ್ಮಾನ್ ಖುರಾನಾ ಅಥವಾ ಅವರ ತಂಡದಿಂದ ಇನ್ನು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಬಾಲಿವುಡ್‌ನಲ್ಲಿ ಸತತವಾಗಿ ಇಂತಹ ಬೆದರಿಕೆಗಳು ಹೆಚ್ಚಾಗುತ್ತಿರುವುದು ನಟ-ನಟಿಯರಲ್ಲಿ ಮತ್ತು ಚಲನಚಿತ್ರ ರಂಗದಲ್ಲಿ ಆತಂಕ ಮೂಡಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು; ಭಾರತೀಯ ವಲಸಿಗರ ರಾಜಕೀಯ ಆಷಾಢಭೂತಿತನ!

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ...

ಶಿವಮೊಗ್ಗ | ಪೋಷಕರಾಗಲು ಅಡ್ಡದಾರಿಯಲ್ಲ; ಕಾನೂನು ಬದ್ಧ ದತ್ತು ಸ್ವೀಕಾರವೇ ಸರಿಯಾದ ಮಾರ್ಗ

ಮಕ್ಕಳ ಮಾರಾಟವು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಯಾವುದೇ ಅನಧಿಕೃತವಾಗಿ ಮಗುವನ್ನು ನೀಡುವುದು...

ರಾಜಧಾನಿಯಲ್ಲಿ ಖಾಕಿ-ಕರಿ ಕೋಟ್ ಸಮರ; ಒಳಗಿನ ಹುಳುಕನ್ನು ಬೀದಿಗೆ ತಂದಿತೇ ಪೊಲೀಸರ ಪ್ರತಿಭಟನೆ?

ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ ಆರಂಭವಾದ ಈ ಜಗಳ, ಪೊಲೀಸ್ ಠಾಣೆಯೊಳಗೇ...

ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ ರಾಹುಲ್ ಗಾಂಧಿ: ಮಾಜಿ ಸಿಎಂ ಬೊಮ್ಮಾಯಿ ಆರೋಪ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಒಬ್ಬ ಹತಾಶ ರಾಜಕಾರಣಿಯಂತೆ...